ಕೆ.ಎನ್.ಪಿ.ವಾರ್ತೆ,ಬೀಳಗಿ,ಮಾ.03;

ಪಟ್ಟಣದಿಂದ ಬಸ್ ಡಿಪೋ ರಸ್ತೆಯಲ್ಲಿ 1.5 ಕಿ.ಮೀ. ದೂರದಲ್ಲಿ ಬೀಳಗಿ, ನಾಗರಾಳ ಹಾಗೂ ಕೊಂತಿಕಲ್ಲ ಊರುಗಳ ಸರಹದ್ದಿನಲ್ಲಿ ಪ್ರಕೃತಿಯ ಮಡಿಲಲ್ಲಿ ಕಾಶಿ ವಿಶ್ವನಾಥನ ದೇವಾಲಯ ತಲೆ ಎತ್ತಿ ನಿಂತಿದೆ.

ಈ ದೇವಸ್ಥಾನದ ಸ್ಥಾಪನೆ ಕುತೂಹಲಕಾರಿಯಾಗಿದೆ. ಬೀಳಗಿಯ ಮುಸ್ಲಿಂ ಸಮಾಜದ ದಿ|| ಮೆಹಬೂಬ ಮುಜಾವರ ಎಂಬುವವರು ಕಾಶಿಗೆ ಹೋಗಿ ಬಂದ ನಂತರ ವಿಶ್ವನಾಥನ ಪ್ರೇರಣೆಯಿಂದ ಸ್ವತಃ ಮುಂದಾಳತ್ವ ವಹಿಸಿ, ಬೀಳಗಿಯ ಗದಿಗೆಪ್ಪ ಕರಿಗಾರ ಎಂಬುವವರಿಂದ ಭೂ-ದಾನವನ್ನು ಪಡೆದು, ಈ ದೇವಸ್ಥಾನ ನಿರ್ಮಾಣಗೊಳ್ಳಲು ಕಾರಣರಾದರು. ಅಂದಿನಿಂದ ಪ್ರತಿ ವರ್ಷ ಮಹಾ ಶಿವರಾತ್ರಿಯಂದು ಇಲ್ಲಿ ರಥೋತ್ಸವ ಜರಗುತ್ತಿದೆ.

ಅಂದು ನಸುಕಿನಲ್ಲಿ ಢವಳೇಶ್ವರ ಗ್ರಾಮಸ್ಥರಿಂದ ರುದ್ರಾಭಿಷೇಕ, ನಾಗರಾಳದ ಬಸಯ್ಯ ಹಿರೇಮಠ ಇವರಿಂದ ಪೂಜೆ, ಗುರುರಾಜ ದೇಶಪಾಂಡೆ ಇವರಿಂದ ಹೋಮ-ಹವನ ಜರಗುವವು. 10 ಗಂಟೆಗೆ ಕೊಂತಿಕಲ್ಲ ಗ್ರಾಮದಿಂದ ಕಳಸ, ಬೀಳಗಿಯಿಂದ ರಥದ ಹಗ್ಗ ಮತ್ತು ನಾಗರಾಳದಿಂದ ನಂದಿ ಕೋಲುಗಳನ್ನು ಮೆರವಣಿಗೆಯಲ್ಲಿ ತರಲಾಗುವುದು.

ಲಿಂಗಾಪುರ ಎಸ್.ಆರ್. ಗ್ರಾಮಸ್ಥರಿಂದ ರಥೋತ್ಸವದ ಅಲಂಕಾರ ನಡೆಯುವುದು. ಇದಕ್ಕೆ ಟಕ್ಕಳಕಿ ಗ್ರಾಮದ ನಂದಬಸಪ್ಪ ಉಗ್ರಾಣ ಅವರಿಂದ ಎಣ್ಣೆ ಸೇವೆ ನಡೆಯುವುದು. ನಂತರ ಫಲಾಹಾರದ ವ್ಯವಸ್ಥೆ ಇರುತ್ತದೆ. ಸಂಜೆ 5 ಗಂಟೆಗೆ ರಥೋತ್ಸವ ಜರುಗುವುದು.

ರಾತ್ರಿ 9 ಗಂಟೆಯಿಂದ ಬೆಳಗ್ಗೆಯವರೆಗೆ ಶಿವಭಜನೆಗಳು ಜರಗುವವು. ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಸ್ವಾಮಿಗಳು, ಬೀಳಗಿಯ ಹುಚ್ಚಪ್ಪಯ್ಯನಮಠದ ಸಿದ್ದಯ್ಯ ಸ್ವಾಮಿಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸ್ವಾಮಿಗಳು ಹಾಗೂ ಸಾವಿರಾರು ಭಕ್ತರು ಪಾಲ್ಗೊಳ್ಳುವರು.
ಅಕ್ಕಪಕ್ಕದ ಊರುಗಳು ಹಾಗೂ ವಿವಿಧ ಧರ್ಮಗಳ ಐಕ್ಯತೆಗೆ ಈ ರಥೋತ್ಸವ ಸಾಕ್ಷಿಯಾಗುತ್ತದೆ.

ವರದಿ : ಬಸವರಾಜ ಬಾಬು ಕೋರಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.