ಕೆ.ಎನ್.ಪಿ.ವಾರ್ತೆ,ವಾಷಿಂಗ್ಟನ್,ಸೆ.06;

ಅಮೆರಿಕದಲ್ಲಿ ನಡೆದ ದೋಣಿ ಅಪಘಾತದಲ್ಲಿ ಭಾರತೀಯ ಮೂಲದ ದಂಪತಿ ಮೃತಪಟ್ಟಿದ್ದಾರೆ. ಕ್ಯಾಲಿಪೋರ್ನಿಯಾದ ಸಾಂತಾ ಕ್ರೂಜ್ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಗೆ ದಂಪತಿ ತೆರಳುತ್ತಿದ್ದ ವೇಳೆ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ.

ನಾಗ್ಪುರದ ಪ್ರಖ್ಯಾತ ಶಿಶು ವೈದ್ಯ ಸತೀಶ್ ಡಿಯೊ ಪೂಜಾರಿ ಅವರ ಪುತ್ರಿ ಅಮೆರಿಕಾದಲ್ಲಿ ದಂತವೈದ್ಯರಾಗಿ ಕೆಲಸ ಮಾಡುತ್ತಿದ್ದು, ಅಳಿಯ ಹಣಕಾಸು ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ.

ಸೋಮವಾರ ಸತೀಶ್ ಪುತ್ರಿ, ಅಳಿಯ ಸ್ಕೂಬಾ ಡೈವಿಂಗ್ ಗಾಗಿ ಕ್ಯಾಲಿಪೋರ್ನಿಯಾದ ಸಾಂತಾ ಕ್ರೂಜ್ ದ್ವೀಪಕ್ಕೆ ಪ್ರಯಾಣ ಬೆಳೆಸಿದ್ದರು. ಆ ಸಮಯದಲ್ಲಿ ಪ್ರಯಾಣಿಸುತ್ತಿದ್ದ ದೋಣಿ ಬೆಂಕಿಗೆ ಆಹುತಿಯಾಗಿ, ಕ್ಯಾಲಿಪೋರ್ನಿಯಾ ಸಮುದ್ರ ತೀರದಲ್ಲಿ ಮುಳುಗಿತು ಎಂದು ವರದಿಯಾಗಿದೆ.

ದೋಣಿಯಲ್ಲಿ 33ಜನ ಪ್ರಯಾಣಿಕರಲ್ಲದೆ, ಆರು ಜನ ಡೈವರ್ ಗಳು ಸಹ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಪೈಕಿ ಐದು ಜನ ಡೈವರ್ ಗಳು ಬದುಕುಳಿದಿದ್ದು, 34 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.