ಕೆ.ಎನ್.ಪಿ.ವಾರ್ತೆ,ಧಾರವಾಡ,ಆ.19;
ಜಿಲ್ಲಾಧಿಕಾರಿ ಎಂ.ದೀಪಾ ಅವರು ಅವಳಿ ನಗರದಲ್ಲಿ ನಡೆಯುತ್ತಿರುವ ಬಿ.ಆರ್.ಟಿ.ಎಸ್. ಕಾಮಗಾರಿಗಳನ್ನು ಪರಿಶೀಲಿಸಿದರು.
ನಿನ್ನೆ ಬೆಳಿಗ್ಗೆ ಆಲೂರು ವೆಂಕಟರಾವ್ ವೃತ್ತದಿಂದ ಗಾಂಧಿನಗರದವರೆಗೆ ಸುಮಾರು 3 ಕೀ.ಮಿ ಸ್ವತಃ ಕಾಲ್ನಡಿಗೆಯಲ್ಲಿ ತೆರಳಿ ಪ್ರತಿ ಬಸ್ ನಿಲ್ದಾಣ, ರಸ್ತೆ, ಮತ್ತು ಚರಂಡಿ ನಿರ್ಮಾಣದ ಕಾಮಗಾರಿಗಳನ್ನು ಪರಿಶೀಲಿಸಿ ಅಧಿಕಾರಿಗಳಿಂದ ಸ್ಪಷ್ಟನೆ ಪಡೆದರು.
ಬಹುತೇಕ ನವಂಬರ್ 1 ಕ್ಕೆ ಬಿ.ಆರ್.ಟಿ.ಎಸ್. ಯೋಜನೆಯಡಿ ಬಸ್ ಸಂಚಾರ ಆರಂಭವಾಗಲಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಎಲ್ಲ ಕಾಮಗಾರಿಗಳನ್ನು ಸಂಬಂಧಿತ ಇಲಾಖೆ, ಗುತ್ತಿಗೆದಾರರು ಪೂರ್ಣಗೊಳಿಸಬೇಕು. ಯೋಜನೆಯಲ್ಲಿ ನಿಯಮಾವಳಿಯಂತೆ ಕಾಮಗಾರಿ ಗುಣಮಟ್ಟವಾಗಿರಬೇಕು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಯನ್ನು ಹೊಣೆಗಾರರನ್ನಾಗಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದು ಎಚ್ಚರಿಸಿದರು.
ನಿಧಾನಗತಿಯಲ್ಲಿ ಬಿ.ಆರ್.ಟಿ.ಸಿ. ಕಾಮಗಾರಿ ಕೆಲಸ ನಿರ್ವಹಿಸುತ್ತಿದ್ದ ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ನಿರ್ಧಿಷ್ಟ ಕಾಲಮಿತಿ ನೀಡುವ ಮೂಲಕ ಜಿಲ್ಲಾಧಿಕಾರಿಗಳು ಚುರುಕು ಮುಟ್ಟಿಸಿದರು. ಪ್ರತಿದಿನ ಫೋಟೊ ಸಹಿತ ಪ್ರಗತಿ ವರದಿ ನೀಡುವಂತೆ ಬಿ.ಆರ್.ಟಿ.ಎಸ್. ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿ ಪರಿಶೀಲನೆ ಸಂದರ್ಭದಲ್ಲಿ ಬಿ.ಆರ್.ಟಿ.ಎಸ್‍ನ ಉಪ ಪ್ರಧಾನ ವ್ಯವಸ್ಥಾಪಕ ಬಸವರಾಜ ಕೆರಿ, ಹುಬ್ಬಳ್ಳಿ ಕೆ.ಆರ್.ಡಿ.ಸಿ.ಎಲ್.ನ ಕಾರ್ಯಪಾಲಕ ಅಭಿಯಂತರ ಸುನಿಲ್ ವಿ.ಸಿ, ಸಹಾಯಕ ಕಾರ್ಯಪಾಲಕ ಅಭಿಯಂತರ ನಾರಾಯಣ ಕುರಂದಕರ, ಲಾಸಾ, ಪ್ರಾಜೇಕ್ಟ ಮ್ಯಾನೇಜಮೆಂಟ್ ಕನಸಲ್ಟನ್ಸಿಯ ಟೀಮ್ ಲೀಡರ್ ಸುನಿಲ್ ಅಭ್ಯಂಕರ ಮತ್ತು ಹೆಸ್ಕಾಂ ಹಾಗೂ ಇತರ ಪಾಲಿಕೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ : ಚಂದ್ರು ಹಿರೇಮಠ ಧಾರವಾಡ
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.