ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜು.26;
1967 ರಿಂದ ನಕ್ಸಲ್ ಬಾರಿ ಹೋರಾಟದ ಸಂಸ್ಥಾಪಕ ಸದಸ್ಯರಾದ ಕಾ|| ಪಿ.ಡಿ ಭಕ್ಷಿ ಇಂದು ಬೆಳಿಗಿನ ಜಾವ ದೆಹಲಿಯಲ್ಲಿ ನಿಧನರಾಗಿದ್ದಾರೆ. ಇವರ ಸ್ಮರಣಾರ್ಥವಾಗಿ ಗಂಗಾವತಿಯ ಕ್ರಾಂತಿಕೇಂದ್ರದಲ್ಲಿ ಇವರನ್ನು ಸ್ಮರಣಿಸಿ ಶೋಕಾಚರಣೆ ಮಾಡಲಾಯಿತು.
ಕಾ|| ಭಕ್ಷಿಯವರು 1967 ರಿಂದ ಕಾ|| ಚಾರುಮುಜುಂದಾರ, ಕಾ|| ಕಾನುಸನ್ಯಾಲ್‍ರ ಜೊತೆಗೆ ನಕ್ಸಲ್ ಬಾರಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. 1969 ರಲ್ಲಿ ಸಿ.ಪಿ.ಐ.ಎಂ.ಎಲ್ ಪಕ್ಷ ಹುಟ್ಟಿದಾಗಿನಿಂದ ಇಂದಿನವರೆಗೆ ಸಿ.ಪಿ.ಐ.ಎಂ.ಎಲ್ ಪಕ್ಷದ ಕ್ರಾಂತಿಕಾರಿ ಹೋರಾಟಗಳಿಗೆ ನಾಯಕತ್ವ ವಹಿಸಿದ್ದರು.
ಕರ್ನಾಟಕ ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷದ ಉಸ್ತುವಾರಿಯಾಗಿ 2002 ರಿಂದ 2005 ರವರೆಗೆ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ಪಕ್ಷ ಬೆಳೆಯಲು ಶ್ರಮಿಸಿದ್ದಾರೆ ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ಕಾ|| ಭಕ್ಷಿಯವರನ್ನು ನೆನೆಸಿಕೊಂಡರು.
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.