ಕೆ.ಎನ್.ಪಿ.ವಾರ್ತೆ,ಬೀಳಗಿ,ಏ.09;

ದೇಶದಲ್ಲಿ ಈ ಬಾರಿಯೂ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಜಮ್ಮು-ಕಾಶ್ಮೀರಕ್ಕೆ ಬೇರೆ ಕಾನೂನನ್ನು ಕೊಟ್ಟಿರುವ ಸಂವಿಧಾನದ 370ನೇ ಪರಿಚ್ಛೇದವನ್ನು ರದ್ದುಪಡಿಸಿ, ಇಡೀ ದೇಶಕ್ಕೆ ಒಂದೇ ಕಾನೂನನ್ನು ಜಾರಿಗೆ ತರಲಾಗುವುದೆಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ತಾಲೂಕಿನ ಗಿರಿಸಾಗರದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಅವರು ಹೀಗೆ ಹೇಳಿದರು. ಬಿಜೆಪಿಯ ಪ್ರಣಾಳಿಕೆಯ ಒಂದು ಮುಖ್ಯವಾದ ಅಂಶ ಇದಾಗಿದೆ. ಆದರೆ ಕಾಂಗ್ರೇಸ್ ನ ಪ್ರಣಾಳಿಕೆಯಲ್ಲಿ ಉಗ್ರಗಾಮಿ ಕಾನೂನನ್ನು ಸರಳೀಕರಣಗೊಳಿಸುವುದು ಒಂದಾಗಿದೆ ಎಂದರು. ರಾಷ್ಟ್ರಭಕ್ತ ಮೋದಿಯವರನ್ನು ಈಗ ಇಡೀ ಪ್ರಪಂಚವೇ ಬೆಂಬಲಿಸುತ್ತಿದೆ ಆದರೆ ಪಾಕಿಸ್ತಾನ ಮತ್ತು ಸಿದ್ಧರಾಮಯ್ಯ ಮಾತ್ರ ವಿರೋಧಿಸುತ್ತಿದ್ದಾರೆ ಎಂದರು.

ಶಾಸಕ ಮುರುಗೇಶ ನಿರಾಣಿ, ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಮಾತಾಡಿದರು. ಮಾಜಿ ಶಾಸಕ ಪಿ.ಎಚ್.ಪೂಜಾರ, ವಿಧಾನ ಪರಿಷತ್ತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಮುಖಂಡರಾದ ಶ್ರೀಶ್ಯೆಲ ಯಂಕಂಚಿಮಠ, ರಾಮಣ್ಣ ಕಾಳಪ್ಪಗೋಳ, ದುಂಡಪ್ಪ ನಾಗನೂರ, ಮಲ್ಲಪ್ಪ ಮುತ್ತಲದಿನ್ನಿ, ಯಮನಪ್ಪ ಹೊಸಮನಿ ಮತ್ತು ಪರಸಪ್ಪ ಹುಳ್ಳಿ ಇದ್ದರು.

ವರದಿ : ಬಸವರಾಜ್ ಬಾಬು ಕೋರಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.