ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮೇ.08;

ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಬಾಲಕಿಯರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಾಜಗೋಪಾಲನಗರದ ಸಂಪ್ ಗೆ ಬಿದ್ದು 12 ವರ್ಷದ ಜ್ಯೋತಿ ಮೃತಪಟ್ಟಿದ್ದು, ಈಕೆಯ ಸಾವಿನ ಹಿಂದೆ ವಾಮಾಚಾರದ ಆರೋಪ ಕೇಳಿಬಂದಿದೆ.

ಯಾದಗಿರಿ ಮೂಲದ ರಾಜಗೋಪಾಲನಗರದ ಗಣಪತಿನಗರದ ನಿವಾಸಿಗಳಾದ ಪಾರ್ವತಿ ಹಾಗೂ ದುಗ್ಗಪ್ಪ ದಂಪತಿ ಮಗಳು ಜ್ಯೋತಿ ಮನೆ ಸಮೀಪದ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮನೆ ಸಮೀಪದ ಗಣಪತಿನಗರದಲ್ಲಿರುವ ಅನ್ಬುಕುಮಾರ್ ಎಂಬುವರ ಮನೆಗೆ ಪಾರ್ವತಿ ಮನೆಕೆಲಸಕ್ಕೆ ಹೋಗುತ್ತಿದ್ದರು.

ಮಂಗಳವಾರ (ಮೇ 7) ಮಗಳು ಜ್ಯೋತಿಗೆ ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ 8.30ಕ್ಕೆ ಆಕೆಯನ್ನೂ ಮನೆ ಕೆಲಸಕ್ಕೆ ಕರೆದುಕೊಂಡು ಹೋಗಿದ್ದರು. ಮನೆ ಮಾಲೀಕ ಅನ್ಬುಕುಮಾರ್ ಸೂಚನೆಯಂತೆ ಬಾಲಕಿ ಮನೆಯಲ್ಲಿದ್ದ ಸಂಪ್​ನಿಂದ ನೀರು ತೆಗೆಯುತ್ತಿದ್ದಳು. ಆ ವೇಳೆ ಆಯತಪ್ಪಿ ಸಂಪ್​ನೊಳಗೆ ಬಿದ್ದು ಮೇಲೆ ಬರಲಾಗದೆ ಕೂಗಾಡುತ್ತಿದ್ದಳು.

ಮಗಳ ಕೂಗಾಟ ಕೇಳಿ ತಾಯಿ ಪಾರ್ವತಿ ಸಂಪ್ ಬಳಿ ಬಂದಾಗ, ಮಗಳು ಸಂಪ್​ನಲ್ಲಿ ಬಿದ್ದು ಒದ್ದಾಡುತ್ತಿರುವುದು ಕಂಡುಬಂದಿತ್ತು. ಸಂಪ್ ಕಿರಿದಾಗಿದ್ದು, ಅದರೊಳಗೆ ನೀರಿದ್ದ ಹಿನ್ನೆಲೆಯಲ್ಲಿ ಪಾರ್ವತಿಗೆ ಮಗಳನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಅನ್ಬುಕುಮಾರ್ ಹಾಗೂ ಮುನಿಸ್ವಾಮಿಗೆ ವಿಚಾರ ತಿಳಿಸಿದ ಪಾರ್ವತಿ, ಮಗಳನ್ನು ರಕ್ಷಣೆ ಮಾಡುವಂತೆ ಕೇಳಿಕೊಂಡಿದ್ದಳು. ಆದರೆ, ಇಬ್ಬರೂ ಪಾರ್ವತಿ ಮಾತನ್ನು ನಿರ್ಲಕ್ಷಿಸಿದ್ದರು ಎನ್ನಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಬಾಗಲಗುಂಟೆಯ 11 ವರ್ಷದ ಪೂಜಾ ಎಂಬಾಕೆಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಸಂಶಯಾಸ್ಪದವಾಗಿ ಪತ್ತೆಯಾಗಿದೆ.

ಅನ್ಭುಕುಮಾರ್ 5 ತಿಂಗಳ ಹಿಂದೆ ನಗರದಲ್ಲಿ ಹೊಸ ಮನೆ ಕಟ್ಟಿದ್ದ. ಹೊಸ ಮನೆಯಲ್ಲಿ ಪೂಜೆ ಮಾಡುವ ಸಂದರ್ಭ ನರ ಬಲಿ ಕೊಡಬೇಕು ಎಂದು ಬೇರೆಯವರ ಬಳಿ ಈ ಹಿಂದೆ ಹೇಳಿಕೊಂಡಿದ್ದ. ಆದರೆ, ಸ್ಥಳೀಯರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದರು. ಇದೀಗ ಬಾಲಕಿ ಸಾವು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಮನೆಗೆ ಒಳ್ಳೆಯದಾಗುವ ಉದ್ದೇಶದಿಂದ ಬಾಲಕಿಯನ್ನು ಬಲಿ ಕೊಡುವಂತೆ ಯಾರೋ ಹೇಳಿದ ಹಿನ್ನೆಲೆಯಲ್ಲಿ ಅನ್ಬುಕುಮಾರ್ ತನ್ನ ಕುಟುಂಬದ ಜತೆಗೂಡಿ ಉದ್ದೇಶಪೂರ್ವಕವಾಗಿಯೇ ಕೃತ್ಯ ಎಸಗಿದ್ದಾನೆ ಎಂಬ ಆರೋಪವೂ ಕೇಳಿ ಬಂದಿದೆ. ಈ ಸಂಬಂಧ ಅನ್ಭುಕುಮಾರ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.