ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.22;

ಡಿಸೆಂಬರ್ 5 ರಂದು ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಸ್ಪರ್ಧಿಸುವ ಅವಕಾಶ ಸಿಕ್ಕಿದ್ದು, ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಲು ಬಹುತೇಕ ಎಲ್ಲರಿಗೂ ಟಿಕೆಟ್ ಸಿಕ್ಕಿದೆ.

ಕಾಂಗ್ರೆಸ್ ಪಕ್ಷ ಸೂಕ್ತ ಅಭ್ಯರ್ಥಿಗಳ ಕೊರತೆ ಎದುರಿಸಿದರೂ ಬಿಜೆಪಿಯಂತೆ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಒಂದೆರಡು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಒಟ್ಟಾರೆ ಕಣದಲ್ಲಿ 165 ಮಂದಿ ಸ್ಪರ್ಧಿಗಳಿದ್ದಾರೆ.

ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕವಾಗಿತ್ತು. ನವೆಂಬರ್ 21ರ ನಂತರ ಮುಖ್ಯ ಚುನಾವಣಾಧಿಕಾರಿ ಪ್ರಕಟಿಸಿದಂತೆ 165 ಮಂದಿ ಅಭ್ಯರ್ಥಿಗಳಿದ್ದು, 156 ಪುರುಷ, 9 ಮಹಿಳಾ ಸ್ಪರ್ಧಿಗಳಿದ್ದಾರೆ.

ಶಿವಾಜಿನಗರದಲ್ಲಿ ಅತ್ಯಧಿಕ 19, ಹೊಸಕೋಟೆಯಲ್ಲಿ 17 ಸ್ಪರ್ಧಿಗಳಿದ್ದರೆ, ಕೆ. ಆರ್ ಪೇಟೆ ಹಾಗೂ ಯಲ್ಲಾಪುರದಲ್ಲಿ ಕನಿಷ್ಠ 7 ಮಂದಿ ಸ್ಪರ್ಧಿಗಳಿದ್ದಾರೆ.
ನಾಮಪತ್ರ ಹಿಂಪಡೆಯುವುದರಲ್ಲಿ ಹುಣಸೂರು ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆ ದಾಖಲಾಗಿದೆ. ಕೊನೆ ದಿನದಂದು 11 ಮಂದಿ ಕಣದಿಂದ ಹಿಂದೆ ಸರಿದಿದ್ದಾರೆ.

15 ಕ್ಷೇತ್ರದ ಉಪ ಚುನಾವಣೆಗೆ ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಮತ ಎಣಿಕೆ ನಡೆಯಲಿದೆ.

ಹಿರೇಕೆರೂರು

  • ಬಿ.ಸಿ ಪಾಟೀಲ್ (ಬಿಜೆಪಿ)
  • ಬಿಎಚ್ ಬನ್ನಿಕೋಡ್ (ಕಾಂಗ್ರೆಸ್)
  • ದೇವೇಂದ್ರಪ್ಪ ಜಯಪ್ಪ ((ಯುಪಿಪಿ)) (ಜೆಡಿಎಸ್)

ಯಲ್ಲಾಪುರ

  • ಶಿವರಾಮ ಹೆಬ್ಬಾರ್ (ಬಿಜೆಪಿ)
  • ಭೀಮಣ್ಣ ನಾಯಕ್ (ಕಾಂಗ್ರೆಸ್)
  • ಚೈತ್ರಾ ಗೌಡ (ಜೆಡಿಎಸ್)

ರಾಣೆಬೆನ್ನೂರು

  • ಅರುಣ್ ಕುಮಾರ್ ಪೂಜಾರಿ (ಬಿಜೆಪಿ)
  • ಕೆ.ಬಿ ಕೋಳಿವಾಡ (ಕಾಂಗ್ರೆಸ್)
  • ಮಲ್ಲಿಕಾರ್ಜುನ ಹಲಗೇರಿ (ಜೆಡಿಎಸ್)

ವಿಜಯನಗರ

  • ಆನಂದ್ ಸಿಂಗ್ (ಬಿಜೆಪಿ)
  • ವಿ.ವೈ ಘೋರ್ಪಡೆ (ಕಾಂಗ್ರೆಸ್)
  • ಎನ್. ಎಂ ನಬಿ (ಜೆಡಿಎಸ್)

ಚಿಕ್ಕಬಳ್ಳಾಪುರ

  • ಡಾ. ಕೆ ಸುಧಾಕರ್ (ಬಿಜೆಪಿ)
  • ಎಂ. ಅಂಜನಪ್ಪ (ಕಾಂಗ್ರೆಸ್)
  • ರಾಧಾಕೃಷ್ಣ (ಜೆಡಿಎಸ್)

ಕೆ. ಆರ್ ಪುರ

  • ಬೈರತಿ ಬಸವರಾಜು (ಬಿಜೆಪಿ)
  • ಎಂ.ನಾರಾಯಣ ಸ್ವಾಮಿ (ಕಾಂಗ್ರೆಸ್)
  • ಸಿ ಕೃಷ್ಣಮೂರ್ತಿ (ಜೆಡಿಎಸ್)

ಯಶವಂತಪುರ

  • ಎಸ್. ಟಿ ಸೋಮಶೇಖರ್ (ಬಿಜೆಪಿ)
  • ಪಿ. ನಾಗರಾಜ್ (ಕಾಂಗ್ರೆಸ್)
  • ಟಿ.ಎನ್ ಜವರಾಯಿಗೌಡ (ಜೆಡಿಎಸ್)

ಶಿವಾಜಿನಗರ

  • ಎಂ. ಸರವಣ (ಬಿಜೆಪಿ)
  • ರಿಜ್ವಾನ್ ಅರ್ಷದ್ (ಕಾಂಗ್ರೆಸ್)
  • ತನ್ವೀರ್ ಅಹ್ಮದ್ (ಜೆಡಿಎಸ್)

ಹೊಸಕೋಟೆ

  • ಎಂಟಿಬಿ ನಾಗರಾಜ್ (ಬಿಜೆಪಿ)
  • ಪದ್ಮಾವತಿ ಸುರೇಶ್ (ಕಾಂಗ್ರೆಸ್)
  • ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡಗೆ ಬೆಂಬಲ (ಜೆಡಿಎಸ್)

ಕೆ. ಆರ್ ಪೇಟೆ

  • ನಾರಾಯಣ ಗೌಡ (ಬಿಜೆಪಿ)
  • ಕೆ. ಬಿ ಚಂದ್ರಶೇಖರ್ (ಕಾಂಗ್ರೆಸ್)
  • ದೇವರಾಜ್ ಬಿ. ಎಲ್ (ಜೆಡಿಎಸ್)

ಹುಣಸೂರು 

  • ಎಚ್ ವಿಶ್ವನಾಥ್ (ಬಿಜೆಪಿ)
  • ಎಚ್. ಪಿ ಮಂಜುನಾಥ್ (ಕಾಂಗ್ರೆಸ್)
  • ಸೋಮಶೇಖರ್ (ಜೆಡಿಎಸ್)

ಮಹಾಲಕ್ಷ್ಮಿ ಲೇಔಟ್

  • ಗೋಪಾಲಯ್ಯ (ಬಿಜೆಪಿ)
  • ಎಂ. ಶಿವರಾಜು (ಕಾಂಗ್ರೆಸ್)
  • ಡಾ. ಗಿರೀಶ್ ನಾಶಿ (ಜೆಡಿಎಸ್)

ಗೋಕಾಕ

  • ರಮೇಶ್ ಜಾರಕಿಹೊಳಿ (ಬಿಜೆಪಿ)
  • ಲಖನ್ ಜಾರಕಿಹೊಳಿ (ಕಾಂಗ್ರೆಸ್)
  • ಅಶೋಕ್ ಪೂಜಾರಿ (ಜೆಡಿಎಸ್)

ಕಾಗವಾಡ

  • ಶ್ರೀಮಂತ ಪಾಟೀಲ (ಬಿಜೆಪಿ)
  • ಭರಮಗೌಡ ಕಾಗೆ (ಕಾಂಗ್ರೆಸ್)
  • ಶ್ರೀಶೈಲ ತುಗಶೆಟ್ಟಿ (ಜೆಡಿಎಸ್)

ಅಥಣಿ

  • ಮಹೇಶ್ ಕುಮಟಳ್ಳಿ (ಬಿಜೆಪಿ)
  • ಜಿ.ಬಿ ಮಂಗ್ಸೂಳಿ (ಕಾಂಗ್ರೆಸ್)
  • ನಾಗನಾಥ ರಾವ್ (ಯುಪಿಪಿ) (ಜೆಡಿಎಸ್)

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.