ಕೆ.ಎನ್.ಪಿ.ಕವಿತೆ,ಜೂ.11;
ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ ಕವಿ ಬಸವರಾಜ ಕಾಸೆ ಅವರ ಗಜಲ್ ಪ್ರಕಟಿಸಲಾಗಿದೆ. ಸಹೃದಯರು ಗಜಲ್ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ/ ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.
ಗಜಲ್ : ತೂರಿ ಹೋಗಿವೆ ನೂರು ನೋವುಗಳು
ಆಹಾ! ಅಬ್ಬಬ್ಬಾ ಇದರಲ್ಲಿ ಏನಿದೆ ಹೇಳೆ ನಾ ಕಾಣೆ ಸಾಕಿ/
ಮೈ ಧಗೆ ಹೆಚ್ಚಿ ಜಗ ಮರೆಸುವ ಸುಖ ಖಾತ್ರಿ ಕಣೆ ಸಾಕಿ//
ಕುಲುಕಿ ತಿರುಗಿಸಿ ಬಿಚ್ಚುವ ಸೀಸೆಯ ಹಣೆ ಮಧುರ ಮೈತ್ರಿ/
ನೆಂಚಲು ಸುಟ್ಟ ಕೋಳಿ ಕುದಿಸಿದ ಕಾಲು ಸೂಪು ಬೆಣ್ಣೆ ಸಾಕಿ//
ಪ್ರತಿ ಗುಟುಕಿಗೆ ತೂರಿ ಹೋಗಿವೆ ನೂರು ನೋವುಗಳು/
ಹೊರ ಬರಲು ತುಳುಕುವ ಮಾತು ಮನದ ಮಿಣುಕು ಸಾಣೆ ಸಾಕಿ//
ಒಳ ದೇಗುಲ ಸ್ಪರ್ಶಿಸಿದ ಹನಿಗಳು ಕಡೆದ ಕಡಲ ಪಂಚಾಮೃತ/
ವೇದನೆ ತಾಳದೆ ಮಾಯವಾದ ಕಷ್ಟಗಳಿಗೆ ಈ ಎಣ್ಣೆ ಹೊಣೆ ಸಾಕಿ//
ಕುಡಿತದ ಮಹಿಮೆ ವೇದಗಳ ಸಾರ ಇನ್ನೆಲ್ಲಿಯ ರಾಮಾಯಣ/
ಸುರಪಾನ ಸೇವನೆ ದೇವತೆಗಳ ಬಳುವಳಿ ಹಾಕುತ್ತಿರು ಮಣೆ ಸಾಕಿ//
ಮಹಾ ಮಹಿಳೆಯರೆ ಮಂಡಿ ಉರಿ ಪಾವನವಾದರು ಪುಣ್ಯಾತ್ಮರು/
ಬಸುನ ಅಮಲೇರಿಸುವ ನೀ ಹೆಂಡತಿಗಿಂತ ಪ್ರಿಯ ಜಾಣೆ ಸಾಕಿ//
- ಬಸವರಾಜ ಕಾಸೆ
ನಿಮ್ಮ ಕವಿತೆಗಳನ್ನು ಕೂಡ ಕಳುಹಿಸಬಹುದು.
9513326661
ನೀವು ಕೂಡ ಬರೆಯಬಹುದು :
ಆತ್ಮೀಯರೇ ಕೆ.ಎನ್.ಪಿ.ಯಲ್ಲಿ ನೀವು ಕೂಡ ಬರೆಯಬಹುದಾಗಿದೆ. ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆಯಿರಿ, ಕೆ.ಎನ್.ಪಿ.ಗೆ ಕಳುಹಿಸಿರಿ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.