ಕೆ.ಎನ್.ಪಿ.ವಾರ್ತೆ,ಹಾವೇರಿ,ನ.04;

ಭಕ್ತರ ನಿಷ್ಕಲ್ಮಶವಾದ ಭಕ್ತಿಯೇ ಗುರುವಿಗೆ ಶಕ್ತಿಯಾಗಿದೆ ಎಂದು ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನೆಗಳೂರ ಗ್ರಾಮದಲ್ಲಿ ಹೊಟ್ಟಿಗೌಡ್ರ ಮನೆತನದವರದಿಂದ ಜರುಗಿದ ತುಲಾಬಾರ ಸೇವಾ ಸಮಾರಂಭದಲ್ಲಿ ನಾಣ್ಯಗಳ ತುಲಾಬಾರ ಸೇವೆ ಸ್ವೀಕರಿಸಿ ಮಾತನಾಡಿದರು.

ಗುರು ಶಿಷ್ಯರ ಸಂಬಂಧ ತಾಯಿ ಮಕ್ಕಳ ಸಂಬಂಧವಿದ್ದಂತೆ ಅದು ಎಂದಿಗೂ ಕೆಡದಂತೆ ಗಟ್ಟಿಯಾಗಿ ಇಟ್ಟುಕೊಳ್ಳುವ ಮಾರ್ಗವೇ ಭಕ್ತಿಯಾಗಿದೆ. ಭಕ್ತಿಯಿಂದ ಗುರು ಲಿಂಗ ಜಂಗಮ ಸೇವೆ ಮಾಡಿದರೆ ಇಷ್ಟಾರ್ಥ ಸಿದ್ದಿಯಾಗುತ್ತದೆ. ಆ ನಿಟ್ಟಿನಲ್ಲಿ ಹೊಟ್ಟಿಗೌಡ್ರ ಕುಟುಂಬದವರು ನಮಗೆ ಸ್ವ ಗ್ರಾಮದಲ್ಲಿ ಪ್ರಪ್ರಥಮವಾಗಿ ನಾಣ್ಯ ತುಲಾಭಾರ ಸೇವೆ ನೀಡಿರುವದು ಸಂತೋಷ ತಂದಿದೆ. ಈ ಮೊತ್ತವನ್ನು ಶ್ರೀ ಮಠದಲ್ಲಿ ನಿರ್ಮಾಣವಾಗುತ್ತಿರುವ ಮಂದಿರಕ್ಕೆ ವಿನಿಯೋಗಿಸಲಾಗುವುದು ಎಂದರು.

ಸಮಾರಂಭದಲ್ಲಿ ನಿಂಗಮ್ಮ ಹೊಟ್ಟಿಗೌಡ್ರ, ಬಸವರಾಜ ಹೊಟ್ಟಿಗೌಡ್ರ, ಬಸವರಾಜ ಮರಗಬ್ಬಿನ, ಈಶ್ವರ ಶಿಡೇನೂರ, ನಾಗಪ್ಪ ಕಟ್ಟೆಣ್ಣನವರ, ಸೋಮಣ್ಣ ಸಪ್ಪಣ್ಣನವರ, ಗುರುರಾಜ ಪತ್ರಿ, ವೀರಭದ್ರಪ್ಪ ಮರಗಬ್ಬಿನ, ಪಕ್ಕಿರಪ್ಪ ಹೊಸಮನಿ, ರಮೇಶ ಸುಣಗಾರ, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ವರದಿ : ಗುರುಶಾಂತಸ್ವಾಮಿ ಹಿರೇಮಠ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.