ಕೆ.ಎನ್.ಪಿ.ವಾರ್ತೆ,ಬೀಳಗಿ,ಏ.30;

ಪಟ್ಟಣದ ಶಿವಾಜಿ ವೃತ್ತದ ಹತ್ತಿರವಿರುವ ಬಸವೇಶ್ವರ ದೇವಸ್ಥಾನದಲ್ಲಿ ಮೇ 07 ರಂದು ಸಾಮೂಹಿಕ ವಿವಾಹ ಜರುಗಲಿದೆ.

36 ನೇಯ ವರ್ಷದ ಜಾತ್ರೆ :

ಇಲ್ಲಿ ಪ್ರತಿ ವರ್ಷ ಬಸವ ಜಯಂತಿಯಂದು ಅತ್ಯಂತ ಸಂಭ್ರಮದಿಂದ ಜಾತ್ರೆಯನ್ನು ಮಾಡುತ್ತಾ ಬಂದಿದ್ದಾರೆ. ಇದರ ನಿಮಿತ್ಯ ಇದೇ ಏಪ್ರೀಲ್ 27 ರಿಂದ ಮೇ 07 ರವರೆಗೆ ನಿತ್ಯ ಪ್ರಾತಕಾಲ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ ಮಾಡಲಾಗುತ್ತದೆ.

ಸಂಜೆ ಗುಣದಾಳದ ಕಲ್ಯಾಣೇಶ್ವರ ಮಠದ ವಿವೇಕಾನಂದ ಸ್ವಾಮಿಗಳಿಂದ ಪ್ರವಚನ ನಡೆಯುತ್ತದೆ. ಮೇ 06 ರಂದು ರಾತ್ರಿಯಿಂದ ಬೆಳಗಿನ ವರೆಗೆ ಭಜನೆ ನಡೆಯುತ್ತದೆ. ಮೇ 07 ರಂದು ಮುಂಜಾನೆ ವಿಶ್ವ ಗುರು ಬಸವೇಶ್ವರ ಭಾವಚಿತ್ರದ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ. ಮಧ್ಯಾಹ್ನ ಸಾಮೂಹಿಕ ವಿವಾಹ ಜರುಗುವುದು.

ರಾತ್ರಿ ನಾಟಕ ಇರುತ್ತದೆ. ನಿತ್ಯ ಅನ್ನ ಪ್ರಸಾದದ ವ್ಯವಸ್ಥೆಯಿರುತ್ತದೆ. ವಿವಾಹವಾಗಲಿಚ್ಚಿಸುವವರು ಜಾತ್ರಾ ಕಮಿಟಿಯ ಉಸ್ತುವಾರಿದಾರ ಸಿದ್ಧು ಸಾರಾವರಿಯವರನ್ನು ಸಂಪರ್ಕಿಸಲು ಕೋರಲಾಗಿದೆ.

ಸಂಪರ್ಕ ಸಂಖ್ಯೆ : 9483488377

ವರದಿ : ಬಸವರಾಜ್ ಬಾಬು ಕೋರಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.