ಕೆ.ಎನ್.ಪಿ.ವಾರ್ತೆ,ಗಂಗಾವತಿ,ಏ.25;

ಡಣಾಪುರ ಗ್ರಾಮದಲ್ಲಿ ವಾಸವಿ ಯುವಜನ ಸಂಘದ ವತಿಯಿಂದ 15ನೇ ವರ್ಷದ ವಾಸವಿ ಜಯಂತಿಯನ್ನು ಇಂದು ಆಚರಿಸಲಾಯಿತು.

ಜಯಂತಿ ಪ್ರಯುಕ್ತ, ಗ್ರಾಮದ ಆರಾದ್ಯ ದೈವವಾಗಿರುವ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಇಂದು ಶ್ರೀ ಮಾರುತೇಶ್ವರಗೆ ಬೆಳಿಗ್ಗೆಯಿಂದ ನಾನಾ ಬಗೆಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು.

ನಂತರ ವಾಸವಿ ಪೋಟೊಗೆ ವಿಶೇಷ ಪೂಜೆ ನೆರವೇರಿತು. ಬಳಿಕ ಊರ ರಾಜ ಬೀದಿಯಲ್ಲಿ  ಸಕಲ ಮಂಗಳ ವಾದ್ಯಗಳೊಂದಿಗೆ ಪೋಟೋ ಮೆರವಣಿಗೆಯು ಸಾಗಿ ಮರಳಿ ದೇವಾಲಯಕ್ಕೆ ಆಗಮಿಸಿತು. ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಜಯಂತಿಯಲ್ಲಿ ಡಣಾಪೂರ, ಅಯ್ಯೊದ್ಯ, ಹೆಬ್ಬಾಳ, ಕಲ್ಗುಡಿ ಗ್ರಾಮದ ವಾಸವಿ ಸದಸ್ಯರು ಭಾಗವಹಿಸಿದ್ದರು.

ವರದಿ : ಹನುಮೇಶ್ ಡಣಾಪುರ