ಕೆ.ಎನ್.ಪಿ.ವಾರ್ತೆ,ಗಂಗಾವತಿ,ಮಾ.27;

ತಾಲೂಕಿನ ಮೂಸ್ಟೂರ್ ಡಗ್ಗಿಯಲ್ಲಿ 2ದಿನಗಳ ಕಾಲ ಮಾರುತೇಶ್ವರ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಿತು. 2ದಿನಗಳ ವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಮಹೋತ್ಸವದಲ್ಲಿ ಕಾರಿಕಂಟಿ ಉತ್ಸವ ವಿಶೇಷ ಎನಿಸಿತು. ಉಚ್ಚಯ್ಯ, ಗೋಪುರಕ್ಕೆ ಕಳಸಾರೋಹಣ, ಗಂಗಾ ಸ್ನಾನ, ಅಗ್ನಿಕೊಂಡ, ಪೂಜಾ ಕಾರ್ಯಕ್ರಮಗಳು ನೆರವೇರುವುದರೊಂದಿಗೆ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಸಂಪನ್ನಗೊಂಡಿತು. ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತಾಧಿಗಳು ಮಹಾರಥೋತ್ಸವದಲ್ಲಿ ಭಾಗವಹಿಸಿದ್ದರು.

ವರದಿ : ಹನುಮೇಶ್ ಡಣಾಪುರ