ಕೆ.ಎನ್.ಪಿ.ಮಹಿಳಾಲೋಕ;

ಮೂಲತಃ ಹಾವೇರಿ ತಾಲೂಕು, ಹಾವೇರಿ ಜಿಲ್ಲೆಯವರಾದ ಡಾ. ಅಂಬಿಕಾ ಹಂಚಾಟೆ ತಮ್ಮ ಶಿಕ್ಷಣ ಕ್ಷೇತ್ರ ಹಾಗೂ ಸಾಹಿತ್ಯ ಕ್ಷೇತ್ರದ ಮೂಲಕವೇ ಹೆಸರು ವಾಸಿಯಾದವರು ಜೊತೆಗೆ ಹಲವು ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮದೇ ಆದ ಅತ್ಯುನ್ನತ ಸ್ಥಾನ ದಲ್ಲಿದ್ದುಕ್ಕೊಂಡು ಹಲವು ಸಾಮಾಜಿಕ ಪ್ರಗತಿಪರ ಕಾರ್ಯಗಳಲ್ಲಿ ನಿರತರಾದವರು.

ಇವರ ಅಪ್ಪಟ ಪ್ರತಿಭೆಯನ್ನು ಗುರುತಿಸಿ ಈಗಾಗಲೇ ಹತ್ತು ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿವೆ. ನಿರಂತರ 8 ವರುಷಗಳ ಸಾಧನೆಯ ಹಾದಿಯಲ್ಲಿ ತಮ್ಮದೇ ಆದ ಭಾವಸಾರ ಕ್ಷತ್ರೀಯ ಸಮುದಾಯವು ಡಾ.ಅಂಬಿಕಾ ಹಂಚಾಟೆ ಯವರನ್ನು ಗುರುತಿಸುವಲ್ಲಿ ವಿಳಂಬವಾದರು ನವೆಂಬರ್ 4ರಂದು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಡಾ .ಅಂಬಿಕಾ ಹಂಚಾಟೆ ಯವರನ್ನು ಅಖಿಲ ಭಾರತ ಭಾವಸಾರ ಕ್ಷತ್ರೀಯ ಮಹಾಸಭಾವು “ಭಾವಸಾರ ರತ್ನ “ಎಂಬ ಬಿರುದಿನೊಂದಿಗೆ ವೊಕೇಶನಲ್ ಎಕ್ಸಲೇನ್ಸ್ ಅವಾರ್ಡ್ ನೀಡಿ ಸನ್ಮಾನಿಸಿದೆ.

ಡಾ. ಅಂಬಿಕಾ ಹಂಚಾಟೆ

ನವೆಂಬರ್ 25 ರ ಭಾನುವಾರದಂದು ಹಾವೇರಿ ಜಿಲ್ಲೆಯ ಗುರುಭವನದಲ್ಲಿ ಶ್ರೀ ನಾರಾಯಣರಾವ್ ತಾತುಸ್ಕರ್ ರವರ ನಿರ್ಮಾಣದ ಆಲ್ ಇಂಡಿಯಾ ವಿಸನ್ ಭಾವಸಾರ್ ಫೌಂಡೇಶನ್, ಹಾವೇರಿ ಘಟಕದ ವತಿಯಿಂದ ಡಾ.ಅಂಬಿಕಾ ರವರನ್ನು ಸತ್ಕರಿಸಿ ಸನ್ಮಾನಿಸಲಾಗಿತ್ತು. ಜೊತೆಗೆ ರೀಟಾಯ್ರ್ಡ್ ಲೆಕ್ಟರ್ ಆದ ಶ್ರೀಮಾನ್ ತೇಲ್ಕರ್ ಅವರು ತಮ್ಮ ಅಭಿಮಾನದ ಮೇರೆಗೆ ಇಂತಹ ಒಂದು ಅದ್ಭುತ ಪ್ರತಿಭೆ ಕೇವಲ ನಮ್ಮ ಸಮುದಾಯಕ್ಕೆ ಮಾತ್ರವಲ್ಲ ಇಡೀ ನಮ್ಮ ಕರ್ನಾಟಕಕ್ಕೆ ಒಂದು ಹೆಮ್ಮೆ. ರಾಜ್ಯದಲ್ಲಿ ಇದುವರೆಗೂ ಯಾರು ಮಾಡಿರದ ಹೊಸ ಪ್ರಯತ್ನ ಒಂದನ್ನು ಮಾಡಿ ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೇಕಾರ್ಡ್ ಎಂಬ ಸ್ವಂತ ವೇದಿಕೆಯನ್ನು ಅಧಿಕೃತವಾಗಿ ಸ್ಥಾಪಿಸಿ ನಾಡಿನ ಅದ್ಭುತ ಪ್ರತಿಭೆಗಳನ್ನ ಅವರ ಸಾಧನೆಯನ್ನು ದಾಖಲಿಸುವ ಕಾರ್ಯದಲ್ಲಿ ನಿರತಳಾಗಿರುವದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಅದೇ ವೇದಿಕೆಯಲ್ಲಿ ಡಾ.ಅಂಬಿಕಾ ಹಂಚಾಟೆ ಯವರನ್ನು ಸನ್ಮಾನಿಸಿ ಆದರ್ಶತೆಯನ್ನು ಮೆರೆದರು.

ಇನ್ನು ಅರ್ಥಶಾಸ್ತ್ರ ವಿಷಯದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ (CBSE /ICSE ) ಮತ್ತು ಉನ್ನತ ಪದವಿ ವಿದ್ಯಾಭ್ಯಾಸದಲ್ಲಿ ನಿರತರಾದ ಮತ್ತು PH.D ವಿಭಾಗದವರಿಗೂ ಕೇವಲ ದೇಶದ ವಿದ್ಯಾರ್ಥಿಗಳಿಗಲ್ಲದೆ ಜಪಾನ್, ಅಜರ್ಬೈಜಾನ್, ಲಂಡನ್ ನ ವಿದ್ಯಾರ್ಥಿಗಳಿಗೂ ಇವರು ‘ಇ -ಟ್ಯುಟೋರ್ ‘ಆಗಿ ಟೀಚರ್ ಆನ್ ಸರ್ವಿಸ್ ಎಜುಕೇಷನ್ ಇನ್ಸ್ಟಿಟ್ಯೂಷನ್ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದರಲ್ಲೂ ಉತ್ತಮ ಸಾಧನೆ ಮಾಡಿದ ಇವರಿಗೆ ಇದೆ ಡಿಸೆಂಬರ್ 30 ರಂದು ತಮಿಳುನಾಡಿನ ಪೆರಂಬಲೂರ್ ನಲ್ಲಿ ಅರ್ಥಶಾಸ್ತ್ರ ವಿಭಾಗದ ಶಿಕ್ಷಕಿ ವೃತ್ತಿಗೆ ಬೆಸ್ಟ್ ಫ್ಯಾಕಲ್ಟಿ ಅವಾರ್ಡ್ ಎಂಬ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಡಿ.ಕೆ ಇಂಟರ್ನ್ಯಾಷನಲ್ ರಿಸರ್ಚ್ ಫೌಂಡೇಶನ್ ನ ಸಿಇಒ ಆದ ಡಾ.ದಿನೇಶ್ ಕುಮಾರ್ ತಿಳಿಸಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.