ಕೆ.ಎನ್.ಪಿ.ವಾರ್ತೆ,ಹೊಸಪೇಟೆ,ಡಿ.30;

ಜ. 10 ಹಾಗೂ 11 ರಂದು ನಡೆಯಲಿರುವ ಐತಿಹಾಸಿಕ ಹಂಪಿ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಮತ್ಸ್ಯ ಮೇಳ ಆಯೋಜಿಸಲಾಗುತ್ತಿದೆ.

ಹಂಪಿಯ ಎದುರು ಬಸವಣ್ಣ ಮಂಟಪ ಪಕ್ಕದಲ್ಲಿ ನಡೆಯಲಿರುವ ಮೇಳದಲ್ಲಿ ಅಲಂಕಾರಿಕ ಮೀನುಗಳು ಸೇರಿ 100 ಬಗೆಯ ಮೀನುಗಳನ್ನು ಕಾಣಬಹುದಾಗಿದೆ.

ತುಂಗಭದ್ರಾ ಜಲಾಶಯ, ಈ ಭಾಗದ ಜನರ ಜೀವನಾಡಿಯಾಗಿದೆ. ಮೀನುಗಾರಿಕೆ ಉತ್ತೇಜಿಸಲು ಮತ್ಸ್ಯ ಮೇಳ ಸಹಕಾರಿಯಾಗಲಿದೆ ಎಂಬುದಾಗಿ ಬಳ್ಳಾರಿ ಜಿಲ್ಲಾಧಿಕಾರಿ ಎಸ್‌ಎಸ್‌ ನಕುಲ್‌ ಹೇಳಿದ್ದಾರೆ.

ಟನೆಲ್‌ ಅಕ್ವೇರಿಯಂ ಮಾದರಿಯನ್ನು ಹಂಪಿ ಉತ್ಸವದಲ್ಲಿ ತಯಾರಿಸುತ್ತಿರುವುದು ವಿಶೇಷ. ಮೈಸೂರು ದಸರಾದಲ್ಲಿ ಇಂತಹ ಮಾದರಿ ನೋಡುಗರ ಕಣ್ಮನ ಸೆಳೆಯುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.

ಮೀನುಗಳ ಪ್ರದರ್ಶನ

ಉಪ್ಪು ಹಾಗೂ ಶುದ್ಧ ನೀರಿನಲ್ಲಿ ಜೀವಿಸುವ ಮೀನುಗಳು ಈ ಮೇಳದಲ್ಲಿ ಇರಲಿವೆ. ಫಿರಾನ್‌ ಫಿಶ್‌, ಏಂಜೆಲ್‌ ಫಿಶ್‌, ಲಯನ್‌ ಹೆಡ್‌ ಸೇರಿ ಹಲವು ಪ್ರಬೇಧದ ಮೀನುಗಳನ್ನು ಪ್ರದರ್ಶಿಸಲಾಗುತ್ತಿದ್ದು, ಮತ್ಸ್ಯಪ್ರಿಯರ ಕುತೂಹಲ ತಣಿಸಲು ಜಿಲ್ಲಾಡಳಿತ ಮುಂದಾಗಿದೆ.

ಮಂಗಳೂರು, ಕಾರವಾರದಿಂದ ಉಪ್ಪು ನೀರಿನ ಮೀನುಗಳು, ಬೆಂಗಳೂರು, ಚೆನ್ನೈ ಭಾಗದಿಂದ ಸಿಹಿನೀರಿನ ಮೀನುಗಳನ್ನು ತರಿಸಲಾಗುತ್ತಿದೆ. ಮತ್ಸ್ಯ ಮೇಳದಲ್ಲಿ ಮೀನುಗಾರಿಕೆ ಪ್ರೋತ್ಸಾಹಿಸಲು ಸರಕಾರಿ ಸೌಲಭ್ಯಗಳ ಮಾಹಿತಿಯನ್ನೂ ಪ್ರದರ್ಶಿಸಲಾಗುತ್ತದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.