ಕೆ.ಎನ್.ಪಿ,ಗಜಲ್;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಗಜಲ್ ವಿಭಾಗದಲ್ಲಿ ವೀರನಗೌಡ ಪಾಟೀಲ (ಸಾಮ) ರವರ “ಈ ಪಾಪಿಯನ್ನ ಕ್ಷಮಿಸಿಬಿಡು” ಗಜಲ್ ಅನ್ನು ಪ್ರಕಟಿಸಲಾಗಿದೆ…ಸಹೃದಯರು ಗಜಲ್ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಈ ಪಾಪಿಯನ್ನ ಕ್ಷಮಿಸಿಬಿಡು

ನಿನ್ನ ಬಾಳು ಕಸಿದುಕೊಂಡ ಪಾಪಿಯನ್ನ ಕ್ಷಮಿಸಿಬಿಡು
ಕನಸಿನುಸಿರು ಕಸಿದುಕೊಂಡ ಪಾಪಿಯನ್ನ ಕ್ಷಮಿಸಿಬಿಡು ||

ಬೆಳಗ ಬರುವ ಸೂರ್ಯ ನಿನ್ನ ಪಾಲಿಗಿಲ್ಲವಾಗುವಂತೆ
ಗ್ರಹಣ ಮಾಡಿದಂಥ ಈ ಪಾಪಿಯನ್ನ ಕ್ಷಮಿಸಿಬಿಡು ||

ಒಲವಿನುಸಿರು ಹೊತ್ತು ಬರುವ ಘಳಿಗೆಗಾಗಿ ಕಾದುಕೂತ
ಒಲವೇ ನಿನಗೆ ವಿಷದ ಹಾಗೆ ಬಂದ ನನ್ನ ಕ್ಷಮಿಸಿಬಿಡು ||

ಏಳುಜನ್ಮ ಜೊತೆಯಲಿರುವೆನೆಂದು ಸಪ್ತಪದಿಯ ತುಳಿದು
ಮೊದಲಿನಡಿಗೇ ಓಡಿಹೋದ ಪಾಪಿಯನ್ನ ಕ್ಷಮಿಸಿಬಿಡು ||

ಬಾಳಿನಾಸೆಬಳ್ಳಿ ಚಿಗುರಿ ಹಬ್ಬಿ ಹೂವು ಮುಡಿವ ಮುನ್ನ
ಬೇರ್ಗಳನ್ನೇ ಕಿತ್ತು ಎಸೆದ ಪಾಪಿಯನ್ನ ಕ್ಷಮಿಸಿಬಿಡು ||

ಒಲುಮೆಯಿಂದ ಕೂತು ನಲುಮೆವಾತು ಆಡಿ ಕೂಡಲಿಲ್ಲ
ಸೌಖ್ಯ ನೀಡಲಾಗದಿರುವ ಪಾಪಿಯನ್ನ ಕ್ಷಮಿಸಿಬಿಡು ||

ನನ್ನ ತಪ್ಪಿನರಿವು ನನಗೆ ‘ಸಾಮ’ನಿಂದ ತಿಳಿದುದಾಯ್ತು
ಮತ್ತೆ ಮತ್ತೆ ಬೇಡುವೆ ಈ ಪಾಪಿಯನ್ನ ಕ್ಷಮಿಸಿಬಿಡು ||

-ವೀರನಗೌಡ ಪಾಟೀಲ (ಸಾಮ)
ಸೋಮನಕಟ್ಟಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.