ಕೆ.ಎನ್.ಪಿ.ಕವಿತೆ; 

ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ ಕವಿಯತ್ರಿ ಕಸ್ತೂರಿ ಡಿ ಪತ್ತಾರ್ ಅವರ ಕವಿತೆ ಪ್ರಕಟಿಸಲಾಗಿದೆ.  ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ. 

ದಿನಕರ

ಇರುಳ ಸರಿಸಿ ನಸುಕ ನರಸಿ
ಹೊಸ ಕನಸ ಕಾಣುವ
ಮನಕೆ ಹೂ ಮುತ್ತನಿಟ್ಟು
ಹರೆಯಕೆ ಮನಸ ಕಳಿಸಿದ
ತುಂಟನ ಚೆಲುವ ಚಲುವಿಕೆ

ಮನ ಮಂದಾರ ತುಂಬಾ
ಮಲ್ಲಿಗೆಯ ಮೊಗ್ಗು ಕಟ್ಟಿ
ಎದೆ ತುಂಬಾ ಸಿಹಿ ಸೌಗಂಧ
ತುಂಬಿ ನಸು ನಗುತ ಹೂ..
ಬಿಸಿಲ ಚುಂಬನಕೆ…..

ಭಾವ ಬಸಿರಾಗಿ ಬಯಕೆ
ನುಡಿ ಕಣಜ ಒಂದೇ ಎರಡೆ
ಚುಕ್ಕಿ ಚಂದ್ರಮನಲ್ಲಿ ಕಾಡು
ಕಣಿವೆಯಲ್ಲಿ ತೆರೆ ತೊರೆಗಳಲಿ
ಒಲವ ನುಡಿ ನಲಿದಾಟ

ಹಾಡು ಹಕ್ಕಿಯಲಿ ತೀಡುವ
ತಂಗಾಳಿಯಲಿ ತರು ಲತೆಗಳ
ತಾರಣ್ಯದಲಿ ಹೊಂಬೆಳಗಿನ
ವಯ್ಯಾರದಲಿ ನಿನ್ನ ಚಲುವಿಕೆಗೆ
ದಾಸಿಯಾಗಿ ದಿನಕರ ನಿನ್ನ
ಇರುವಿಕೆಯ ಹೇಳಿ ಹೇಳಿ
ಮುಗಿಯದ ಕವಿತೆಯಾದೆ.

# ಕಸ್ತೂರಿ ಡಿ ಪತ್ತಾರ್

ನೀವು ಕೂಡ ಬರೆಯಬಹುದು :

ಆತ್ಮೀಯರೇ ಕೆ.ಎನ್.ಪಿ.ಯಲ್ಲಿ ನೀವು ಕೂಡ ಬರೆಯಬಹುದಾಗಿದೆ. ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆಯಿರಿ, ಕೆ.ಎನ್.ಪಿ.ಗೆ ಕಳುಹಿಸಿರಿ.

ವಾಟ್ಸಪ್ ಮಾಡಿ

9513326661

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.