ಕೆ.ಎನ್.ಪಿ.ವಾರ್ತೆ,ನವದೆಹಲಿ,ಡಿ.21;

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ, ಹಿಂಸಾಚಾರ ತೀವ್ರವಾಗಿರುವ ಹಿನ್ನೆಲೆ ಕೇಂದ್ರ ಗೃಹ ಸಚಿವಾಲಯವು ಭಾರತೀಯ ಪೌರತ್ವ ಪಡೆಯಲು ಪೌರತ್ವ ಕಾಯ್ದೆಯಡಿ ಇರುವ ಐದು ಷರತ್ತುಗಳನ್ನು ಬಿಡುಗಡೆ ಮಾಡಿದೆ.

1955ರ ಪೌರತ್ವ ಕಾಯ್ದೆ ಪ್ರಕಾರ, ಮೊದಲ ಷರತ್ತು, 1950, ಜನವರಿ 26ಕ್ಕೆ ಭಾರತದಲ್ಲಿ ನಿವಾಸ ಹೊಂದಿದ್ದವರು ಅಥವಾ ಭಾರತದ ಪ್ರಾಂತ್ಯದೊಳಗೆ ಜನಿಸಿದವರಿಗೆ ಸಂವಿಧಾನ ವಿಧಿ 5ರಡಿ ಭಾರತದ ನಾಗರಿಕತೆ ಸಿಗಲಿದೆ ಎಂದು ಅಧಿಸೂಚನೆ ಹೇಳುತ್ತದೆ.

ಮಗುವಿನ ಪೋಷಕರು ಭಾರತದಲ್ಲಿ ಜನಿಸಿದ್ದರೆ ಅಥವಾ 1950ರ ಜನವರಿ 26 ಅಥವಾ ಅದಕ್ಕಿಂತ ನಂತರ 1987ರ ಜುಲೈ 1ರೊಳಗೆ ಯಾವುದೇ ವ್ಯಕ್ತಿ ಭಾರತದಲ್ಲಿ ಜನಿಸಿದ್ದರೆ, ಹುಟ್ಟಿನಿಂದಲೇ ಆತ ಅಥವಾ ಅವಳು ಭಾರತದ ಪ್ರಜೆ ಎನಿಸಿಕೊಳ್ಳುತ್ತಾರೆ.

ಯಾವುದೇ ವ್ಯಕ್ತಿ ಭಾರತದಲ್ಲಿ ಜುಲೈ 1, 1987 ಮತ್ತು ಡಿಸೆಂಬರ್ 3, 2004ರ ಮಧ್ಯೆ ಜನಿಸಿದ್ದರೆ ಅಥವಾ ಆ ವ್ಯಕ್ತಿಯ ಪೋಷಕರು ಭಾರತದವರಾಗಿದ್ದರೆ ಹುಟ್ಟಿನಿಂದಲೇ ಭಾರತೀಯ ಎನಿಸಿಕೊಳ್ಳುತ್ತಾರೆ.

2004ರ ಡಿಸೆಂಬರ್ 3ರ ನಂತರ ಭಾರತದಲ್ಲಿ ಹುಟ್ಟಿದ ವ್ಯಕ್ತಿಯ ಪೋಷಕರು ಭಾರತೀಯರಾಗಿದ್ದರೆ ಅಥವಾ ಮಗುವಿನ ಜನನ ಸಮಯದಲ್ಲಿ ಪೋಷಕರಲ್ಲಿ ಯಾರಾದರೊಬ್ಬರು ಅಕ್ರಮ ವಲಸಿಗರಾಗಿರದಿದ್ದರೆ ಮತ್ತು ಮತ್ತೊಬ್ಬ ಭಾರತೀಯನಾಗಿದ್ದರೆ ಹುಟ್ಟಿನಿಂದಲೇ ಭಾರತದ ಪೌರತ್ವ ಸಿಗುತ್ತದೆ.

ಪೂರ್ವಜರ ಪೌರತ್ವವನ್ನು ತೆಗೆದುಕೊಂಡರೆ, 1950ರ ಜನವರಿ 26ರ ನಂತರ ಆದರೆ 1992ರ ಡಿಸೆಂಬರ್ 10ರೊಳಗೆ ಭಾರತದ ಹೊರಗೆ ಜನಿಸಿದವರು ಇವರ ಜನನ ಸಮಯದಲ್ಲಿ ಮಗುವಿನ ತಂದೆ ಭಾರತೀಯನಾಗಿದ್ದರೆ ಹುಟ್ಟಿದ ಮಗುವಿಗೆ ಸಹ ಭಾರತದ ಪೌರತ್ವ ಸಿಗುತ್ತದೆ.

ಭಾರತದ ಪ್ರಜೆಗಳಾಗಿರುವ ವ್ಯಕ್ತಿಗಳ ಅಪ್ರಾಪ್ತ ಮಕ್ಕಳು ಭಾರತದ ಪ್ರಜೆಯಾಗಿ ನೋಂದಾಯಿಸಲು ಅರ್ಹರಾಗಿದ್ದಾರೆ, ಮತ್ತು ಪೂರ್ಣ ವಯಸ್ಸು ಮತ್ತು ಪೋಷಕರು ಭಾರತದ ಪ್ರಜೆಗಳಾಗಿ ನೋಂದಾಯಿಸಿಕೊಂಡಿದ್ದರೆ ಮಕ್ಕಳಿಗೆ ಕೂಡ ಭಾರತದ ಪೌರತ್ವ ಸಿಗುತ್ತದೆ.

12 ವರ್ಷಗಳ ಕಾಲ ಭಾರತದಲ್ಲಿ ವಾಸವಿದ್ದರೆ ಅಂತವರಿಗೆ ಇಲ್ಲಿನ ಪೌರತ್ವ ಸಹಜವಾಗಿ ಸಿಗುತ್ತದೆ ಎಂದು ಸಹ ಗೃಹ ಸಚಿವಾಲಯದ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಇನ್ನು ಯಾವುದಾದರೂ ಹೊಸ ಪ್ರಾಂತ್ಯ ಭಾರತ ದೇಶಕ್ಕೆ ಸೇರಿದರೆ ಆ ಪ್ರಾಂತ್ಯದಲ್ಲಿರುವ ಜನರು ಭಾರತದ ನಾಗರಿಕತ್ವ ಪಡೆಯುತ್ತಾರೆ. ಅಧಿಸೂಚನೆ ಹೊರಡಿಸಿದ ದಿನದಿಂದ ಅಲ್ಲಿನ ಜನರಿಗೆ ಭಾರತದ ಪೌರತ್ವ ಸಿಗುತ್ತದೆ. ಇದು ಗೋವಾ, ದಮನ್ ಮತ್ತು ಡಿಯು, ಸಿಕ್ಕಿಂ ಮತ್ತು ಹಲವು ಬಾಂಗ್ಲಾದೇಶದ ಭಾಗದ ಜನರಿಗೆ 2014ರಲ್ಲಿ ಭಾರತದ ಪೌರತ್ವ ಸಿಕ್ಕಿತ್ತು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.