ಕೆ.ಎನ್.ಪಿ.ವಾರ್ತೆ,ನವದೆಹಲಿ,ಆ.31;

ಎಸ್ ಬಿಐ ಬೃಹತ್ ವಿಲೀನದ ಬಳಿಕ ಇದೀಗ ಕೇಂದ್ರ ಸರ್ಕಾರ ಮೂರನೇ ಸುತ್ತಿನ ಬ್ಯಾಂಕ್‌ ವಿಲೀನ ಘೋಷಣೆ ಮಾಡಿದೆ. ಈ ಮೂಲಕ 27 ಸಾರ್ವಜನಿಕ ಬ್ಯಾಂಕುಗಳ ಜಾಗದಲ್ಲಿ ಇನ್ನು ಮುಂದೆ ಕೇವಲ 12 ಬ್ಯಾಂಕ್ ಗಳು ಕಾರ್ಯಾಚರಿಸಲಿವೆ.

ಈ ಹಿಂದೆ ಕೇಂದ್ರ ಸರಕಾರ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದರಾಬಾದ್‌ ಅನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಜೊತೆ ವಿಲೀನ ಮಾಡಿತ್ತು. ಎರಡನೇ ಸುತ್ತಿನಲ್ಲಿ ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ನ್ನು ಬ್ಯಾಂಕ್‌ ಆಫ್‌ ಬರೋಡದಲ್ಲಿ ವಿಲೀನಗೊಳಿಸಿತ್ತು. ಇದೀಗ ಮೂರನೇ ಸುತ್ತಿನಲ್ಲಿ ಹಲವು ಬ್ಯಾಂಕ್‌ ಗಳ ವಿಲೀನವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ಒರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ಮತ್ತು ಯುನೈಟೆಡ್‌ ಬ್ಯಾಂಕ್‌ಗಳು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ನೊಂದಿಗೆ ವಿಲೀನಗೊಳ್ಳಲಿದ್ದು, ಅಂತೆಯೇ ಸಿಂಡಿಕೇಟ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳ್ಳಲಿದ್ದರೆ, ಕಾರ್ಪೊರೇಷನ್‌ ಬ್ಯಾಂಕ್‌ ಮತ್ತು ಆಂಧ್ರಾ ಬ್ಯಾಂಕ್‌ ಗಳು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದೊಳಕ್ಕೆ ಸೇರಲಿವೆ. ಇದೇ ವೇಳೆ ಅಲಹಾಬಾದ್‌ ಬ್ಯಾಂಕ್‌ ಇಂಡಿಯನ್‌ ಬ್ಯಾಂಕ್‌ನಲ್ಲಿ ವಿಲೀನಗೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ.

ವಿಲೀನಗೊಳ್ಳಲಿರುವ ಬ್ಯಾಂಕ್‌ಗಳ ಗ್ರಾಹಕರು ಏನು ಮಾಡಬೇಕು? ಇಲ್ಲಿದೆ ಮಾಹಿತಿ..

ದಿನದಿಂದ ದಿನಕ್ಕೆ ತೀರ್ವವಾಗುತ್ತಿರುವ ಆರ್ಥಿಕ ಹಿಂಜರಿತವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಶುಕ್ರವಾರ ದಿಟ್ಟ ಕ್ರಮಗಳನ್ನು ಕೈಗೊಂಡಿದ್ದು, 10 ಸಣ್ಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ 4 ದೊಡ್ಡ ಬ್ಯಾಂಕ್‌ ಸೃಷ್ಟಿಯ ಮಹತ್ವದ ಪ್ರಸ್ತಾಪವನ್ನು ಮುಂದಿಟ್ಟಿದೆ. ಈ ನಾಲ್ಕು ದೊಡ್ಡ ಬ್ಯಾಂಕ್‌ಗಳು ಸೃಷ್ಟಿಯಾದ ನಂತರ ವಿಲೀನಗೊಂಡ ಬ್ಯಾಂಕ್‌ಗಳ ಗ್ರಾಹಕರು ಏನು ಮಾಡಬೇಕು? ಉಳಿತಾಯ ಖಾತೆಯನ್ನು ಮತ್ತೆ ಬದಲಿಸಬೇಕೆ? ಬ್ಯಾಂಕ್‌ ಹೆಸರು, ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್‌ ಹೀಗೆ ಎಲ್ಲವೂ ಬದಲಾಗುವುದರಿಂದ ಗ್ರಹಕರು ಏನು ಮಾಡಬೇಕು? ಇಲ್ಲಿದೆ ಪೂರಕ ಮಾಹಿತಿ. ಗ್ರಾಹಕರು ಏನು ಮಾಡಬೇಕು?

  • ಉಳಿತಾಯ ಖಾತೆ ಅಥವಾ ಠೇವಣಿ ಹೊಂದಿರುವವರು ಹೊಸ ಚೆಕ್‌ಬುಕ್‌ ಮತ್ತು ಪಾಸ್‌ಬುಕ್‌ ಪಡೆಯಬೇಕು.
  • ಈಗಿರುವ ಚೆಕ್‌ಬುಕ್‌ಗಳನ್ನು ತಾತ್ಕಾಲಿಕವಾಗಿ ಬಳಸಬಹುದಾದರೂ, ಅಂತಿಮವಾಗಿ ಮೂಲ ಬ್ಯಾಂಕ್‌ ಹೆಸರಿನ ಚೆಕ್‌ಬುಕ್‌ ಪಡೆಯಬೇಕಾಗುವುದು.
  • ಬ್ಯಾಂಕ್‌ ಹೆಸರು, ಖಾತೆ ಸಂಖ್ಯೆ ಮತ್ತು ಐಎಫ್ಎಸ್‌ಸಿ ಕೋಡ್‌ ಬದಲಾಗುವುದರಿಂದ ಇಎಂಐ ಪಾವತಿ, ಬಿಲ್‌ ಪಾವತಿ ಮುಂತಾದ ಉದ್ದೇಶಗಳಿಗೆ ನೀಡಿರುವ ಬ್ಯಾಂಕ್‌ ವಿವರಗಳನ್ನು ಬದಲಾಯಿಸಬೇಕು.
  • ಹೊಸ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌, ಇಂಟರ್‌ನೆಟ್‌ಬ್ಯಾಂಕಿಂಗ್‌ ಕಿಟ್‌ ಪಡೆಯಬೇಕಾಗಬಹುದು.
  • ನಿಶ್ಚಿತ ಠೇವಣಿಗೆ ಸಂಬಂಧಿಸಿದ ದಾಖಲೆಗಳನ್ನು ಹೊಸ ಬ್ಯಾಂಕ್‌ ಹೆಸರಿಗೆ ಬದಲಾಯಿಸಬೇಕಾಗಬಹುದು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.