ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜ.05;

ಕಳೆದ ದಶಕದ ಕೊನೆಯ ಸೂರ್ಯಗ್ರಹಣ ದರ್ಶನವಾದ ಬಳಿಕ ಈ ವರ್ಷದ ಮೊದಲ ಚಂದ್ರಗ್ರಹಣದ ವೀಕ್ಷಣೆಗೆ ಕುತೂಹಲ ಮೂಡಿದೆ. 2020ರ ಮೊದಲ ಚಂದ್ರಗ್ರಹಣ ಜ.10ರಂದು ಉಂಟಾಗಲಿದೆ. ಚಂದ್ರಗ್ರಹಣವು ಸುಮಾರು ನಾಲ್ಕು ಗಂಟೆ ಐದು ನಿಮಿಷದ ಅವಧಿಯವರೆಗೆ ಇರಲಿದ್ದು, ಭಾರತದಲ್ಲಿ ಗೋಚರವಾಗಲಿದೆ.

ಮೂಲಗಳ ಪ್ರಕಾರ, ಭಾರತದಲ್ಲಿ ಚಂದ್ರಗ್ರಹಣವು ರಾತ್ರಿ 10.37ರಿಂದ ನಸುಕಿನ 2.42ರವರೆಗೂ ಸಂಭವಿಸಲಿದೆ. ಚಂದ್ರಗ್ರಹಣದ ವೇಳೆ ಚಂದ್ರನ ಮೇಲ್ಮೈನ ಶೇ 90ರಷ್ಟು ಭಾಗವು ಭೂಮಿಯಿಂದ ಭಾಗಶಃ ಮುಚ್ಚಿರುವುದರಿಂದ ಅದರ ಹೊರಭಾಗದ ನೆರಳು ಮಾತ್ರ ಗೋಚರವಾಗುತ್ತದೆ.

ಏಷ್ಯಾ, ಆಫ್ರಿಕಾ ಮತ್ತು ಯುರೋಪ್ ಖಂಡಗಳಲ್ಲಿನ ದೇಶಗಳಲ್ಲಿ ಚಂದ್ರಗ್ರಹಣ ಗೋಚರಿಸಲಿದೆ. ಈ ಖಂಡಗಳಲ್ಲದೆ ಆಸ್ಟ್ರೇಲಿಯಾದಲ್ಲಿ ಕೂಡ ಚಂದ್ರಗ್ರಹಣ ಕಾಣಿಸಲಿದೆ. ಭಾರತದ ಬಹುತೇಕ ಎಲ್ಲ ನಗರಗಳಲ್ಲಿಯೂ ಇದನ್ನು ನೋಡಬಹುದಾಗಿದೆ.

ಬರಿಗಣ್ಣಿನಿಂದ ನೋಡಬಹುದು

ಸೂರ್ಯಗ್ರಹಣದಂತೆ ಚಂದ್ರಗ್ರಹಣ ಅಪಾಯಕಾರಿಯಲ್ಲ. ಇದನ್ನು ಬರಿಗಣ್ಣಿನಿಂದ ನೋಡಬಹುದಾಗಿದೆ. ಇದು ಕೇವಲ ಆಕಾಶದಲ್ಲಿ ಜರಗುವ ವಿದ್ಯಮಾನವಾದರೂ ಭಾರತೀಯರು ಅದರ ಕುರಿತು ಅನೇಕ ಧಾರ್ಮಿಕ ಮತ್ತು ಆಚರಣೆಯ ನಂಬಿಕೆಗಳನ್ನು ಹೊಂದಿದ್ದಾರೆ.

ಚಂದ್ರಗ್ರಹಣವು ಉದ್ಯೋಗ, ವ್ಯವಹಾರ, ಆರೋಗ್ಯ ಮುಂತಾದವುಗಳಿಗೆ ಶುಭಕರ ಎಂದು ಕೆಲವರು ಭಾವಿಸಿದ್ದರೆ, ಇನ್ನು ಕೆಲವರು ಗ್ರಹಣವು ಅಮಂಗಳಕರ ಎಂದು ಪರಿಗಣಿಸಿದ್ದಾರೆ. ಇದೇ ರೀತಿಯ ಅರೆನೆರಳಿನ ಚಂದ್ರಗ್ರಹಣಗಳು ಈ ವರ್ಷ ಜೂನ್ 5, ಜುಲೈ 5 ಮತ್ತು ನವೆಂಬರ್ 30ರಂದು ಸಂಭವಿಸಲಿವೆ.

ಅರೆನೆರಳಿನ ಚಂದ್ರಗ್ರಹಣ

ಚಂದ್ರಗ್ರಹಣದಲ್ಲಿ ಮೂರು ವಿಧಗಳಿವೆ. ಸಂಪೂರ್ಣ, ಭಾಗಶಃ ಮತ್ತು ಅರೆನೆರಳಿನ ಚಂದ್ರಗ್ರಹಣ. ಈ ಬಾರಿ ಸಂಭವಿಸುವುದು ಅರೆನೆರಳಿನ ಚಂದ್ರಗ್ರಹಣವಾಗಿದೆ.

ಇಲ್ಲಿ ಸೂರ್ಯ, ಭೂಮಿ ಮತ್ತು ಚಂದ್ರ ಸಂಪೂರ್ಣವಾಗಿ ಒಂದೇ ನೇರದಲ್ಲಿ ಬರುವುದಿಲ್ಲ. ಸೂರ್ಯನ ಕಿರಣಗಳು ನೇರವಾಗಿ ಚಂದ್ರನ ಮೇಲೆ ಬೀಳುವುದಕ್ಕೆ ಭೂಮಿ ಅಡ್ಡಿಪಡಿಸುತ್ತದೆ. ಜತೆಗೆ ಚಂದ್ರನ ಸಂಪೂರ್ಣ ಅಥವಾ ಕೆಲವು ಭಾಗವನ್ನು ಮುಚ್ಚುತ್ತದೆ. ಹೊರಭಾಗವನ್ನು ತನ್ನ ನೆರಳಿನಿಂದ ಆವರಿಸುತ್ತದೆ. ಭೂಮಿಯ ನೆರಳಿನ ದಟ್ಟ ಭಾಗಕ್ಕಿಂತಲೂ ಇದು ಅಸ್ಪಷ್ಟವಾಗಿರುತ್ತದೆ

ತೋಳ ಚಂದ್ರಗ್ರಹಣ

ಈ ಚಂದ್ರಗ್ರಹಣವು ಬೂದು ಬಣ್ಣದಲ್ಲಿ ಕಾಣಿಸುತ್ತದೆ. ಹೀಗಾಗಿ ಇದಕ್ಕೆ ತೋಳ ಚಂದ್ರಗ್ರಹಣ ಎಂದು ಕರೆಯಲಾಗಿದೆ. ಮುಂದಿನ ಸಂಪೂರ್ಣ ಚಂದ್ರಗ್ರಹಣ 2021ರ ಮೇ 26ರಂದು ಸಂಭವಿಸಲಿದೆ.

ಇದು ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್ ಸಾಗರ ಮತ್ತು ಅಮೆರಿಕದಲ್ಲಿ ಕಾಣಿಸಲಿದೆ. ಇದರ ಬಳಿಕ 2021ರ ನವೆಂಬರ್ 19ರಂದು ಭಾಗಶಃ ಚಂದ್ರಗ್ರಹಣ ಉಂಟಾಗಲಿದೆ. ಇದು ಉತ್ತರ ಮತ್ತು ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಮತ್ತು ಯುರೋಪ್ ಹಾಗೂ ಏಷ್ಯಾದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.