ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಡಿ.18;

ಹೊಸಪೇಟೆಯ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್‌ 50 ಸುರಂಗದಲ್ಲಿ ಬಿರುಕು ಕಾಣಿಸಿಕೊಂಡಿದೆ.

ಹೊಸಪೇಟೆಯ ಹೊರವಲಯದಲ್ಲಿರುವ ಗುಂಡಾ ಸಸ್ಯ ಉದ್ಯಾನವನ ಬಳಿಯಿರುವ ಸುರಂಗ ಮಾರ್ಗ ಶಿಥಿಲಗೊಂಡಿದ್ದು, ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ.

ರಾಷ್ಟ್ರೀಯ ಹೆದ್ದಾರಿ 50ರ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಸುರಂಗದ ಒಳಭಾಗ ಸಿಮೆಂಟ್ ಬ್ಲಾಕ್ ಗಳಿಂದ ಕೂಡಿದೆ. ಕಳೆದೆರಡು ತಿಂಗಳಿನಿಂದ ಅಲ್ಲಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ.

ಈ ಸುರಂಗ ಮಾರ್ಗವು ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗೆ, ಮಂಗಳೂರು, ವಿಜಯಪುರ, ಬಾಗಲಕೋಟೆ, ಮಹಾರಾಷ್ಟ್ರದ ಸೋಲಾಪುರ ಸೇರಿದಂತೆ ಅನೇಕ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಸುರಂಗದ ಮೇಲ್ಭಾಗದಲ್ಲಿ ಬೀಳುವ ಮಳೆ ನೀರು ನೇರವಾಗಿ ಬಿರುಕುಬಿಟ್ಟ ಬ್ಲಾಕ್ ಗಳಿಂದ ಹೆದ್ದಾರಿ ಮೇಲೆ ಬಂದು ನಿಲ್ಲುತ್ತಿದ್ದು, ಬ್ಲಾಕ್ ಗಳಲ್ಲಿ ಫಂಗಸ್ ಕಾಣಿಸಿಕೊಂಡು, ಹಲವೆಡೆ ಸಿಮೆಂಟ್ ಕಿತ್ತುಹೋಗಿದೆ.

ಈ ಬ್ಲಾಕ್ ಗಳ ಮೂಲಕ ವಿದ್ಯುತ್ ತಂತಿ ಹಾದುಹೋಗಿದ್ದು, ವಿದ್ಯುದೀಪಗಳನ್ನು ಅಳವಡಿಸಲಾಗಿದ್ದು, ಸೋರಿಕೆ ತಡೆಗಟ್ಟದಿದ್ದರೆ ಶಾರ್ಟ್ ಸರ್ಕ್ಯೂಟ್ ಆಗುವ ಅಪಾಯವೂ ಇದೆ.

ದಿನನಿತ್ಯ ಹಗಲುರಾತ್ರಿ ಸಾವಿರಾರು ವಾಹನ ಸಂಚರಿಸುವ ಈ ಸುರಂಗ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಉಕ್ಕಿನ ಕಾರ್ಖಾನೆ, ಸಾವಿರಾರು ಮೈನ್ಸ್ ಲಾರಿ ವಾಹನ ಓಡಾಡುವ ರಸ್ತೆಯಿದಾಗಿದೆ.

ಸುರಂಗ ಮಾರ್ಗವು ವಿಶ್ವದರ್ಜೆಯಲ್ಲಿ ನಿರ್ಮಾಣವಾಗಿತ್ತು. ಸುರಂಗದೊಳಗೆ ವಾಹನ ಸಂಚಾರ, ಗುಡ್ಡದ ಮೇಲೆ ರೈಲು ಸಂಚಾರ ನಯನಮನೋಹರ. ಈ ಸುರಂಗದಲ್ಲಿ ಟಗರು, ಸೇರಿದಂತೆ ಹಲವು ಸಿನಿಮಾಗಳ ಚಿತ್ರೀಕರಣವೂ ಕೂಡ ನಡೆದದ್ದುಂಟು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.