ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಡಿ.28;

2019ಕ್ಕೆ ಗುಡ್‌ಬೈ ಹೇಳಿ ಬಹುತೇಕ ಜನರು ಹೊಸ ವರ್ಷದಿಂದ ಹೊಸತನ್ನು ಕಾಣಲು ಬಯಸುತ್ತಾರೆ. ಹೊಸ ವರ್ಷವನ್ನು ಸಂಭ್ರಮಿಸುವ ಮೊದಲು ಇದನ್ನೊಮ್ಮೆ ಓದಿ.

ಯಾರಿಗಾದರೂ ಬ್ಯಾಂಕಿನ ಚೆಕ್ ಕೊಡುವಾಗ, ಇಲ್ಲವೇ ಯಾವುದೇ ಪ್ರಮುಖ ದಾಖಲೆ ಪತ್ರಗಳಲ್ಲಿ ಸಹಿ ಹಾಕಿದಾಗ ನೀವು ವ್ಯವಹಾರದ ದಿನಾಂಕವನ್ನು ತಿಂಗಳು ಮತ್ತು ವರ್ಷದ ಜೊತೆಗೆ ನಮೂದಿಸುವುದು ಸಹಜ.

ಈ ವೇಳೆ ಅನೇಕರು ಮಾಡುವ ಸಾಮಾನ್ಯ ವಿಚಾರ ಇಸವಿಯನ್ನು ಶಾರ್ಟ್ ಕಟ್‌ನಲ್ಲಿ ಬರೆಯುತ್ತಾರೆ. ಉದಾಹರಣೆಗೆ 28-12-2019 ರ ದಿನಾಂಕವನ್ನು ಶಾರ್ಟ್‌ಕಟ್‌ನಲ್ಲಿ 28-12-19 ಎಂದು ಬರೆಯುವುದನ್ನು ನೀವು ಗಮನಿಸಿರುತ್ತೀರಿ. ಆದರೆ ನೀವು ಹೊಸ ವರ್ಷದಲ್ಲಿ ಹೀಗೆ ಬರೆದರೆ ತೊಂದರೆಗೆ ಸಿಲುಕಬೇಕಾಗಬಹುದು. ಏಕೆಂದರೆ 2020 ವರ್ಷವನ್ನು ನೀವು 20 ಎಂದು ಶಾರ್ಟ್‌ಕರ್ಟ್‌ ನಲ್ಲಿ ಬರೆದರೆ ತೊಂದರೆ ಎದುರಿಸಬೇಕಾಗಬಹುದು.

2020ರ ವರ್ಷವನ್ನು 20 ಎಂದಷ್ಟೇ ಶಾರ್ಟ್‌ಕಟ್‌ನಲ್ಲಿ ನಮೂದಿಸಿದರೆ ಅದಕ್ಕೆ ಇನ್ನೇನಾದರೂ ಸೇರಿಸಿ ನಿಮಗೆ ತೊಂದರೆ ಮಾಡುವ ಸಾಧ್ಯತೆಗಳಿವೆ.

ಉದಾಹರಣೆಗೆ 20ರ ಇಸವಿಯನ್ನು ತಿದ್ದಿ 2000ನೇ ಇಸವಿಯಿಂದ 2019ರವರೆಗೆ ಅಥವಾ 2020 ರಿಂದ 2099ರವರೆಗೆ ಯಾವ ಇಸವಿಯನ್ನು ಬೇಕಾದರೂ ಬರೆದುಕೊಳ್ಳಲು ಅವಕಾಶವಿರುತ್ತದೆ.

ಹೀಗಾಗಿ ಚೆಕ್‌ಗಳಲ್ಲಿ, ಒಪ್ಪಂದ ಪತ್ರಗಳಲ್ಲಿ, ಅಥವಾ ಇನ್ಯಾವುದೇ ಪ್ರಮುಖ ದಾಖಲೆ ಪತ್ರಗಳಲ್ಲಿ 2020ನೇ ಇಸವಿಯನ್ನು ಬರೆಯುವಾಗ ಪೂರ್ಣವಾಗಿ ನಮೂದಿಸಿ, ಇದು ಕಾನೂನು ಸಹಿತ ಸುರಕ್ಷಿತ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.