ಕೆ.ಎನ್.ಪಿ.ವಾರ್ತೆ,ಮುಂಬೈ,ಅ.30;

ದೇಶದ ಮುಂಚೂಣಿ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ನವೆಂಬರ್ 1ರಿಂದ ಉಳಿತಾಯ ಖಾತೆಯ ಠೇವಣಿ ಮತ್ತು ಸ್ಥಿರ ಠೇವಣಿ ಮೇಲಿನ ಬಡ್ಡಿ ದರವನ್ನು ಮತ್ತೆ ಕಡಿತ ಮಾಡಲಿದೆ.

ಕಳೆದ ಆಗಸ್ಟ್ ನಲ್ಲಿ ಚಿಲ್ಲರೆ ದೀರ್ಘಾವಧಿಯ ಠೇವಣಿಗಳು, ಅಲ್ಪಾವಧಿ ಮತ್ತು ಬೃಹತ್ ಠೇವಣಿಗಳ ಮೇಲಿನ ಬಡ್ಡಿ ದರ ಕಡಿತಗೊಳಿಸಿದ್ದ ಎಸ್ ಬಿಐ ಈಗ ಮತ್ತೆ ಬಡ್ಡಿದರ ಇಳಿಕೆ ಮಾಡಿದೆ.

ಬ್ಯಾಂಕಿಗೆ ಬರುವ ಹಣದ ಪ್ರಮಾಣದಲ್ಲಿ ಕಡಿಮೆಯಾಗಿರುವುದರಿಂದ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಲಾಗುವುದು ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದ್ದು, 1 ಲಕ್ಷ ರೂಪಾಯಿ ವರೆಗಿನ ಉಳಿತಾಯ ಖಾತೆಯ ಹಣದ ಮೇಲಿನ ಬಡ್ಡಿ ದರವನ್ನು ಶೇ.3.50ರಿಂದ ಶೇ.3.25ಕ್ಕೆ ಇಳಿಸಲಾಗಿದೆ. ಉಳಿತಾಯ ಖಾತೆಯ 1 ಲಕ್ಷ ರೂಪಾಯಿ ಮೇಲಿನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಚಿಲ್ಲರೆ ದೀರ್ಘಾವಧಿ ಠೇವಣಿ ಮೇಲಿನ ಬಡ್ಡಿ ದರ 10 ಬಿಪಿಎಸ್ ಕಡಿಮೆಯಾಗಲಿದೆ. ಬೃಹತ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು 30 ಬಿಪಿಎಸ್ ನಷ್ಟು ಕಡಿತವಾಗಲಿದ್ದು, ಇದು ನವೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್ ತಿಳಿಸಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.