ಕೆ.ಎನ್.ಪಿ.ವಾರ್ತೆ,ಮಂಡ್ಯ,ನ.21;

ಚೆನ್ನೈನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಆರ್.ಪಿ.ಎಫ್‌. ಯೋಧ, ಮಂಡ್ಯ ತಾಲೂಕು ಹನಿಯಂಬಾಡಿ ಗ್ರಾಮದ ನಿವಾಸಿ ದೇವರಾಜು ಹೆಚ್. ಏನ್. (40) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಜಾಂಡೀಸ್ ಕಾಯಿಲೆಗೆ ಒಳಗಾಗಿದ್ದ ದೇವರಾಜ್ ಅವರು ಚೆನ್ನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಮೃತ ಯೋಧನ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲಾಗುತ್ತಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಮೃತ ಯೋಧನ ಪಾರ್ಥಿವ ಶರೀರ ಹುಟ್ಟೂರು ಹನಿಯಂಬಾಡಿ ಗ್ರಾಮವನ್ನು ತಲುಪುವ ಸಾಧ್ಯತೆ ಇದೆ.

ಹನಿಯಂಬಾಡಿ ಗ್ರಾಮದ ಡೊಡ್ಡನಾರಯಣಿ ಬೋರಮ್ಮ ನವರ ಮಗನಾದ ದೇವರಾಜು ಚೆನ್ನೈನಲ್ಲಿ 5ನೇ ಬೆಟಾಲಿಯನ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಪತ್ನಿ ಗಾಯತ್ರಿ, ಮಕ್ಕಳಾದ ಆದರ್ಶ, ಮಂಜು ಎಂಬುವವರನ್ನು ಇವರು ಅಗಲಿದ್ದಾರೆ.

ಇಂದು ಮಧ್ಯಾಹ್ನ 1:30ಕ್ಕೆ ಹನಿಯಂಬಾಡಿ ಗ್ರಾಮದಲ್ಲಿ ಮೃತರ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.