ಕೆ.ಎನ್.ಪಿ.ವಾರ್ತೆ,ಮುಂಡರಗಿ,ನ.07;

ಎನಾದರಾಗಬಹುದು ಬಸವಣ್ಣನಾಗಬಾರದಯ್ಯ. ಯಾಕೆಂದರೆ ಬಸವಣ್ಣ ಆಗಲಿಕ್ಕೆ ಆಗುವದಿಲ್ಲ ಹಾಗೇ ಕರ್ನಾಟಕದಲ್ಲಿ ಯಾರುಬೇಕಾದರು ಸ್ವಾಮಿಯಾಗಬಹುದು ಆದರೆ ಗದಗಿನ ಸಿದ್ಧಲಿಂಗ ಸ್ವಾಮಿಗಳು ಆಗಲಿಕ್ಕೆ ಆಗುವದಿಲ್ಲ ಎಂದು ಮುಂಡರಗಿ ತೊಂಟದಾರ್ಯ ಶಾಖಾಮಠದ ನಿಜಗುಣಾನಂದ ಸ್ವಾಮಿಗಳು ಹೇಳಿದರು.

ಮಂಗಳವಾರ ಮುಂಡರಗಿಯ ತೋಂಟದಾರ್ಯ ಮಠದಲ್ಲಿ ಸಿದ್ಧಲಿಂಗೇಶ್ವರಸ್ವಾಮಿಗಳ ಪ್ರಥಮ ಪುಣ್ಯಸ್ಮರಣೋತ್ಸವದಲ್ಲಿ ನುಡಿನಮನದ ಆಶೀರ್ವಚನ ನೀಡಿ, ಮಾತನಾಡಿದರು.

೨೧ನೇ ಶತಮಾನದಲ್ಲಿ ಅತಿ ಅದ್ಬುತ ವ್ಯಕ್ತಿಯನ್ನು ಕಂಡವರು ನಾವು, ಶಬ್ಧ ಜಗತ್ತನ್ನು ಆಳುತ್ತದೆ ಅಂದವರು ಅವರು, ಮನುಷ್ಯ ಘರ್ಷಣೆಗೆ ಒಳಾಗಾಗಬೇಕು ಸಂಬಂಧಗಳಿಗಲ್ಲಾ. ಹಾಗೇ ಅವರು ಎಲ್ಲರ ಜೊತೆ ಘರ್ಷಣೆಯಲ್ಲಿದ್ರೂ ಸಂಬಂಧ ಕಳೆದುಕೊಳ್ಳಲಿಲ್ಲ.

ಸಾಮಾನ್ಯವಾಗಿ ಸ್ವಾಮಿಗಳಿಗೆ ನಿರಂಜನ ಸ್ವರೂಪಿ, ಷಟಸ್ಥಲ ಬ್ರಹ್ಮಿ, ಘನಲಿಂಗ ಚಕ್ರವರ್ತಿ, ಸದ್ಗುರು ಅಂತ ಪದಗಳನ್ನು ಬಳಸೋದು ಕಂಡಿದ್ದೇವೆ, ಆದ್ರೇ, ಆತ್ಮಸ್ಮರಣಿಯರಾದ ಸಿದ್ಧಗಂಗಾ ಶ್ರೀಗಳು ತ್ರಿವಿಧ ದಾಸೋಹಿಗಳಾಗಿದ್ದರು.

ಅವರ ಮಠದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಅತಿ ಅಧ್ಬುತವಾದ ಪದ “ತಪೋಧನರು” ಎಂಬ ಪದವನ್ನು ತೋಂಟದ ಸಿದ್ಧಲಿಂಗಸ್ವಾಮಿಗಳಿಗೆ ಬಳಸಿದ್ದರು. ಈ ಪದಕ್ಕೆ ಎಂ.ಎ.ಕಲಬುರ್ಗಿ ಅಧ್ಯಾಯನವನ್ನು ನಡೆಸಿದ್ದರು ಎಂದರು. 

ಪೂಜ್ಯರ ಹತ್ತಿರ ಪಳಗಿದ ಎಂತೆಂತ ರಾಜಕಾರಣಿಗಳು, ಸಾಹಿತಿಗಳು, ಸ್ವಾಮಿಗಳು, ಪೂಜ್ಯರ ಭಾಷಣದ ಅನುಕರಣೆಯಾಗಿದ್ದಾರೆೆ. ಗದುಗಿನ ಸ್ವಾಮಿಗಳು ಆಗಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ.

ಅವರು ಹೋದ ಮೇಲೆ ಸಾಕಷ್ಟು ಸ್ವಾಮಿಗಳು ನಿದ್ರೆ ಮಾಡಿದ್ದಾರೆ, ಯಾವ್ಯಾವ ಸ್ವಾಮಿಗಳ ಕೀಲಿ ಎಷ್ಟು ನಾಡಿ ಎಷ್ಟು ಅಂತ ತಿಳಿದವರು, ಸಿದ್ಧಲಿಂಗಸ್ವಾಮಿಗಳು ಮದರ್ ಕ್ಯಾಸೆಟ್ ಇದ್ದಂಗ.

ಸಂಪ್ರದಾಯದ ಸನಾತನ ವಾದಿಗಳು ಅವರ ಬಗ್ಗೆ ಒಳಒಳಗೆ ಕುಹಕದ ಮಾತಗಳನ್ನು ಆಡುತ್ತಿದ್ದರು, ಬಸವ ತತ್ವಕ್ಕೆ ವಿರೋಧವಾಗಿದ್ದ ವೈಧಿಕ ಸಂಪ್ರಾಯದ ಸಿಂದಿಗಿಮಠ ಹಾಳಾಗಿ ಹೋಗುವಾಗ ಶ್ರೀಗಳು ಮಠ ಉಳಿಸಿದ್ರು.

ಮಹಾತ್ಮರು ಇದ್ದಾಗ ಯಾರು ಗಮನ ಹರಿಸೊಲ್ಲ, ಸತ್ತಾಗ ಸಮಾದಿ ಮೇಲೆ ಗುಡಿಕಟ್ತಾರ ರೊಕ್ಕ ದುಡಿತಾರ. ಬಸವಣ್ಣನನ್ನು ಕಲ್ಯಾಣದಲ್ಲಿ ಓಡಿಸಿದ ಮಂದಿ ಈಗ ಎಲ್ಲಾ ರಾಜಕೀಯದವರು ಬಸವಣ್ಣನ ಪೋಟೋಕ್ಕೆ ಹಾರ ಹಾಕಿ ಬಸವಣ್ಣನವರಿಗೆ ಜೈಕಾರ ಹಾಕ್ತಾರೆ.

ಅಧಿಕಾರ ಬಂದಮೇಲೆ ಸಂಪ್ರದಾಯ ಸನಾತನ ಜಾಂಡ ಏರಿಸಿಬಿಡ್ತಾರ ಎಷ್ಟು ನಾಟಕ ಇದೆ ಅಧಿಕಾರಕ್ಕಾಗಿ ಈ ಜಗತ್ತಿನಲ್ಲಿ ಎಂದು ಶ್ರೀಗಳ ಬಗ್ಗೆ ನುಡಿದು ಅವರ ವಿಚಾರಧಾರೆಯನ್ನು ನೆನೆದು ನಾವು ಯಾರಿಗೂ ಕಾಂಪ್ರಮೇಜ್ ಆಗುದಿಲ್ಲ ಎಂದು ಮುಂಡರಗಿ ತೋಂಟದಾರ್ಯ ಶಾಖಾಮಠದ ನಿಜಗುಣಾನಂದ ಸ್ವಾಮಿಗಳು ಹೇಳಿದರು.

ಇದೇ ವೇಳೆ ಮಾತನಾಡಿದ ಮಹಾಂತಸ್ವಾಮಿಗಳು, ಎಲ್ಲಿಂದ ಪ್ರಾರಂಭ ಮಾಡಬೇಕು ಎಲ್ಲಿಗೆ ತಂದು ನಿಲ್ಲಿಸ ಬೇಕು ತಿಳಿಯಂಗಿಲ್ಲ. ತೋಂಟದ ಸಿದ್ದಲಿಂಗಸ್ವಾಮಿಗಳ ಬಗ್ಗೆ.

ಇವರು ಅಖಂಡ ಪಾಂಡಿತ್ಯವನ್ನು ಸಂಪಾದಿಸಿದವರು, ಕನ್ನಡದ ಕಣ್ಮಣಿ ಸ್ವಾಮಿಗಳೆಂದರೆ ಅದು ಗದಗಿನ ಸಿದ್ಧಲಿಂಗ ಸ್ವಾಮಿಗಳು ಎಂದು ಶ್ರೀಗಳನ್ನು ನುಡಿನಮನದ ಮೂಲಕ ಮಹಾಂತಸ್ವಾಮಿಗಳು ದೆಹಲಿ ಇವರು ಸ್ಮರಿಸಿಕೊಂಡರು.

ಕಾರ್ಯಕ್ರಮದಲ್ಲಿ ಡಾ|| ತೋಂಟದ ಸಿದ್ಧರಾಮಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು.

ಮಲ್ಲಿಕಾರ್ಜುನ ಮಹಾಸ್ವಾಮಿಗಳು ಅಲ್ಲಮ ಪ್ರಭು ಆಶ್ರಮ ಜನವಾಡ, ಅಥಣಿ, ಬಾಬುಲಾಲ್ ರಾಣಮಲ್ಲ ಜೈನ್ ಶ್ರೇಷ್ಠ ವರ್ತಕ ಪ್ರಶಸ್ತಿ ಪುರಸ್ಕೃತರು, ಶಿಲ್ಪಾ ಕುದರಗೊಂಡ ವಿಜಯಪುರ ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳು ಇತರರು ಭಾಗವಹಿಸಿದ್ದರು.

ವರದಿ : ಕೋಗಳಿ ಶೇಖರ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.