ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಡಿ.04;

ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿ ಜನವರಿ 9 ಮತ್ತು 10ರಂದು ಆಯೋಜಿಸಲು ನಿರ್ಧರಿಸಲಾಗಿರುವ ಆನೆಗೊಂದಿ ಉತ್ಸವ-2020ರ ಲಾಂಛನ ಮತ್ತು ಶೀರ್ಷಿಕೆಯನ್ನು ಶಾಸಕ ಪರಣ್ಣ ಮುನವಳ್ಳಿ ಅವರು ನಿನ್ನೆ ಬಿಡುಗಡೆ ಮಾಡಿದರು.

ಬಳಿಕ ನಡೆದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಎರಡು ವೇದಿಕೆ ನಿರ್ಮಾಣ, 49 ಕಾರ್ಯಕ್ರಮ ನೀಡುವುದು, ಗ್ರಾಮಸ್ಥರಿಗೆ ಮನೆ ಸಿಂಗರಸುವ ಸ್ಪರ್ಧೆ, ಆರು ಕಿ.ಮೀ. ಮೆರಾಥಾನ್ ಓಟ, ತೆಪ್ಪದ ಕ್ರೀಡೆ ಸೇರಿದಂತೆ ಗ್ರಾಮೀಣ ಭಾಗದ ಕ್ರೀಡೆಗಳ ಆಯೋಜನೆಗೆ ಒತ್ತು ನೀಡಲಾಯಿತು.

ಇದೇ ವೇಳೆ ಲಾಂಛನದಲ್ಲಿ ಅಂಜನಾದ್ರಿ ಬೆಟ್ಟವನ್ನು ಕಡೆಗಣಿಸಿದ್ದಕ್ಕೆ ವಿವಿಧ ಸಂಘಟನೆಯ ಮುಖಂಡರು ಅಸಮಧಾನ ವ್ಯಕ್ತಪಡಿಸಿದರು. ಸಾರ್ವಜನಿಕರ ಅಭಿಪ್ರಾಯ ಪಡೆಯದೇ ಲಾಂಛನ ರೂಪಿಸಿದ್ದು ಸರಿಯಲ್ಲ, ಸರಿಪಡಿಸುವಂತೆ ಒತ್ತಾಯಿಸಿದರು. 

ಜನವರಿ 9ರಂದು ಗಾಯಕ ವಿಜಯಪ್ರಕಾಶ್ ಕಾರ್ಯಕ್ರಮ ನಿಗದಿಪಡಿಸಲಾಗಿದ್ದು, ಉತ್ಸವಕ್ಕೆ ಸಿನಿತಾರೆಯರಾದ ದರ್ಶನ್, ಯಶ್ ಅವರನ್ನು ಕರೆಯಿಸುವಂತೆ ಸ್ಥಳೀಯರು ಒತ್ತಾಯಿಸಿದರು.

ಈ ವೇಳೆ ಶಾಸಕ ಪರಣ್ಣ ಮುನವಳ್ಳಿ, ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ್, ತಾಪಂ ಸದಸ್ಯ ವೈ.ರಮೇಶ, ಗ್ರಾಪಂ ಅಧ್ಯಕ್ಷೆ ಅಂಜನಾದೇವಿ, ಬಿಇಒ ಸೋಮಶೇಖರಗೌಡ, ಸಿಡಿಪಿಒ ಗಂಗಣ್ಣ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ತಾಪಂ ಇಒ ಡಾ.ಮೋಹನ್, ಮುಖಂಡರಾದ ಎಚ್.ಎಂ.ಸಿದ್ರಾಮಯ್ಯಸ್ವಾಮಿ, ಸಂತೋಷ ಕೆಲೋಜಿ, ರಾಜೇಶ್ವರಿ ಸುರೇಶ, ಎಚ್.ಸಿ.ಯಾದವ್, ಪಂಪಣ್ಣನಾಯಕ, ರಮೇಶ ಕೋಟಿ, ಅರ್ಜುನ ನಾಯಕ, ಚನ್ನಬಸವ ಜೇಕಿನ್, ಶಮಾ ಪವಾರ್ ಇತರರಿದ್ದರು.

ಲಾಂಛನ ವಿಶೇಷತೆ :

ಲಾಂಛನಕ್ಕಾಗಿ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಮೂವರು ಕಲಾವಿದರಿಂದ 6 ಅರ್ಜಿ ಸಲ್ಲಿಕೆಯಾಗಿದ್ದವು. ಅಂತಿಮವಾಗಿ ಪರಿಸರ ಸೇವಾ ಟ್ರಸ್ಟ್ ಸಂಚಾಲಕ ಮಂಜುನಾಥ ಗುಡ್ಲಾನೂರ್ ರೂಪಿಸಿರುವ ಲಾಂಛನ ಆಯ್ಕೆಯಾಯಿತು.

ಆನೆಗೊಂದಿ ಉತ್ಸವ-2020 : ಲಾಂಛನ ಬಿಡುಗಡೆ

ಲಾಂಛನದಲ್ಲಿ ಆನೆಗೊಂದಿ ಕಮಲ್ ಮಹಲ್, ವಾಲಿಕಿಲ್ಲಾ ಮ್ಯಾಗೋಟದ ಕೋಟೆಯಿದ್ದು, ಎರಡು ಆನೆಗಳಿವೆ. ಆನೆಗೊಂದಿ ಇತಿಹಾಸದ ಹೆಜ್ಜೆ ಗುರುತುಗಳಿದ್ದು, ಭತ್ತದ ಪೈರನ್ನು ಹಾಕಲಾಗಿದೆ. ಮೇಲ್ಭಾಗದಲ್ಲಿ ಚಾಮರಗಳಿದ್ದು, ಸಮೃದ್ಧಿ ಸಂಕೇತವಾದ ಹಸಿರಿಗೆ ಮಾನ್ಯತೆ ನೀಡಲಾಗಿದೆ. ಪರಂಪರೆಯ ಬೆಳಕು- ಸಂಸ್ಕೃತಿಯ ಸೊಬಗು ಎಂಬ ಶೀರ್ಷಿಕೆ ನೀಡಲಾಗಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.