ಕೆ.ಎನ್.ಪಿ.ವಾರ್ತೆ,ಮುಂಡರಗಿ,ಜ.05;

ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಪ್ರಮುಖವಾಗಿದ್ದು, ಅವರಲ್ಲಿ ಹದಿಹರೆಯದ ವಯೋಮಾನ ಸಾರ್ಥಕ ಸಾಧನೆಗೆ ಸೂಕ್ತ ಸಮಯವಾಗಿದೆ ಎಂದು ಮುಂಡರಗಿ ಪುರಸಭೆಯ ಅಧ್ಯಕ್ಷರಾದ ಹೇಮಾವತಿ ಅಬ್ಬಿಗೇರಿ ಅಭಿಪ್ರಾಯಪಟ್ಟರು.

ಭಾರತ ಸರ್ಕಾರ ನೆಹರು ಯುವಕೇಂದ್ರ, ಶ್ರೀ ಕಲ್ಲೇಶ್ವರ ಯುವಕ ಮಂಡಳ ಚುರ್ಚಿಹಾಳ ವಿನೂತನ ಶಿಕ್ಷಣ ಸಂಸ್ಥೆ, ಪ್ರಿಯದರ್ಶಿನಿ ಶಿಕ್ಷಣ ಮಹಾವಿದ್ಯಾಲಯ ( ಬಿ.ಇಡಿ ಕಾಲೇಜು ) ಮುಂಡರಗಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಧನಾತ್ಮಕ ಚಿಂತನೆ ಕುರಿತು ಶಿಕ್ಷಣ ಮತ್ತು ಜಾಗೃತಿ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಪ್ರಮುಖವಾಗಿದ್ದು, ಅವರಲ್ಲಿ ಹದಿಹರೆಯದ ವಯೋಮಾನ ಸಾರ್ಥಕ ಸಾಧನೆಗೆ ಸೂಕ್ತ ಸಮಯವಾಗಿದೆ. ದುಶ್ಚಟ, ಅಪರಾಧ ಕಾರ್ಯಗಳಿಗೆ ಹೋಗದ ಮನಸ್ಸನ್ನು ಸಮುದಾಯದ ಅಭಿವೃದ್ಧಿಗೆ ಹಾಗೂ ಸೇವಾ ಮನೋಭಾವನೆ ಸಾಮಾಜಿಕ ಪಿಡುಗುಗಳ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ವಾತಾವರಣವನ್ನು ಕಾರ್ಯಾಗಾರ, ಸಂವಾದ, ಚರ್ಚೆಗಳ ಮೂಲಕ ಕಲ್ಪಿಸುವ ಉಪನ್ಯಾಸದಿಂದ ಧನಾತ್ಮಕ ಶಿಕ್ಷಣ ಸಕಾರಾತ್ಮಕತೆ, ಜಾಗೃತಿ ಕಾರ್ಯಕ್ರಮ ಯುವಜನಾಂಗಕ್ಕೆ ಅತ್ಯವಶ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಗಣೇಶ ಹಾತಲಗೇರಿ ಅಧ್ಯಕ್ಷರು ರಾಯಣ್ಣ ಗ್ರಾಮೀಣಾಭಿವೃದ್ಧಿ ಹಾಗೂ ತರಬೇತಿ ಸಂಸ್ಥೆ ಮುಂಡರಗಿ ಇವರು ಮಾತನಾಡುತ್ತ, ಇಂದಿನ ಯುವ ಜನಾಂಗವು ಮೊಬೈಲ್, ವಾಟ್ಸಪ್, ಫೇಸ್ಬುಕ್, ಇನ್ನೂ ಮುಂತಾದ ಎಲೆಕ್ಟ್ರಾನಿಕ್ಸ್ ಮಾಧ್ಯಮಕ್ಕೆ ಹೊಂದುಕೊಂಡು ಯೋಗ, ವ್ಯಾಯಾಮ, ಉತ್ತಮವಾಗಿರತಕ್ಕಂತಹ ಸಾಮಾಜಿಕ ಅಭಿವೃದ್ಧಿ ಚಿಂತನೆಯಲ್ಲಿ ತೊಡಗಿಕೊಳ್ಳುವುದನ್ನು ಬಿಟ್ಟು, ಎಲೆಕ್ಟ್ರಾನಿಕ್ಸ್ ಮಾಧ್ಯಮಕ್ಕೆ ಹೊಂದಿಕೊಂಡು ಜೊತೆಗೆ ದುಶ್ಚಗಳ ದಾಸರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಅತಿಥಿ ಉಪನ್ಯಾಸಕರಾದ ಸಿ. ಕೆ. ಚುರ್ಚಿಹಾಳಮಠ ಪ್ರಾಚಾರ್ಯರು ಎಸ್ ವ್ಹಿ. ಆರ್. ಎಸ್. ಎಂ. ಪ. ಪೂ. ಕಾಲೇಜು ಮುಂಡರಗಿ ಇವರು ನಾಗರಿಕ ಶಿಕ್ಷಣ ಮತ್ತು ಪೌರಪ್ರಜ್ಞೆ ಕುರಿತು ಮಾತನಾಡಿದರು.

ರಾಜ್ಯ ಯುವ ಸಂಪನ್ಮೂಲ ಶಿಕ್ಷಕ ಹಾಗೂ ತರಬೇತುದಾರರಾದ ಪುಟ್ಟರಾಜ ಪಾಟೀಲರವರು ಮಾತನಾಡುತ್ತ, ಸೇವಾಪರಮೋಧರ್ಮ ಕುರಿತು ಸೇವೆ ಜೀವನದ ಶ್ರೇಷ್ಠವಾದ ಹಾದಿ ಪರೋಪಕಾರದೊಂದಿಗೆ ಸಮಾಜಮುಖಿ ಚಿಂತನೆಯನ್ನಿಟ್ಟುಕೊಂಡು ಬದುಕಿದಾಗ ಸಾರ್ಥಕ ಬದುಕು ಹೊಂದಲು ಸಾಧ್ಯ ಎಂದು ಉಪನ್ಯಾಸದ ನುಡಿಗಳನ್ನಾಡಿದರು.

ಜಿಲ್ಲಾ ಮಾನವ ಬಂಧುತ್ವ ವೇದಿಕೆಯ ಸಂಚಾಲಕರಾದ ಬಸವರಾಜ ಈರಣ್ಣವರು, ಇಂದಿನ ಸಾಮಾಜಿಕ ಸಮಸ್ಯೆಗಳಾದ ವರದಕ್ಷಿಣೆ ಪಿಡುಗು, ಬಾಲ್ಯವಿವಾಹ, ಧೂಮಪಾನ, ಮಧ್ಯಪಾನ ಸೇರಿದಂತೆ ಇನ್ನೂ ಮುಂತಾದ ಸಮಸ್ಯೆಗಳ ಕುರಿತು ಉಪನ್ಯಾಸ ನೀಡಿದರು.

ವಿನೂತನ ಶಿಕ್ಷಣ ಸಂಸ್ಥೆಯ ಜಿ. ಸಿ ಜೀವಣ್ಣವರ, ಸ್ವಯಂ ಸೇವಾ ಮನೋಭಾವನೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಯುವಪ್ರಶಸ್ತಿ ಪುರಸ್ಕೃತರಾದ ಡಾ. ಬಸಯ್ಯ ಗದಗಿನಮಠ ರವರು ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾಜದ ಚಿಂತನೆಯನ್ನು ಇಟ್ಟುಕೊಂಟು ಯುವಕರು ಬೆಳೆಯುವದರ ಜೊತೆಗೆ ಯುವ ಮುಂದಾಳತ್ವದ ಜವಬ್ದಾರಿಯುತ ಸ್ಥಾನಗಳನ್ನು ನಿರ್ವಹಿಸಿದಾಗ ಮಾತ್ರ ಸಮರ್ಥ ನಾಯಕರಾಗಲು ಸಾಧ್ಯ.

ನಾಯಕರಾಗಲು ಯಾವುದೇ ಸ್ವಾರ್ಥ ಫಲಾಪೇಕ್ಷೆ ಬಯಸದ ಸ್ವಯಂ ಪ್ರೇರಣೆಯಿಂದ ಜಲ, ನೆಲ, ಕನ್ನಡ ಭಾಷೆ, ನಾಡು, ನುಡಿ ಇವುಗಳಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದಲ್ಲಿ ಸೇವೆ ಸಲ್ಲಿಸಿದಾಗ ಒಬ್ಬ ಉತ್ತಮ ನಾಯಕನಾಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಗುಜ್ಜಟ್ಟಿ ಶಿಕ್ಷಕರು, ಎನ್. ವಾಯ್. ಕೆ. ಕಾರ್ಯಕ್ರಮ ಸಂಯೋಜಕರಾದ ಹನುಮಂತ ಲಮಾಣಿ, ವಿನೂತನ ಶಿಕ್ಷಣ ಸಂಸ್ಥೆಯ ಶಿಕ್ಷಕ ಸಿಬ್ಬಂದಿ ವರ್ಗದವರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದೇ ವೇಳೆ ರಾಯಣ್ಣ ಗ್ರಾಮೀಣಾಭಿವೃದ್ಧಿ ಹಾಗೂ ತರಬೇತಿ ಸಂಸ್ಥೆಯನ್ನು ಉದ್ಘಾಟಿಸಿ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಗದಗಿನಮಠರವರು ಸ್ವಾಗತಿಸಿ, ನಿರೂಪಿಸಿದರು. ಕೊನೆಯಲ್ಲಿ ವಿನಾಯಕ ಬಳ್ಳಿ ವಂದಿಸಿದರು.

ವರದಿ : ಕೋಗಳಿ ಶೇಖರ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.