ಕೆ.ಎನ್.ಪಿ.ವಾರ್ತೆ,ಜಾರ್ಖಂಡ್‌,ಮಾ.31;

ಸಿಬಿಎಸ್ಇ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಛಾತ್ರ ಪೊಲೀಸರು ಜಾರ್ಖಂಡ್‌, ಬಿಹಾರದಲ್ಲಿ 3 ಜನ ಆರೋಪಿಗಳನ್ನು ಬಂಧಿಸಿದ್ದು, 10ನೇ ತರಗತಿಯ 9 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.

ಸಿಬಿಎಸ್ಇ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ನಲ್ಲಿ ಒಬ್ಬ ಹಾಗೂ ಬಿಹಾರದಲ್ಲಿ ಇಬ್ಬರು ಆರೋಪಿಗಳನ್ನು ಛಾತ್ರಾ ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಹಾಗೂ ಹರಿಯಾಣದಿಂದ ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವ ಬಗ್ಗೆ ತನಿಖೆ ಆರಂಭಿಸಿದ್ದ ಪೊಲೀಸ್ ತಂಡ ಜಾರ್ಖಂಡ್‌ ಮತ್ತು ಬಿಹಾರ ರಾಜ್ಯಗಳಿಂದ ಹೊರಗೆ ‘ಸ್ಟಡಿ ವಿಷನ್‌’ ತರಬೇತಿ ಕೇಂದ್ರದ 3ಜನ ಆರೋಪಿಗಳನ್ನು ಬಂಧಿಸಿದ್ದು, 10ನೇ ತರಗತಿಯ 9 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ವಿಶೇಷ ತನಿಖಾ ತಂಡದಿಂದ ತನಿಖೆ ಮುಂದುವರೆದಿದೆ.