ಕೆ.ಎನ್.ಪಿ.ವಾರ್ತೆ,ಶಿವಮೊಗ್ಗ,ಜು.10;

ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಸರಕಾರದ ನಿರ್ಧಾರದ ವಿರುದ್ಧ ಇಂದು ಶಿವಮೊಗ್ಗ ಜಿಲ್ಲೆ ಬಂದ್‌ಗೆ ಕರೆ ನೀಡಲಾಗಿದೆ. ಸಾಗರ, ಹೊಸನಗರ ತಾಲೂಕಿನಾದ್ಯಂತ ಬಂದ್’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೊಸನಗರದಲ್ಲಿ ಅಂಗಡಿ, ಹೊಟೇಲ್’ಗಳು ಬಾಗಿಲು ತೆಗೆದಿಲ್ಲ. ಖಾಸಗಿ ಬಸ್’ಗಳು ರಸ್ತೆಗಿಳಿದಿಲ್ಲ. ಜನ ಕೂಡ ಸ್ವಯಂ ಪ್ರೇರಿತವಾಗಿ ಬಂದ್’ಗೆ ಬೆಂಬಲ ಘೋಷಿಸಿದ್ದಾರೆ. ಹಳ್ಳಿಗಳಲ್ಲೂ ಬಂದ್’ಗೆ ಬೆಂಬಲ ವ್ಯಕ್ತವಾಗಿದೆ. ಬಟ್ಟೆಮಲ್ಲಪ್ಪ ಗ್ರಾಮದಲ್ಲಿ ರಸ್ತೆಗೆ ಬೈಕ್’ಗಳನ್ನು ಅಡ್ಡ ನಿಲ್ಲಿಸಿ, ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಸಾಗರ ತಾಲೂಕಿನಲ್ಲೂ ಬಂದ್’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹೊತ್ತಿಗಾಗಲೇ ಗಿಜಿಗುಡುತ್ತಿದ್ದ ಸಾಗರ ಬಸ್ ನಿಲ್ದಾಣ ಸ್ಥಬ್ಧವಾಗಿದೆ. ಖಾಸಗಿ ಬಸ್’ಗಳು ಸೇವೆ ಸ್ಥಗಿತಗೊಳಿಸಿವೆ. ಅಂಗಡಿಗಳು ಕೂಡ ಬಂದ್ ಆಗಿವೆ. ಆನಂದಪುರದಲ್ಲೂ ಬಂದ್ ಮಾಡಲಾಗಿದೆ.

ಹೊಟೇಲ್ ಮಾಲೀಕರು, ಅಂಗಡಿ ಬಾಗಿಲುಗಳನ್ನು ಮುಚ್ಚಿದ್ದಾರೆ. ಇನ್ನು, ಮುಂಜಾಗ್ರತಾ ಕ್ರಮವಾಗಿ ಸಾಗರದ ಶಾಲೆಗಳಿಗೆ ರಜೆ ಘೋಷಿಸಿ, ಬಿಇಒ ಆದೇಶಿಸಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.