ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮೇ.09;

ಉತ್ತರ ಪ್ರದೇಶದ ಮಲ್ಲಣಪುರ ಎಂಬ ಗ್ರಾಮದಲ್ಲಿ ತೆರೆಕಂಡ ಗ್ರೀನ್ ಇಂಡಿಯಾ ಇಂಟರ್ನ್ಯಾಶನಲ್ ಫೌಂಡೇಶನ್ 2011ರಲ್ಲಿ ತನ್ನ ಕಾರ್ಯಚಾಲನೆ ಮಾಡಿದ್ದು ಪರಿಸರಕ್ಕೆ ಹೆಚ್ಚಾಗಿ ಒತ್ತು ನೀಡುವಲ್ಲಿ ಯಶಸ್ಸು ಕಂಡಿತು.

ತದನಂತರ ಹುಮನ್ ಟ್ರಾಫಿಕಿಂಗ್, ವೋಟಿಂಗ್ ಅವೇರ್ನಸ್, ಸೈನಿಕರ ಹೆಸರಲ್ಲಿ ಉತ್ತಮ ಸಾಧಕರಿಗೆ ನಗದು ಬಹುಮಾನ ನೀಡುವಲ್ಲಿ ಹೆಸರಾಗಿದ್ದ ಸಂಸ್ಥೆ ಮುಂದೆ ಲೆಡ್ ಬಲ್ಬ್ ತಯಾರಿಸುವಲ್ಲಿ ಹಾಗೂ ಹೊರಗಿನ ಕಾರ್ಪೊರೇಟ್ ಲೇವಲ್ನಲ್ಲಿ ನೀಡುವ ದರಕ್ಕಿಂತ ಕಡಿಮೆ ದರದಲ್ಲಿ ಹಾಗೂ ಹೆಚ್ಚು ಬೆಳಕು ನೀಡುವ ಬಲ್ಬ್ ತಯಾರಿಕೆ ಮತ್ತು ಡಿಸ್ಟ್ರುಬ್ಯುಟ್ ಮಾಡುವಲ್ಲಿ ಶುರುವಾಯಿತು.

ತದನಂತರ ನನ್ನಯ ಆರೋಗ್ಯಸರಿ ಇಲ್ಲದ ಕಾರಣ ಹಾಗೂ ಇನ್ನುಳಿದ ಕಾರಣದಿಂದಾಗಿ ಸಂಸ್ಥೆಯ ಎಲ್ಲ ಕಾರ್ಯವು ಸ್ಥಗಿತವಾಗಿತ್ತು. ಇನ್ನು ಸಂಸ್ಥೆಯು ಮುಚ್ಚಿ ಹೋಯೆತೇನೋ ಎಂಬ ಕೊರಗಲ್ಲಿ ಇದ್ದ ನನಗೆ ಸಂಸ್ಥೆಯು ಕೊಡಲ್ಪಡುವ ವರ್ಷದ ಗ್ರೀನ್ ಇಂಡಿಯಾ ಅಚೀವರ್ ಅವಾರ್ಡ್ ಗೆ ದೇಶಾದ್ಯಂತ ಕರೆ ನೀಡಿದೆ.

ಡಾ.ಅಂಬಿಕಾ ಹಂಚಾಟೆ

ಡಾ.ಅಂಬಿಕಾ ಹಂಚಾಟೆ

ಅದರಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯವರಾದ ಡಾ.ಅಂಬಿಕಾ ರವರ ಸಂಪೂರ್ಣ ಸಾಧನೆಯ ದಾಖಲೆ ಹಾಗೂ ಸಂಸ್ಥೆ ಕೇಳಿದ ಪ್ರಶ್ನೆಗೆ ಉತ್ತಮ ರೀತಿಯಲ್ಲಿ ಉತ್ತರವನ್ನು ಬರೆದು ಲಗತ್ತಿಸಿದ್ದರು. 2014 ರಲ್ಲಿ ಆಯ್ಕೆ ಮಂಡಳಿಯ ತೀರ್ಪಿನಂತೆ ಡಾ.ಅಂಬಿಕಾ ಹಂಚಾಟೆಯವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಆದ್ರೆ ಸಂಸ್ಥೆಗೆ ಸೇರುವವರಿಗೆ ಅಥವಾ ಸಂಸ್ಥೆಯಲ್ಲಿದ್ದ ಪದಾಧಿಕಾರಿಗಳಿಗೆ ಈ ಪ್ರಶಸ್ತಿ ನೀಡುವುದು ನಿಷಿದ್ಧವಾದ ನಿಯಮವಾಗಿತ್ತು ಅದೇ ರೀತಿ ಫೌಂಡೇಶನ್ ನ ಸಂಸ್ಥಾಪಕನಾದ ನಾನು ಡಾ.ಅಂಬಿಕಾ ರವರನ್ನು ಸರ್ವ ಪದಾಧಿಕಾರಿಗಳ ಅಭಿಪ್ರಾಯದಂತೆ ಸೆಕ್ರೆಟರಿಯಾಗಿ ನೇಮಕ ಮಾಡಲಾಯಿತು.

ಅಲ್ಲಿಂದ ಪ್ರಾರಂಭಗೊಂಡ ಡಾ.ಅಂಬಿಕಾ ರವರ ಮ್ಯಾನೇಜ್ಮೆಂಟ್ ಕಾರ್ಯವು ಸಂಸ್ಥೆಯನ್ನು ಹಂತಹಂತವಾಗಿ ಅಭಿವೃದ್ಧಿಯ ಪತದಲ್ಲಿ ಮುಂದುವರೆಸಿಕೊಂಡು ಹೋಗುತ್ತಿರುವದು ಕಂಡು, ಸಂಸ್ಥೆಯ ಚೇರ್ಪರ್ಸನ್ ಆದ ನಾನು (ರಾಮ್ ಶಂಕರ್) ಹಾಗೂ ಕಾರ್ಯಕಾರಿ ಮಂಡಳಿಯ ಸರ್ವ ಸದಸ್ಯರು ವೋಟಿಂಗ್ ಮೇರೆಗೆ ಬೋರ್ಡ್ ಆಫ್ ಡೈರೆಕ್ಟರ್ ಸ್ಥಾನಕ್ಕೆ ಡಾ.ಅಂಬಿಕಾ ಹಂಚಾಟೆಯವರನ್ನ ಆಯ್ಕೆ ಮಾಡಲಾಯಿತು.

ಸತತವಾಗಿ 2014 ರಿಂದ 2019 ರವರೆಗೆ ಸಂಸ್ಥೆಯ ಪ್ರತಿ ಕಾರ್ಯದಲ್ಲಿ, ಯೋಜನೆಯನ್ನು ರೂಪಿಸುವಲ್ಲಿ, ಮಹಿಳಾ ಸಬಲೀಕರಣ, ಸರ್ವೇ ಕಾರ್ಯ ಹಾಗೂ ಇನ್ನಿತರೆ ಸಂಸ್ಥೆಯ ಎಲ್ಲ ಜವಾಬ್ದಾರಿಯನ್ನು ಹೊತ್ತು ನಡೆದ ಡಾ ಅಂಬಿಕಾ ರವರ ನೇತೃತ್ವದಲ್ಲಿ ಸಂಸ್ಥೆಯು 2016ರ E NGO ಚಾಲೆಂಜ್ ಎಂಬ ಡಿಜಿಟಲ್ ಎಂಪಾವರ್ನ್ಮೆಂಟ್ ಫೌಂಡೇಶನ್ ನಡೆಸಿದ ಮುಕ್ತ ಏಷಿಯಾ ಮಟ್ಟದ NGO ಗಳ ಸ್ಪರ್ಧೆಯಲ್ಲಿ ಆಯ್ದ NGO ಗಳ ಲಿಸ್ಟ್ ಅಲ್ಲಿ ಗ್ರೀನ್ ಇಂಡಿಯಾ ಇಂಟರ್ನ್ಯಾಷನಲ್ ಫೌಂಡೇಶನ್ ಎಂಬುಲೆಮೆಂಟ್ ಹಾಗೂ ಎಂಪಾವರ್ನ್ಮೆಂಟ್ ವಿಭಾಗದಲ್ಲಿ ಫೈನಲಿಸ್ಟ್ ಆಗಿ ಹೊರಹೊಮ್ಮಿತು ಹಾಗೂ ಅವಾರ್ಡ್ ಬುಕ್ 2016 ರಲ್ಲಿ ಸಂಸ್ಥೆಯು ಹೊಸದೊಂದು ಅಧ್ಯಾಯ ಬರೆಯಿತು.

ಇದು ಇಂದಿಗೂ ಮರೆಯಲಾರದ ಘಳಿಗೆ ಹಾಗೂ ಡಾ.ಅಂಬಿಕಾ ರವರ ಕಾರ್ಯಶೀಲತೆ ಮೆಚ್ಚುವಂತದ್ದು ಅವರ ಬುದ್ಧಿವಂತಿಕೆಗೆ, ತಾಳ್ಮೆ ಹಾಗೂ ಒಬ್ಬ ಮಹಿಳೆಯಾಗಿ ಎಲ್ಲವನ್ನು ನಿಭಾಯಿಸಿ ಮಹಿಳಾ ಸಬಲೀಕರಣಕ್ಕೆ ಕೇವಲ ಅಂಬಿಕಾ ರವರು ಮಾತ್ರವಲ್ಲ ಇವತ್ತು ಇಡೀ ಮಲ್ಲನ್ನಪುರ ಗ್ರಾಮದ ನನ್ನೂರಿನ ಮಹಿಳೆಯರು ಅವ್ರಿಗೆ ಶುಭಾಶಯ ಹೇಳುತ್ತಿದೆ.

ತಮಗೆ ವಹಿಸಿಕೊಟ್ಟ ಜವಾಬ್ದಾರಿಯನ್ನು ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬಂದ ಡಾ.ಅಂಬಿಕಾ ಹಂಚಾಟೆಯವರು ಇದೀಗ ಸಂಸ್ಥೆಯ ಪರವಾಗಿ ಬ್ಯಾಂಕಾಕ್ ನಲ್ಲಿ ಏಕನಾಮಿಕ್ ಗ್ರೋತ್ ಸೊಸೈಟಿ ನೀಡಲ್ಪಡುವ ಗೋಲ್ಡ್ ಸ್ಟಾರ್ ಇಂಟರ್ನ್ಯಾಷನಲ್ ಅವಾರ್ಡ್ ಇನ್ ಕಾರ್ಪೊರೇಟ್ ಸೆಕ್ಟರ್ ಅವಾರ್ಡ್ ಗೆ ಭಾಜನರಾಗಿರುವದಲ್ಲದೆ ಇಂಟರ್ನ್ಯಾಷನಲ್ ಆಚೀವರ್ಸ್ ಸಮಿತ್ ನಲ್ಲಿ ತಮ್ಮ ವಿಷಯವನ್ನು ಮಂಡಿಸುತ್ತಿರುವದು ನಮಗೆಲ್ಲ ಅತೀವ ಸಂತಸ ತಂದಿದೆ.

ಇಂತಹ ಸಂಧರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕನಾದ ನಾನು ಸಂಸ್ಥೆಯ ಎಲ್ಲ ಪವರ್ ಆಫ್ ಅಥಾರಟಿಯನ್ನು ಡಾ.ಅಂಬಿಕಾ ರವರಿಗೆ ಅಧಿಕೃತವಾಗಿ ವಹಿಸುತ್ತಿದ್ದೇನೆ ಹಾಗೂ ಸಂಸ್ಥೆ ಹೊರತಂದ ಕಂಟ್ರಿ ಕನೆಕ್ಷನ್ ಇಂಗ್ಲಿಷ್ ದೃಶ್ಯ ಮಾಧ್ಯಮ 24*7 ಚಾನೆಲ್ ಗೆ ಡಾ.ಅಂಬಿಕಾ ರವರನ್ನು ಮ್ಯಾನೆಜಿಂಗ್ ಡೈರೆಕ್ಟರ್ ಮಾಡುವಲ್ಲಿ ನನಗೆ ಸಂತಸವಾಗುತ್ತಿದ್ದೆ ಹಾಗೂ ಬರುವ ಸಂಸ್ಥೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಡಾ.ಅಂಬಿಕಾ ಹಂಚಾಟೆ ಯವರಿಗೆ ಸಂಸ್ಥೆಯು ಗ್ರೀನ್ ಇಂಡಿಯಾ ಅಚೀವರ್ಸ್ ಪ್ರಶಸ್ತಿ ಪ್ರಧಾನ ಮಾಡಲಾಗುವದು ಎಂದು ರಾಂಶಂಕರ ಅವಸ್ತಿಯವರು ಮಾಹಿತಿ ಪ್ರಕಟಿಸಿರುತ್ತಾರೆ.

ಇತ್ತೀಚೆಗಷ್ಟೇ ಡಾ.ಅಂಬಿಕಾ ರವರ ಸಾಧನೆಯ ಬಯೋಗ್ರಾಫಿ ಬೆಸ್ಟ್ ಸಿಟಿಜನ್ ಪಬಲಿಷಿಂಗ್ ಹೌಸ್ ನಲ್ಲಿ ಪ್ರಕಟವಾಗಿದ್ದು ಅವರ ಸಾಧನೆಯೂ ಇನ್ನು ಹೆಚ್ಚಿನ ರೀತಿಯಲ್ಲಿ ಆಗಲಿ ದೇಶಕ್ಕೆ ಒಳ್ಳೆಯ ಸೇವೆ ಅವರಿಂದ ಸಿಗಲಿ ಎಂದು ಶುಭಕೋರಿರುತ್ತಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.