ಕೆ.ಎನ್.ಪಿ.ವಾರ್ತೆ,ಗುಳೇದಗುಡ್ಡ,ಜು.16;

ಒಂದು ಸಮಾಜದ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಅವಹೇಳನಕಾರಿ ವಾಟ್ಸಪ್‌ ಸ್ಟೇಟಸ್‌ ಹಾಕಿದ್ದಕ್ಕೆ ಇಬ್ಬರು ಯುವಕರನ್ನು ಸೋಮವಾರ ಬಂಧಿಸಲಾಗಿದೆ.

ಯಲ್ಲಪ್ಪ ಯಮನಪ್ಪ ಹಳಬರ (19) ಹಾಗೂ ಬೀರಪ್ಪ ಭರಮಪ್ಪ ಜಕ್ಕಲಿ (21) ಬಂಧಿತರು. ನಾಗರಾಳ ಎಸ್‌.ಪಿ ಗ್ರಾಮದಲ್ಲಿ ಒಂದು ಸಮಾಜದ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿರುವ ಆ ಸಮಾಜದ ಗುರುಗಳ ಭಾವಚಿತ್ರ ಇರುವ ವಿಡಿಯೋವನ್ನು ತಮ್ಮ ವಾಟ್ಸ್‌ಪ್‌ ಸ್ಟೇಟ್‌ಸ್‌ಗೆ ಹಾಕಿದ್ದರು, ಎಲ್ಲೆಡೆ ಈ ಸುದ್ದಿ ಹರಡುತ್ತಿದ್ದಂತೆ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ಸ್ಥಳೀಯ ಠಾಣೆಯಲ್ಲಿ ಮಹಾಗುಂಡಪ್ಪ ದಂಡಿನ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಇಬ್ಬರು ಯುವಕರನ್ನು ಬಂಧಿಸಲಾಗಿದ್ದು, ಗ್ರಾಮಕ್ಕೆ ಸಿಪಿಐ ಕೆ.ಎಸ್‌.ಹಟ್ಟಿ, ಪಿಎಸೈ ಬಿ.ಬಿ.ಲಮಾಣಿ ಭೇಟಿ ನೀಡಿ ಮಾಹಿತಿ ಪಡೆದು, ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.