ಕೆ.ಎನ್.ಪಿ.ವಾರ್ತೆ,ಸಿನಿಸಮಾಚಾರ,ಡಿ.22;

66ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಿನ್ನೆ ಚೆನ್ನೈನಲ್ಲಿ ನಡೆದಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ.

ಕನ್ನಡದಲ್ಲಿ ಯಶ್ ‘ಕೆಜಿಎಫ್’ ಸಿನಿಮಾದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮಾನ್ವಿತಾ ಕಾಮತ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಕೆಜಿಎಫ್’ ಸಿನಿಮಾ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿದೆ.

ಈ ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಸಿನಿಮಾಗಳ ಪಟ್ಟಿ ಹೀಗಿದೆ :

 • ಅತ್ಯುತ್ತಮ ಸಿನಿಮಾ: ಕೆಜಿಎಫ್
 • ಅತ್ಯುತ್ತಮ ನಟ: ಯಶ್ (ಕೆಜಿಎಫ್)
 • ಅತ್ಯುತ್ತಮ ನಟಿ: ಮಾನ್ವಿತಾ ಕಾಮತ್ (ಟಗರು)
 • ಅತ್ಯುತ್ತಮ ನಿರ್ದೇಶಕ ಮಂಸೋರೆ (ನಾತಿಚರಾಮಿ)
 • ಅತ್ಯುತ್ತಮ ನಟ (ಕ್ರಿಟಿಕ್ಸ್): ಸತೀಶ್ ನೀನಾಸಂ (ಅಯೋಗ್ಯ)
 • ಅತ್ಯುತ್ತಮ ನಟಿ (ಕ್ರಿಟಿಕ್ಸ್): ಶ್ರುತಿ ನೀನಾಸಂ (ನಾತಿಚರಾಮಿ)
 • ಅತ್ಯುತ್ತಮ ಪೋಷಕ ನಟ: ಧನಂಜಯ್ (ಟಗರು)
 • ಅತ್ಯುತ್ತಮ ಪೋಷಕ ನಟಿ: ಶರಣ್ಯ (ನಾತಿಚರಾಮಿ)
 • ಅತ್ಯುತ್ತಮ ಗಾಯಕ: ಸಂಚಿತ್ ಹೆಗ್ಡೆ- ಶಾಕುಂತ್ಲೇ ಸಿಕ್ಕಳು (ನಡುವೆ ಅಂತರವಿರಲಿ)
 • ಅತ್ಯುತ್ತಮ ಗಾಯಕಿ: ಬಿಂದುಮಾಲಿನಿ- ಭಾವಲೋಕದ (ನಾತಿಚರಾಮಿ)
 • ಅತ್ಯುತ್ತಮ ಸಾಹಿತ್ಯ: ಹೆಚ್ ಎಸ್ ವೆಂಕಟೇಶಮೂರ್ತಿ- ಸಕ್ಕರೆ ಪಾಕದಲ್ಲಿ (ಹಸಿರು ರಿಬ್ಬನ್)
 • ಅತ್ಯುತ್ತಮ ಮ್ಯೂಸಿಕ್ ಆಲ್ಬಂ: ವಾಸುಕಿ ವೈಭವ್ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು)

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.