ಕೆ.ಎನ್.ಪಿ.ವಾರ್ತೆ,ಹಾವೇರಿ,ಜ.02;

ತನ್ನನ್ನು ನಂಬಿ ಬಂದ ಭಕ್ತರ ಕೋರಿಕೆಗಳನ್ನು ಈಡೇರಿಸುವ ಜಾಗೃತ ಶಕ್ತಿಮಾತೆ ಎಂದೇ ಪ್ರಸಿದ್ಧವಾದ ಹಾವೇರಿ ತಾಲೂಕಿನ ನೆಗಳೂರಿನ ಮಾತೆ ಕೋಡಿ ದುರ್ಗಾದೇವಿಯ ಜಾತ್ರಾಮಹೋತ್ಸವ ಜನವರಿ 14 ಮತ್ತು 15 ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ. ತನ್ನ ನಿಮಿತ್ಯ ಈ ಲೇಖನ ಪ್ರಕಟಿಸಲಾಗಿದೆ.

ದೇವಿಯ ಹಿನ್ನಲೆ :

ಸುಮಾರು 850 ವರ್ಷಗಳ ಇತಿಹಾಸವುಳ್ಳ ನೆಗಳೂರ ಗ್ರಾಮದ ಮೂಲ ಹೆಸರು ಗಣತೂರು. ಇಲ್ಲಿಯ ಹಿರೇಮಠದ ಶ್ರೀ ಗುರುಶಾಂತಶಿವಯೋಗಿಗಳು ಏಕಕಾಲಕ್ಕೆ ಸಾವಿರ ನೇಗಿಲುಗಳ ಪವಾಡ ಮಾಡಿದ್ದರಿಂದ ನೇಗಿಲೂರು ಎಂದು ಹೆಸರಾಯಿತು ಎಂಬುದು ಹಿನ್ನೆಲೆ. ದ್ಯಾಮವ್ವದೇವಿ ಗ್ರಾಮದೇವತೆಯಾಗಿದ್ದರೆ, ಉಪದೇವತೆಯಾಗಿ ದುರ್ಗಾದೇವಿ ನೆಲೆಸಿದ್ದಾಳೆ.

ಗ್ರಾಮದ ಹೊರವಲಯದಲ್ಲಿ ಒಂದು ಕೆರೆಯಿದ್ದು ಮಳೆಗಾಲದಲ್ಲಿ ತುಂಬಿ ಹರಿದು ಕೋಡಿ ಬೀಳುತ್ತಿದ್ದರಿಂದ ಗ್ರಾಮದ ಜನರಿಗೆ ತೊಂದರೆಯಾಗುತ್ತಿತ್ತು. ಗ್ರಾಮದ ಸುಕಳಿ ಮನೆತನದ ಹಿರಿಯರು ಹಾಗೂ ಗ್ರಾಮದ ಮುಖಂಡರುಗಳು ಗ್ರಾಮದ ಹಿರೇಮಠದ ಗುರುಶಾಂತ ಶಿವಯೋಗಿಗಳ ಬಳಿ ಇದರ ಪರಿಹಾರದ ಬಗ್ಗೆ ಕೇಳಿದಾಗ, ಕೆರೆಯ ಪಕ್ಕದಲ್ಲಿ ಶಕ್ತಿಮಾತೆಯನ್ನು ಪ್ರತಿಷ್ಠಾಪಿಸಬೇಕೆಂದು ಗುರುಗಳು ತಿಳಿಸಿದರು.

ಬನದ ಹುಣ್ಣಿಮೆಯ ನಂತರ ಬರುವ ಶುಭ ಮಂಗಳವಾರದಂದು ಮೂರ್ತಿ ಪ್ರತಿಷ್ಠಾಪಿಸಿದ ಗುರುಗಳು, ಗ್ರಾಮಸ್ಥರು ದೀಪಗಳನ್ನು ಬೆಳಗಿಸಿ ಕಾರ್ತಿಕೋತ್ಸವ ನೆರವೇರಿಸಬೇಕೆಂದು ಅಪ್ಪಣೆ ಮಾಡಿದರು.

ಅಂದಿನಿಂದ ಕೆರೆ ಕೋಡಿ ಒಡೆಯುವುದು ಕಡಿಮೆಯಾಯಿತು. ಕೋಡಿ ಒಡೆಯುವುದು ನಿಲ್ಲಿಸಿದ ಪ್ರತೀಕವಾಗಿ ಕೋಡಿ ದುರ್ಗಾದೇವಿ ಎಂದು ನಾಮಕರಣ ಮಾಡಲಾಯಿತು.

ನೆಗಳೂರ ಗ್ರಾಮದ ಕೋಡಿ ದುರ್ಗಾದೇವಿಯ ದೇವಸ್ಥಾನ

ಕೋಡಿ ದುರ್ಗಾದೇವಿಯ ಮೂರ್ತಿ

ಬನದ ಹುಣ್ಣಿಮೆಯಂದು ರಥದ ಚಕ್ರಗಳನ್ನು ಪೂಜಿಸಿ ಹೊರತರಲಾಗುತ್ತದೆ. ಅಂದಿನಿಂದ ಜಾತ್ರೆ ಪ್ರಾರಂಭ. ನಂತರ ಬರುವ ಶುಭ ಮಂಗಳವಾರದಂದು ಬಿಷ್ಟನಗೌಡರ ಮನೆಯಿಂದ ದೇವಿಯ ಆಭರಣಗಳನ್ನು ತಂದು ದೇವಿ ಮೂರ್ತಿಯನ್ನು ಅಲಂಕರಿಸುತ್ತಾರೆ. ಗ್ರಾಮದೇವತೆಯ ದೇವಸ್ಥಾನದಿಂದ ಹೊರಡುವ ದೇವಿಯ ಉತ್ಸವ ದುರ್ಗಾದೇವಿ ದೇವಸ್ಥಾನದಲ್ಲಿ ಮುಕ್ತಾಯಗೊಳ್ಳುತ್ತದೆ. ಮರುದಿನ ಸಂಜೆ ಮರಳಿ ಬರುವ ದೇವಿಗೆ ಸದ್ಭಕ್ತರು ಪೂಜಾಕೈಂಕರ್ಯ ಸಲ್ಲಿಸುತ್ತಾರೆ.

ವಿಶೇಷ ಬಂಡಿ ಉತ್ಸವ :

ಮೊದಲೆಲ್ಲ ಜಾತ್ರಾಮಹೋತ್ಸವ ಹಿನ್ನಲೆಯಲ್ಲಿ ಬೆಲ್ಲದ ಬಂಡಿಗಳೆಂದು ಊರಿನ ಪ್ರಮುಖ ಬೀದಿಗಳಲ್ಲಿ ರೈತನ ಒಡನಾಡಿಗಳಾದ ಎತ್ತುಗಳನ್ನು ಶೃಂಗರಿಸಿಕೊಂಡು ವಿವಿಧ ಜಾನಪದ ಮೇಳಗಳೊಂದಿಗೆ ಸಾಗುತ್ತಿದ್ದ ಸಂರ್ದಭದಲ್ಲಿ ಪ್ರಸಾದ ರೂಪದಲ್ಲಿ ಬೆಲ್ಲದ ನೀರನ್ನು ನೀಡುತ್ತಿದ್ದರು ಎನ್ನುತ್ತಾರೆ ಹಿರಿಯರು. ಈಗ ಬೆಲ್ಲದ ಬಂಡಿಗಳ ಉತ್ಸವ ಕೈ ಬಿಡಲಾಗಿದೆ ಕೇವಲ ಎತ್ತುಗಳ ಮೆರವಣಿಗೆ ಮಾಡಲಾಗುತ್ತಿದೆ. ವೈಷ್ಟತೆಯಿಂದ ಕೊಡಿದ ದೇವಿಯ ಜಾತ್ರೆಯಾಗಿದೆ.

ಇದೇ 14 ಹಾಗೂ 15ರಂದು ನಡೆಯಲಿರುವ ದೇವಿಯ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಹರಕೆ, ಪೂಜೆ ಸಲ್ಲಿಸುತ್ತಾರೆ.

ವರದಿ : ಗುರುಶಾಂತಸ್ವಾಮಿ ಗ ಹಿರೇಮಠ ನೆಗಳೂರ ಮೊ:9741117174

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.