ಕೆ.ಎನ್.ಪಿ.ಅಡುಗೆ;

ಕೆ.ಎನ್.ಪಿ.ಅಡುಗೆಮನೆ ವಿಭಾಗದಲ್ಲಿ ಇಂದು ಆಂಧ್ರ ಶೈಲಿಯ ಚಿಕನ್ ಕರಿ ರೆಸಿಪಿ ಮಾಡುವುದನ್ನು ತಿಳಿಸಲಾಗಿದೆ. ನೀವು ಮಾಡಿ ನೋಡಿ ಈ ಭಾನುವಾರದಂದು ರುಚಿಕರ ಚಿಕನ್ ಕರಿ..

ಆಂಧ್ರ ಶೈಲಿಯ ಸಸ್ಯಾಹಾರಿ ಅಡುಗೆ, ಅದರಲ್ಲೂ ಪಾಲಕ್ ಸೊಪ್ಪಿನ ದಾಲ್ (ಅಥವಾ ತೊವ್ವೆ) ಅತ್ಯಂತ ಸ್ವಾದಿಷ್ಟವಾಗಿರುತ್ತದೆ. ಅದೇ ರೀತಿ ಆಂಧ್ರ ಶೈಲಿಯ ಮಾಂಸಾಹಾರದಲ್ಲಿ ಖಾರವಾದ ಕೋಳಿ ಸಾರು ಅತ್ಯಂತ ಜನಪ್ರಿಯವಾಗಿದೆ. ಈ ರುಚಿಯನ್ನು ಮನೆಯಲ್ಲಿಯೇ ಸವಿಯಲು ಸುಲಭವಾದ ವಿಧಾನವನ್ನು ಇಲ್ಲಿ ನೀಡಲಾಗಿದೆ. ಬನ್ನಿ ಇದನ್ನು ಮಾಡುವ ವಿಧಾನ ಹೇಗೆ ಎಂಬುದನ್ನು ನೋಡೋಣ..

ಆಂಧ್ರ ಶೈಲಿಯಲ್ಲಿ ಬೊಂಬಾಟ್ ಚಿಕನ್ ಕರಿ ರೆಸಿಪಿ 

ಅಗತ್ಯವಿರುವ ಸಾಮಾಗ್ರಿಗಳು :

ಕೋಳಿ ಮಾಂಸ : 1 ಕೆಜಿ
2 ಮಧ್ಯಮ ಗಾತ್ರದ ಈರುಳ್ಳಿ
2 ಮಧ್ಯಮ ಗಾತ್ರದ ಟೊಮೇಟೊ
¼ ಕಪ್ ಕೊತ್ತಂಬರಿ ಸೊಪ್ಪು
ಹಸಿರು ಮೆಣಸಿನ ಕಾಯಿ
ಸಾಸಿವೆ- 1 ಚಮಚ
ಗೋಡಂಬಿ – ಸ್ವಲ್ಪ
3 ದೊಡ್ಡ ಚಮಚ ಹಸಿಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್
3 ದೊಡ್ಡ ಚಮಚ ಕೆಂಪುಮೆಣಸಿನ ಪುಡಿ
2 ಲವಂಗ
1 ಏಲಕ್ಕಿ
3 ದೊಡ್ಡಚಮಚ ಮೊಸರು
¼ ಚಿಕ್ಕ ಚಮಚ ಅರಿಶಿಣ ಪುಡಿ
1 ಚಿಕ್ಕ ಚಮಚ ಗರಂ ಮಸಾಲಾ ಪುಡಿ
5 ದೊಡ್ಡಚಮಚ ಎಣ್ಣೆ
1 ಕಪ್ ನೀರು
ಉಪ್ಪು

ಮಾಡುವ ವಿಧಾನ:

– ಮೊದಲು ಕೋಳಿಯನ್ನು ಚೆನ್ನಾಗಿ ತೊಳೆದು ನಿಮಗೆ ಸೂಕ್ತವೆನಿಸಿದ ಗಾತ್ರದಲ್ಲಿ ತುಂಡು ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ಈ ತುಂಡುಗಳನ್ನು ಹಾಕಿ ಮೇಲಿನಿಂದ ಮೊಸರು, ಹಸಿಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್, ಅರಿಶಿನ, ಉಪ್ಪು, ಕೆಂಪು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲಕಿ. ಎಲ್ಲಾ ತುಂಡುಗಳು ಈ ಮಿಶ್ರಣದಿಂದ ಆವೃತವಾಗಬೇಕು. ಈ ಪಾತ್ರೆಯನ್ನು ಸುಮಾರು ಒಂದು ಗಂಟೆ ಕಾಲ ಮುಚ್ಚಿಡಿ.

– ಒಂದು ಬಾಣಲೆಯನ್ನು ಚಿಕ್ಕ ಉರಿಯ ಮೇಲಿರಿಸಿ ಸಾಸಿವೆ ಹಾಕಿ ಕಂದುಬಣ್ಣಬರುವವರೆಗೆ ಹುರಿಯಿರಿ.

– ಹುರಿದ ಸಾಸಿವೆಯನ್ನು ಮಿಕ್ಸಿಯಲ್ಲಿ ಒಣದಾಗಿಯೇ ಇರುವಂತೆ ಪುಡಿಮಾಡಿಕೊಳ್ಳಿ. ಈಗ ಗೋಡಂಬಿಯನ್ನು ಸೇರಿಸಿ ನುಣ್ಣನೆ ಪುಡಿಮಾಡಿ.
– ಒಂದು ದೊಡ್ಡ ಬಾಣಲೆ ಅಥವಾ ದಪ್ಪತಳದ ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಲವಂಗ, ಏಲಕ್ಕೆ , ಈರುಳ್ಳಿ ಸೇರಿಸಿ ಮಧ್ಯಮ ಉರಿಯಲ್ಲಿ ಚಿನ್ನದ ಬಣ್ಣ ಬರುವಷ್ಟು ಹುರಿಯಿರಿ.

-ಬಳಿಕ ಟೊಮೇಟೋ ಸೇರಿಸಿ ಈರುಳ್ಳಿಯೊಡನೆ ಪೂರ್ಣವಾಗಿ ಬೇಯುವಷ್ಟು ಹುರಿಯಿರಿ.

– ಈಗ ಹಸಿಮೆಣಸು, ಗೋಡಂಬಿ ಮತ್ತು ಸಾಸಿವೆ ಪುಡಿ ಸೇರಿಸಿ ಹುರಿಯುವುದನ್ನು ಎಣ್ಣೆ ಬೇರ್ಪಡುವವರೆಗೆ ಮುಂದುವರೆಸಿ.

– ಈಗ ಮುಚ್ಚಿಟ್ಟಿದ್ದ ಪಾತ್ರೆಯಿಂದ ಕೋಳಿಯ ತುಂಡುಗಳನ್ನು ಸೇರಿಸಿ ಸುಮಾರು ಐದು ನಿಮಿಷಗಳ ವರೆಗೆ ಹುರಿಯಿರಿ. ನಡುನಡುವೆ ಸೌಟಿನಿಂದ ತಳಹಿಡಿಯದಂತೆ ಅಲುಗಾಡಿಸುತ್ತಿರಿ.

– ಈಗ ಒಂದು ಕಪ್ ನೀರು ಹಾಕಿ ಚೆನ್ನಾಗಿ ಕಲಕಿ ಪಾತ್ರೆಯನ್ನು ಗಟ್ಟಿಯಾಗಿ ಮುಚ್ಚಿ ಸುಮಾರು ಹತ್ತು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿಯೇ ಬೇಯಲು ಬಿಡಿ.

– ಕೋಳಿಯ ತುಂಡುಗಳು ಬೆಂದಿದೆ ಎಂದು ಪ್ರಮಾಣಿಸಿಕೊಂಡ ಬಳಿಕ ಗರಂ ಮಸಾಲಾ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ. ಪಾತ್ರೆಯ ಮುಚ್ಚಳ ಮುಚ್ಚಿದ್ದಂತೆ ಕೊಂಚ ಕಾಲ ಇಡಿ.

– ಈ ಸಾರನ್ನು ಅನ್ನ, ಚಪಾತಿ, ರೋಟಿ, ಕುಲ್ಛಾ ಮೊದಲಾದವುಗಳ ಜೊತೆಗೆ ಸೇವಿಸಲು ರುಚಿಯಾಗಿರುತ್ತದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.