ಕೆ.ಎನ್.ಪಿ, ಚುಟುಕು;

ಆತ್ಮೀಯರೇ, ಕೆ.ಎನ್.ಪಿ.ಚುಟುಕು ವಿಭಾಗದಲ್ಲಿ ಬಸವರಾಜ ಕಾಸೆರವರ ಚುಟುಕುಗಳನ್ನು ಪ್ರಕಟಿಸಲಾಗಿದೆ…ಓದಿರಿ..ತಮ್ಮ ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಬೆಳಕು

ಕತ್ತಲು ಎಲ್ಲೆಲ್ಲಿ ಇದೀಯೋ
ಅಲ್ಲಿ ಎಲ್ಲಾ ಒಮ್ಮೆಯಾದರೂ
ತೂಗಿ ಬಿಡಬೇಕು ಆಕಾಶಬುಟ್ಟಿ
ಮಮತೆಯ ತೊಟ್ಟಿಲಂತೆ
*******************
ನಾ ಬೆಳಕು ಬಯಸಿದೆ
ಕತ್ತಲೆಯಲ್ಲಿ ನಿಂತು
ಒಂದು ಹಣತೆ ಹಿಡಿದು
ಆದರೆ ಆ ಕತ್ತಲೆ
ತಾನೇ ಬೆಳಗಾಗ ಬಯಸಿತ್ತು
*******************
ಮನೆಯೊಳಗಿನ ಮನಗಳ ದೀಪ
ಹಪಾಹಪಿಸುತ್ತಿತ್ತು 
ಹೊರಗೂ ಬೆಳಕಾಗಲು
ಅದಕ್ಕಾಗಿಯೇ ಹಚ್ಚಿದರು 
ಹೆಚ್ಚು ಸಾಲುಗಳ ದೀಪ
*******************
ನಾವು ಹಚ್ಚಿದೆವೆಂದು ಹತ್ತು ದೀಪ
ಅಲ್ಲೊಬ್ಬ ಹಚ್ಚಿದ ಇಪ್ಪತ್ತು ದೀಪ

ಆದರೆ ಬೆಳಕು

ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ
ಸದ್ದಿಲ್ಲದೆ ಪ್ರಸಾರವಾಗಿ
ಪರಸ್ಪರ ವಿನಿಮಯವಾಗುತ್ತಿತ್ತು
*******************
ಅತ್ತಿತ್ತ ಓಲಾಡಿ ಕುಲುಕುವ ದೀಪ
ಕ್ಷಣ ಕ್ಷಣ ಚಂಚಲವಾಗಿ 
ಮತ್ತೆ ಧೃಡವಾಗುವ 
ಈ ಮನಸ್ಸಿನ ವಯ್ಯಾರದಷ್ಟೆ ಸಹಜ
*******************
ಕತ್ತಲೆಗೆ ತೋರಿಸಬೇಕು ಅಲ್ವಾ
ಬೆಳಕು ತನ್ನ ಆಂತರ್ಯದ ಬಗೆಯನ್ನು
ಅದಕ್ಕೆ ದೀಪಾವಳಿಯಾಯಿತು
ಅಮವಾಸೆಯ ದಿನದಂದೇ

-ಬಸವರಾಜ ಕಾಸೆ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.