ಕೆ.ಎನ್.ಪಿ.ಚುಟುಕು;

ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಚುಟುಕು ವಿಭಾಗದಲ್ಲಿ ಕವಿ ಬಸವರಾಜ ಕಾಸೆ ಅವರ ‘ಬೆಳಕು’ ಎಂಬ ಚುಟುಕನ್ನು ಪ್ರಕಟಿಸಲಾಗಿದೆ. ಸಹೃದಯರು ಓದಿ ತಮ್ಮಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ. 

ಬೆಳಕು

ಕತ್ತಲು ಎಲ್ಲೆಲ್ಲಿ ಇದೆಯೋ
ಅಲ್ಲಿ ಎಲ್ಲಾ ಒಮ್ಮೆಯಾದರೂ
ತೂಗಿ ಬಿಡಬೇಕು ಆಕಾಶಬುಟ್ಟಿ
ಮಮತೆಯ ತೊಟ್ಟಿಲಂತೆ!!

ನಾ ಬೆಳಕು ಬಯಸಿದೆ
ಕತ್ತಲೆಯಲ್ಲಿ ನಿಂತು
ಒಂದು ಹಣತೆ ಹಿಡಿದು!!
ಆದರೆ ಆ ಕತ್ತಲೆ
ತಾನೇ ಬೆಳಗಾಗ ಬಯಸಿತ್ತು!!

ಮನೆಯೊಳಗಿನ ಮನಗಳ ದೀಪ
ಹಪಾಹಪಿಸುತ್ತಿತ್ತು
ಹೊರಗೂ ಬೆಳಕಾಗಲು
ಅದಕ್ಕಾಗಿಯೇ ಹಚ್ಚಿದರು
ಹೆಚ್ಚು ಸಾಲುಗಳ ದೀಪ

ನಾವು ಹಚ್ಚಿದೆವೆಂದು ಹತ್ತು ದೀಪ!
ಅಲ್ಲೊಬ್ಬ ಹಚ್ಚಿದ ಇಪ್ಪತ್ತು ದೀಪ!!
ಆದರೆ ಬೆಳಕು,
ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ
ಸದ್ದಿಲ್ಲದೆ ಪ್ರಸಾರವಾಗಿ
ಪರಸ್ಪರ ವಿನಿಮಯವಾಗುತ್ತಿತ್ತು!!

ಅತ್ತಿತ್ತ ಓಲಾಡಿ ಕುಲುಕುವ ದೀಪ
ಕ್ಷಣ ಕ್ಷಣ ಚಂಚಲವಾಗಿ
ಮತ್ತೆ ಧೃಡವಾಗುವ
ಈ ಮನಸ್ಸಿನ ವಯ್ಯಾರದಷ್ಟೆ ಸಹಜ

ಕತ್ತಲೆಗೆ ತೋರಿಸಬೇಕು ಅಲ್ವಾ
ಬೆಳಕು ತನ್ನ ಆಂತರ್ಯದ ಬಗೆಯನ್ನು!
ಅದಕ್ಕೆ ದೀಪಾವಳಿಯಾಯಿತು
ಅಮವಾಸೆಯ ದಿನದಂದೇ!!

ಬಸವರಾಜ ಕಾಸೆ

ಮು| ಪೋ| ದೇವಾಪೂರ
ತಾ| ಜಿ| ವಿಜಯಪುರ
ಪಿನ್ ಕೋಡ್ 586125
pradeepbasu40@gmail.com
7676583771

ಕೆ.ಎನ್.ಪಿ.ಯ ಸಮಸ್ತ ಓದುಗ ಬಳಗಕ್ಕೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು…

ಬೆಳಕಿನ ಹಬ್ಬ ನಿಮಗೆ ಸುಖ, ಸಂಪತ್ತು, ನೆಮ್ಮದಿ ಕರುಣಿಸಲಿ. ನಿಮ್ಮ ಜೀವನ ಸಮೃದ್ಧಿಯ ಹಾದಿಯಲ್ಲಿ ಸಾಗಲಿ….. ದೀಪದಂತೆ ನಿಮ್ಮ ಬದುಕೂ ಪ್ರಕಾಶಮಾನವಾಗಿರಲಿ. ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಜೀವನ ಉಜ್ವಲವಾಗಲಿ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.