ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜ.29;

ಕೇಬಲ್ ಟಿವಿ ಮತ್ತು ಡಿಟಿಹೆಚ್ ನ ಅಸ್ತಿತ್ವದಲ್ಲಿರುವ ನಿಯಮಗಳು ಜ.31 ರಿಂದ ರದ್ದಾಗಲಿದ್ದು, ಫೆಬ್ರವರಿ 1 ರಿಂದ ಹೊಸ ಕೇಬಲ್ ನೀತಿ ಜಾರಿಗೆ ಬರಲಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಡಿಟಿಎಚ್ ಸೇವಾ ಪೂರೈಕೆದಾರರು ಮತ್ತು ಕೇಬಲ್ ಅಪರೇಟರ್ ಗಳಿಗೆ ಹೊಸ ನಿಯಮಾವಳಿ ಅಳವಡಿಸಲು ನೀಡಿದ ಸಮಯ ಕೊನೆ ಹಂತದಲ್ಲಿದ್ದು, ಕೇಬಲ್ ಟಿವಿ ಮತ್ತು ಡಿಟಿಹೆಚ್ ದರದ ಮಾಹಿತಿಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

ಪ್ರಸ್ತುತ ಅಸ್ತಿತ್ವದಲ್ಲಿರುವ ನಿಯಮಗಳು ಜನವರಿ 31, 2019 ರಿಂದ ರದ್ದಾಗಲಿದ್ದು, ಹೊಸ ನಿಯಮಗಳನ್ನು ವೀಕ್ಷಕರು, ಸೇವಾ ಪೂರೈಕೆದಾರರು ಮತ್ತು ಪ್ರಸಾರಕರು ಪರಿಣಾಮಕಾರಿಯಾಗಿ ಅರ್ಥೈಸಿಕೊಂಡು ಕಾರ್ಯರೂಪಕ್ಕೆ ತರುವಂತೆ ಟ್ರಾಯ್ ಪ್ರಯತ್ನ ಮಾಡುತ್ತಿದೆ. ಟ್ರಾಯ್ ನಿಯಮದ ಪ್ರಕಾರ ಜನವರಿ 31 ರೊಳಗೆ ಗ್ರಾಹಕರು ತಮಗೆ ಇಷ್ಟವಾದ ಪೇ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಕನ್ನಡದ ಪೇಯ್ಡ್ ಚಾನೆಲ್ ಗಳ ದರ ಇಂತಿದೆ:

 • ನ್ಯೂಸ್ 18 ಕನ್ನಡ : 25 ಪೈಸೆ
 • ಸ್ಟಾರ್ ಸ್ಪೋರ್ಟ್ಸ್ ಕನ್ನಡ : 19 ರೂ.
 • ಚಿಂಟು ಟಿವಿ ಕನ್ನಡ : 6 ರೂ.
 • ಉದಯ ಕಾಮಿಡಿ : 6 ರೂ.
 • ಉದಯ ಮೂವೀಸ್ : 16 ರೂ.
 • ಉದಯ ಮ್ಯೂಸಿಕ್ : 6 ರೂ.
 • ಉದಯ ಟಿವಿ : 17 ರೂ.
 • ಕಲರ್ಸ್ ಕನ್ನಡ : 19 ರೂ.
 • ಸ್ಟಾರ್ ಸುವರ್ಣ : 19 ರೂ.
 • ಜೀ ಕನ್ನಡ : 19 ರೂ.
 • ಸುವರ್ಣ ಪ್ಲಸ್ ಚಾನಲ್ : 5 ರೂ.
 • ಡಿಸ್ಕವರಿ ಚಾನೆಲ್ : 4 ರೂ.

ಡಿಸ್ಕವರಿ ಕಿಡ್ಸ್ ಚಾನೆಲ್ ಗೆ 3 ರೂ., ಅನಿಮಲ್ ಪ್ಲಾನೆಟ್ ಗೆ 24 ರೂ. ದರ ನಿಗದಿ ಮಾಡಲಾಗಿದೆ. ಸ್ಪೋರ್ಟ್ಸ್ ಚಾನೆಲ್ ಗಳಾದ ಸೋನಿ ಇ.ಎಸ್.ಪಿ.ಎನ್. ಹೆಚ್ ಡಿಗೆ 7 ರೂ., ಸೋನಿ ಇ.ಎಸ್.ಪಿ.ಎನ್. ಗೆ 5 ರೂ., ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಗೆ 4 ರೂ. ದರ ನಿಗದಿ ಮಾಡಲಾಗಿದೆ.

ಬೇಸಿಕ್ ಪ್ಯಾಕೇಜ್ ನಲ್ಲಿ 130 ರೂ.ಗೆ 100 ಟಿವಿ ಚಾನೆಲ್ ವೀಕ್ಷಿಸಬಹುದು. ಇದಕ್ಕೆ ಶೇ. 18ರಷ್ಟು ಜಿಎಸ್ಟಿ ಸೇರಿ ರೂ. 153 ಪಾವತಿಸಬೇಕಿದೆ. ಎಲ್ಲಾ 25 ದೂರದರ್ಶನ ಚಾನೆಲ್ ಗಳು ಬೇಸ್ ಪ್ಯಾಕ್ ನಲ್ಲಿ ಲಭ್ಯವಿರುತ್ತವೆ.

100 ಉಚಿತ ಚಾನೆಲ್

100 ಉಚಿತ ಚಾನೆಲ್ ಗಳೊಂದಿಗೆ, ಪಾವತಿಸಲ್ಪಡುವ ಚಾನೆಲ್ ಗಳನ್ನು ಬೇಕಿದ್ದರೆ ಸೇರಿಸಿಕೊಳ್ಳಬಹುದು. 100 ಕ್ಕಿಂತ ಹೆಚ್ಚು ಚಾನೆಲ್ ವೀಕ್ಷಿಸಲು ರೂ. 20ಕ್ಕೆ 25 ಚಾನೆಲ್ ಗಳ ಸ್ಲ್ಯಾಬ್ ಪಡೆಯಬಹುದು. ಪೇಡ್ ಚಾನೆಲ್ ಗಳ ಆಯ್ಕೆಯೊಂದಿಗೆ ಪಾವತಿಸಬೇಕಾಗುವ ಬಿಲ್ ಕೂಡ ಏರಿಕೆಯಾಗುತ್ತದೆ. ಉಚಿತ ಚಾನೆಲ್ ಗಳ ಸೇವೆ ಹಿಂದಿನಂತೆಯೇ ಮುಂದುವರೆಯಲಿದ್ದು, ಪೇಯ್ಡ್ ಚಾನೆಲ್ ಗಳ ಸೇವೆಯಲ್ಲಿ ಬದಲಾವಣೆಯಾಗಲಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.