ಕೆ.ಎನ್.ಪಿ.ವಾರ್ತೆ,ನವಲಿ.ಜ.03;

ಭಾರತ ಸಂತ ಮಹಾಂತ ಶರಣರ ನಾಡಲ್ಲಿ ಉದಯಿಸಿದ ಕ್ರಾಂತಿಕಾರಿ ಸಂತ ಸಮಾಜದ ಓರೆಗಳನ್ನ ತಿದ್ದುವಲ್ಲಿ ಪರಿವರ್ತನೆಯ ಹಾದಿ ಸವಿಸಿದ ಮಹಾನ್ ಚೇತನ ಪೇಜಾವರ ಶ್ರೀ. ಇಂತ ಬೆಳಕನ್ನು ನಾವು ಕಳೆದುಕೊಂಡಿದ್ದು ನಾಡಿಗೆ ತುಂಬಲಾರದ ನಷ್ಟ ತಂದಿದೆ ಎಂದು ಉಪನ್ಯಾಸಕ ಸೋಮನಾಥಯ್ಯ ಸ್ವಾಮಿ ಹೀರೆಮಠ ಹಣವಾಳ ತಿಳಿಸಿದರು.

ಸರಕಾರಿ ಪದವಿ ಪೂರ್ವ ಕಾಲೇಜ್ ನವಲಿ, ಪ್ರಕೃತಿ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಲಿಂಗೈಕ್ಯ ವಿಶ್ವೇಶ ತೀರ್ಥ ಪೇಜಾವರ ಶ್ರೀಗಳ ನುಡಿನಮನ ಕಾರ್ಯಕ್ರಮದಲ್ಲಿ ಪೂಜ್ಯರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.

ಭಾರತ ಪರಂಪರೆಯ ಶ್ರೇಷ್ಠ ಸಂತರ ಸಾಲಿನಲ್ಲಿ ಪೇಜಾವರದ ಗುರುಗಳು ಒಬ್ಬರು. ಅವರು ಧೀನ, ದಲಿತರ ಏಳ್ಗೆಗಾಗಿ ಸಮಾಜದ ಪರಿವರ್ತನೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಅಗಮ್ಯ ಚೇತನ ಎಂದರು.

ನಂತರ ಮಾತನಾಡಿದ ಉರ್ದು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಇಬ್ರಾಹಿಂ, ಪೇಜಾವರ ಶ್ರೀಗಳು ಕೋಟ್ಯಂತರ ಭಕ್ತರ ಮನ ಮಂದಿರದಲ್ಲಿ ಶಾಶ್ವತವಾಗಿ ನೆಲೆ ನಿಂತರು. ಅಷ್ಟಮಠಗಳಲ್ಲೇ ಅತ್ಯಂತ ಹಿರಿಯ‌ ಯತಿಗಳಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗೆ 88 ವರ್ಷ ವಯಸ್ಸಾಗಿತ್ತು. ದೇಶದ ಆಧ್ಯಾತ್ಮಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಸವ್ಯಸಾಚಿ ಸ್ವಾಮೀಜಿಯವರು, ಪಕ್ಷ, ಜಾತಿ, ಮತ, ಲಿಂಗ, ಪಂಥ, ಧರ್ಮಗಳ ಎಲ್ಲೆಯನ್ನು ಮೀರಿ ಸರ್ವಜನಾದರಣೀಯರೆನಿಸಿಕೊಂಡಿದ್ದರು.

ಸಮಸ್ತ ಮನುಕುಲವನ್ನು ಸಮಾನವಾಗಿ ಕಂಡವರು, ದಲಿತರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಿದವರು ಒಬ್ಬ ದಲಿತ ಅಧಿಕಾರಿಯನ್ನು ಹಿಂದೂ ಮಹಾಸಭಾದ ಸರ್ವ ಗುರುಗಳ ಸಮಾವೇಶದ ಅಧ್ಯಕ್ಷರನ್ನಾಗಿಸಿ ದಿಟ್ಟ ನಿಲುವನ್ನ ಸಾಧಿಸಿದವರು, ಎಲ್ಲರಿಂದಲೂ ಸಮಾನವಾಗಿ ಗೌರವಕ್ಕೆ ಭಾಜನರಾಗಿದ್ದರು ಎಂದರು

ನುಡಿನಮನ ಕಾರ್ಯಕ್ರಮದಲ್ಲಿ ಪ್ರಕೃತಿ ಪೌಂಡೇಶನ್ ಅಧ್ಯಕ್ಷರಾದ ವೀರುಪಣ್ಣ ಕಲ್ಲೂರ ನವಲಿ, ಸರಕಾರಿ ಫ್ರೌಢ ಶಾಲೆಯ ಶಿಕ್ಷಕರಾದ ಹನುಮಂತಯ್ಯ , ತಿರುಪತಿಪ್ಪ ಸಂಕನಾಳ, ನಿವೃತ್ತ ಶಿಕ್ಷಕರಾದ ವೇಂಕಟೇಶ ಆಚಾರ್, ಕಾಲೇಜನ ಉಪನ್ಯಾಸಕರಾದ ನಿಂಗಪ್ಪ, ಲಕ್ಷ್ಮಣ, ಶ್ರೀಮತಿ ಮಲ್ಲಮ್ಮ ಆದಾಪೂರ, ಕುಮಾರಿ ಐಶ್ವರ್ಯ ಕಾರಟಗಿ ಕಾಲೇಜ್ ಹಾಗೂ ಫ್ರೌಢ ಶಾಲೆಯ ವಿದ್ಯಾರ್ಥಿಗಳು ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮೌನಾಚರಣೆ, ಶ್ರದ್ದಾಂಜಲಿ ಸಲ್ಲಿಸಿದರು.

ವರದಿ : ಸ್ವಾಮಿ ನವಲಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.