ಕೆ.ಎನ್.ಪಿ.ವಾರ್ತೆ,ಹಾವೇರಿ,ನ.07;

ಇಷ್ಟಲಿಂಗ ಮಹಾ ಪೂಜೆ ಮಾಡುವುದರಿಂದ ಇಷ್ಟಾರ್ಥ ಫಲ ಪ್ರಾಪ್ತಿಯಾಗುತ್ತದೆ ಎಂದು ರಂಭಾಪುರಿ ಜಗದ್ಗುರು ಡಾ.ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಗುತ್ತಲ ಪಟ್ಟಣದ ಸಂಗನಬಸವ ಕಲ್ಯಾಣಮಂಟಪದಲ್ಲಿ ಬುಧವಾರ ಇಷ್ಟಲಿಂಗ ಮಹಾ ಪೂಜೆ ನೆರವೇರಿಸಿ ಭಕ್ತರನ್ನುದ್ದೇಶಿಸಿ ಆರ್ಶೀವಚನ ನೀಡಿದರು.

ಮಾನವ ಜೀವನ ಅತ್ಯಂತ ಅಮೂಲ್ಯವಾದುದು, ಸತ್ಯ ಸಂಸ್ಕೃತಿ ಬೆಳವಣಿಗೆಗೆ ಮತ್ತು ಸುಖ-ಶಾಂತಿ ಬದುಕಿಗೆ ಧರ್ಮವೇ ಮೂಲ. ವೀರಶೈವ ಧರ್ಮದಲ್ಲಿ ಪಂಚ ಆಚಾರಗಳನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಪ್ರತಿಪಾದಿಸಿದ್ದಾರೆ.

ಸಂಸ್ಕಾರದಿಂದ ಅಂಗ ಗುಣಗಳು ದೂರವಾಗಿ, ಲಿಂಗ ಗುಣ ಪ್ರಾಪ್ತವಾಗಲು ಸಾಧ್ಯವಾಗುತ್ತದೆ. ಮಲತ್ರಯಗಳನ್ನು ನಾಶಗೊಳಿಸಿ ಶಿವಜ್ಞಾನ ಉಂಟು ಮಾಡುವುದೇ ಶಿವದೀಕ್ಷೆಯ ಮೂಲ ಧ್ಯೇಯವಾಗಿದೆ.

ವೀರಶೈವ ಧರ್ಮದಲ್ಲಿ ಇಷ್ಟಲಿಂಗ ಮಹಾ ಪೂಜೆ ಗೆ ತನ್ನದೇಯಾದ ಮಹತ್ವವಿದೆ. ಧರ್ಮ ಪರಂಪರೆಯಲ್ಲಿ ಪೂಜಾನುಷ್ಠಾನದಿಂದ ಮೋಕ್ಷ ಲಭಿಸುವುದು. ಮುಂದಿನ ಪೀಳಿಗೆಗೆ ಧರ್ಮ ಸಂಸ್ಕಾರದ ಅರಿವು ಮೂಡಿಸುವುದು ಇಂದಿನ ದಿನಗಳಲ್ಲಿ ಅತಿಅವಶ್ಯಕವಾಗಿದೆ ಎಂದರು.

ಬಹುತೇಕ ವೀರಶೈವರು ಹೆಸರಿಗೆ ಮಾತ್ರ ವೀರಶೈವರಾಗಿ ಉಳಿದಿದ್ದು, ಅನೇಕರು ಇಷ್ಟಲಿಂಗ ಮಹಾ ಪೂಜೆಯನ್ನು ಮಾಡುತ್ತಿಲ್ಲ. ವೀರಶೈವ ಧರ್ಮದ ಪ್ರಕಾರ ಇಷ್ಟಲಿಂಗವನ್ನು ಎದೆ ಮೇಲೆ ಧರಿಸಿ, ನಿತ್ಯವೂ ಪೂಜೆ ಸಲ್ಲಿಸಿದರೆ, ತಮ್ಮ ಇಷ್ಟಾರ್ಥಗಳು ನೆರವೇರಲಿವೆ. ವೀರಶೈವ ಧರ್ಮದಲ್ಲಿ ದಿನಕ್ಕೆ ಮೂರು ಬಾರಿ ಲಿಂಗಪೂಜೆ ಮಾಡುವಂತೆ ಶಾಸ್ತ್ರ ಹೇಳುತ್ತದೆ ಎಂದರು.

ಆಧುನಿಕ ಕಾಲದಲ್ಲಿ ಒತ್ತಡದ ಜೀವನದಿಂದ ಮನುಷ್ಯ ಬಳಲುತ್ತಿದ್ದಾನೆ. ಧರ್ಮದ ಆಚರಣೆಯಿಂದ ಮನುಷ್ಯನಿಗೆ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ.

ಹಿರಿಯ ಗಂಗಾಧರ ಶ್ರೀಗಳು ಎಂದೂ ಭೌತಿಕ ಆಸ್ತಿ ಗಳಿಸಲು ಯತ್ನಿಸಲಿಲ್ಲ. ಲಿಂಗ ಪೂಜೆ ಮೂಲಕ ಸಕಲರಿಗೂ ಒಳಿತು ಮಾಡಿದರು ಎಂದು ಹಿರಿಯ ಶ್ರೀಗಳ ಲಿಂಗಪೂಜೆಯನ್ನು ಸ್ಮರಿಸಿದರು.

ಸಮಾರಂಭದಲ್ಲಿ ಅಮ್ಮಿನಭಾವಿ ಪಂಚಗ್ರಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಷ್ಟಲಿಂಗ ಪೂಜೆ ಯಿಂದ ಏಕಾಗ್ರತೆ ವೃದ್ಧಿಯಾಗುತ್ತದೆ.

ಆದ್ದರಿಂದ ಮಕ್ಕಳಿಗೆ ಇಷ್ಟಲಿಂಗ ಪೂಜೆ ಮಾಡುವುದನ್ನು ಕಲಿಸಿದರೆ ಅವರ ಬುದ್ದಿ ಮತ್ತಷ್ಟು ವೃದ್ದಿಯಾಗುತ್ತದೆ ಎಂದರು. 

ಸಮಾರಂಭದಲ್ಲಿ ಬೆಳಗುಂಪ ಹಿರೇಮಠದ ಅಭಿನವ ಪರ್ವತೇಶ್ವರ ಶಿವಾಚಾರ್ಯ ಸ್ವಾಮೀಜಿ, ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಸಯ್ಯ ರಿತ್ತಿಮಠ, ಮುತ್ತಯ್ಯ ರಿತ್ತಿಮಠ, ಸಿ.ಬಿ.ಕುರುವತ್ತಿಗೌಡ್ರ, ರಾಜಶೇಖರ ಕೂಡ್ಲಮಠ, ವೀರಯ್ಯ ಪ್ರಸಾದಿಮಠ, ಪ್ರಕಾಶ ಹೊನ್ನಮ್ಮನವರ, ಮಂಜಣ್ಣ ಮರಿಯಾನಿ, ಹಿಂದೂಜಾಗರಣ ವೇದಿಕೆಯ ಸದಸ್ಯರು ಪಾಲ್ಗೊಂಡಿದ್ದರು.

ನಿನ್ನೆ ಬೆಳಗ್ಗೆ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳವರ ನೇತೃತ್ವದಲ್ಲಿ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾ ಪೂಜೆ ಗೆ ಅಗ್ರೋಧಕವನ್ನು ಸಕಲ ವಾದ್ಯ ಮೇಳಗಳೊಂದಿಗೆ ಸಂಗನಬಸವ ಕಲ್ಯಾಣ ಮಂಟಪಕ್ಕೆ ತರಲಾಯಿತು. ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಪೂರ್ಣ ಕುಂಭವನ್ನು ಹೊತ್ತು ನಡೆದರು.

ವರದಿ : ಗುರುಶಾಂತಸ್ವಾಮಿ ಹಿರೇಮಠ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.