ಕೆ.ಎನ್.ಪಿ.ವಾರ್ತೆ,ಮೈಸೂರು,ಜು.28;

ಬಂಡೀಪುರ ಹುಲಿ ರಕ್ಷಿತಾರಣ್ಯದ ಒಳಗೆ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಹತ್ತಿರ 6 ವರ್ಷದ ಹೆಣ್ಣು ಹುಲಿಯೊಂದು ಅಸುನೀಗಿರುವುದು ಪತ್ತೆಯಾಗಿದ್ದು, ವೇಗವಾಗಿ ಬಂದ ವಾಹನದ ಅಡಿಗೆ ಸಿಲುಕಿ ಅಥವಾ ಮುಳ್ಳುಹಂದಿ ದಾಳಿಯಿಂದ ಹುಲಿ ಸತ್ತಿರಬಹುದು ಎಂದು ಶಂಕಿಸಲಾಗಿದೆ.

ಬಂಡೀಪುರ ಅಭಯಾರಣ್ಯದ ಪ್ರವೇಶ ದ್ವಾರದಿಂದ ಸ್ವಲ್ಪ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 766ರಡಿ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸಮೀಪ ಮಗುವನಹಳ್ಳಿ ಗ್ರಾಮದ ಗಡಿಭಾಗದಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದೆ. 

ಹುಲಿ ಸತ್ತು ಬಿದ್ದ ಸ್ವಲ್ಪ ದೂರದಲ್ಲಿ ಕಾಡು ಹಂದಿಯ ಅರ್ಧ ತಿಂದ ಮೃತದೇಹ ಸಿಕ್ಕಿದ್ದರಿಂದ ಕಾಡು ಹಂದಿ ಜೊತೆಗಿನ ಜಗಳದಲ್ಲಿ ಗಾಯಗೊಂಡು ಹುಲಿ ಸತ್ತಿರಬೇಕೆಂದು ಆರಂಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಭಾವಿಸಿದ್ದರು.

ಆದರೆ ಶವಪರೀಕ್ಷೆ ಮಾಡಿದ ನಂತರ ಹುಲಿಯ ಮೈ ಮೇಲೆ ಹಲವು ಗಾಯಗಳು ಕಂಡುಬಂದಿದ್ದು ಅವುಗಳಲ್ಲಿ ವಾಹನದ ಅಡಿಗೆ ಸಿಲುಕಿ ಆದ ಗಾಯ ಕೂಡ ಇದ್ದಿತು. ಕಳೆದ ಆರು ತಿಂಗಳಲ್ಲಿ ಒಟ್ಟು ನಾಲ್ಕು ಹುಲಿಗಳು ಬಂಡೀಪುರ ಅರಣ್ಯದಲ್ಲಿ ಮೃತಪಟ್ಟಿವೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.