ಕೆ.ಎನ್.ಪಿ.ವಾರ್ತೆ,ನವದೆಹಲಿ,ಆ.15;

73ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ, ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾ ಬಂಧನದ ಶುಭಾಶಯ ಕೋರಿದರು.

ಈ ವೇಳೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು. ಕೇಂದ್ರ ಸಚಿವ ಡಿವಿ ಸದಾನಂದಗೌಡ, ನಿತಿನ್ ಗಡ್ಕರಿ, ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಗಣ್ಯರು ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗಿ.

ಪ್ರಧಾನಿ ನರೇಂದ್ರ ಮೋದಿ ಭಾ‍ಷಣದ ಹೈಲೇಟ್ಸ್ ಇಲ್ಲಿದೆ ನೋಡಿ :

 • ಐತಿಹಾಸಿಕ ಕೆಂಪುಕೋಟೆಯಲ್ಲಿ ಸತತ 6ನೇ ಬಾರಿಗೆ ಧ್ವಜಾರೋಹಣ ಮಾಡಿದ ಮೋದಿ.
 • ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ ಆರಂಭ
 • ಇಂದು ರಕ್ಷಾ ಬಂಧನ ಹಾಗೂ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ
 • ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಜನರು ಪ್ರವಾಹ ಪೀಡಿತರಾಗಿದ್ದಾರೆ. ಅವರ ಸುರಕ್ಷತೆ ಹಾಗೂ ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನೆರವು ನೀಡಲಿದೆ ಎಂದು ಭರವಸೆ ನೀಡಿದರು.
 • ದೇಶದ ಅಭಿವೃದ್ಧಿಗೆ ಹಾಗೂ ರಕ್ಷಣೆಗೂ ನಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳದೆ ಕೆಲಸ ಮಾಡಲಿದೆ.-ಮೋದಿ
 • ಸಂವಿಧಾನದ 370 ಹಾಗೂ 35(ಎ) ರದ್ದತಿ ಮೂಲಕ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಕನಸು ನನಸು ಮಾಡಿದ್ದೇವೆ, ದಿಢೀರ್ ತ್ರಿವಳಿ ತಲಾಖ್ ನಿಷೇಧದ ಮೂಲಕ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಿದ್ದೇವೆ-ಮೋದಿ
 • ಎನ್‌ಐಎ ಹಾಗೂ ಯುಎಪಿಎ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ದೇಶದ ರಕ್ಷಣೆಗೆ ಇನ್ನಷ್ಟು ಬಲ ನೀಡಿದ್ದೇವೆ-ಮೋದಿ
 • 2016-19ರವರೆಗೆ ನಿಮ್ಮ ಸೇವೆ ಮಾಡಲು ಅವಕಾಶ ನೀಡಿದಿರಿ, ಆದಿವಾಸಿಗಳು, ಶೋಷಿತರನ್ನು ಮುನ್ನೆಲೆಗೆ ತರಲು ಶ್ರಮಿಸಿದ್ದೇವೆ. ಅವಶ್ಯಕತೆಗಳನ್ನು ಪೂರೈಸುವ ಅನಿವಾರ್ಯತೆ ಇತ್ತು ಈಗ ನಿಮ್ಮ ಕನಸು, ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ಸಮಯ ಬಂದಿದೆ-ಮೋದಿ
 • ಸರ್ಕಾರ ಬದಲಾಯಿಸುವುದರಿಂದ ದೇಶ ಬದಲಾಗುತ್ತದೆಯೇ ಎನ್ನುವುದು ಜನರ ಮನಸ್ಸಿನಲ್ಲಿರುವ ಗೊಂದಲವಾಗಿತ್ತು. 2019ರಲ್ಲಿ 5 ವರ್ಷದ ಕಠಿಣ ಪರಿಶ್ರಮದ ಬಳಿಕ, ದೇಶದ ಜನರ ನಿರಾಸೆ ಆಸೆಯಾಗಿ ಬದಲಾಗಿದೆ. ಪ್ರತಿ ಕ್ಷಣ ಅವರಿಗೋಸ್ಕರ ಶ್ರಮಿಸಿದ್ದೇವೆ.ನಮ್ಮಿಂದಲೂ ಬದಲಾಯಿಸಲು ಸಾಧ್ಯ.
 • ಸಮಾಧಾನ, ಸಂಕಲ್ಪ, ಸ್ವಾಭಿಮಾನ, ಸಾಮೃರ್ಥ್ಯವಿದ್ದರೆ ಸಫಲತೆಗೆ ವಿರುದ್ಧವಾಗಿ ಯಾರೂ ಬರಲು ಸಾಧ್ಯವಿಲ್ಲ-ಮೋದಿ
 • ಸಮಸ್ಯೆಯನ್ನು ಬೇರಿನಿಂದ ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ, ಮುಸ್ಲಿಂ ಮಹಿಳೆಯರ ಮೇಲೆ ತ್ರಿವಳಿ ತಲಾಖ್ ಎನ್ನುವ ತೂಗುಗತ್ತಿ ಯಾವಾಗಲೂ ಇತ್ತು, ಯಾವಾಗ ತಲಾಖ್ ನೀಡುತ್ತಾರೋ ನಮ್ಮ ಬದುಕು ಯಾವಾಗ ಬೀದಿ ಪಾಲಾಗುತ್ತದೋ ಎನ್ನುವ ಆತಂಕದಲ್ಲಿಯೇ ಮಹಿಳೆಯರು ಜೀವನ ಸಾಗಿಸುತ್ತಿದ್ದರು. ಇದು ಮುಸ್ಲಿಂ ಮಹಿಳೆಯರನ್ನು ಅಸಹಾಯಕರನ್ನಾಗಿಸಿತ್ತು. ಅವರ ಕಷ್ಟವನ್ನು ದೂರ ಮಾಡುವ ಪ್ರಯತ್ನ ಮಾಡಿದ್ದೇವೆ-ಮೋದಿ
 • ಅನುಚ್ಛೇದ 370 ಹಾಗೂ 35 ಎ ರದ್ದು ಮಾಡಲು ಕಾರಣವಿತ್ತು, 70ವರ್ಷದಲ್ಲಿ ಬಗೆಹರಿಸಲಾಗದ ಸಮಸ್ಯೆಯನ್ನು ಬಗೆ ಹರಿಸಿದ್ದೇವೆ-ಮೋದಿ
 • ಹಲವು ವರ್ಷಗಳಿಂದ ಭ್ರಷ್ಟಾಚಾರಕ್ಕೆ ಬಲಕೊಡುವ ಕೆಲಸ ಮಾಡುತ್ತಿದ್ದರು, ಅದನ್ನು ಸಂಪೂರ್ಣವಾಗಿ ಹೋಗಲಾಡಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ- ಮೋದಿ
 • ಭಾರತ ವಿಭಜನೆಯಾಗಿತ್ತು ಆಗ ಯಾರದ್ದೂ ತಪ್ಪಿರಲಿಲ್ಲ, ಪಾಕಿಸ್ತಾನದಿಂದ ಭಾರತಕ್ಕೆ ಬಂದ ಜನರಿಗೆ ಯಾವುದೇ ಹಕ್ಕು ನೀಡಿರಲಿಲ್ಲ. ನಾಗರಿಕ ಅಧಿಕಾರವೂ ಸಿಗಲಿಲ್ಲ, ಅವರ ಬಗ್ಗೆ ಚಿಂತೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ- ಮೋದಿ
 • ಜಮ್ಮು ಕಾಶ್ಮೀರದ ಜನ ಇನ್ನುಮುಂದೆ ಹಕ್ಕನ್ನು ಭಾರತ ಸರ್ಕಾರದ ಬಳಿ ಕೇಳಬಹುದಾಗಿದೆ-ಮೋದಿ
 • 370ನೇ ವಿಧಿ ಕಾಶ್ಮೀರದ ದಿಕ್ಕನ್ನೇ ಬದಲಿಸುವುದಿದ್ದರೆ ಅದನ್ನು ಏಕೆ ಶಾಶ್ವತವಾಗಿರಿಸದೆ ತಾತ್ಕಾಲಿಕ ವಿಶೇಷ ಸ್ಥಾನಮಾನ ಯಾಕೆ ನೀಡಲಾಗಿತ್ತು. ನನಗೆ ದೇಶದ ಹಿತರಕ್ಷಣೆ ಮುಖ್ಯ, ರಾಜಕೀಯ ಹಿತಾಸಕ್ತಿ ಪ್ರಮುಖವಲ್ಲ- ಮೋದಿ
 • ಈಗ ಈ ದೇಶದ ಜನರು ಹೆಮ್ಮೆಯಿಂದ ಹೇಳಬಹುದಾಗಿದೆ ಒಂದು ದೇಶ ಒಂದು ಸಂವಿಧಾನ, ಸರ್ದಾರ್ ಪಟೇಲರ ಒಂದು ಭಾರತ ಶ್ರೇಷ್ಠ ಭಾರತ ಕನಸು ನನಸುಗೊಳಿಸಿದ್ದೇವೆ-ಮೋದಿ
 • ಒಂದು ದೇಶ ಒಂದು ಮೊಬಿಲಿಟಿ ಕಾರ್ಡ್ ಘೋಷಿಸಲಾಗಿದೆ. ಒಂದು ದೇಶ ಒಂದೇ ಬಾರಿಗೆ ಚುನಾವಣೆ ಇದರ ಬಗ್ಗೆ ಚರ್ಚೆಯಾಗಿ ಸಾಕಾರಗೊಳ್ಳಬೇಕಿದೆ-ಮೋದಿ
 • ಬಡವರ ಆತ್ಮಸಮ್ಮಾನ, ಹಕ್ಕುಗಳನ್ನು ನೀಡಲು ಹೋರಾಡೋಣ, ದೇಶದ ಅರ್ಧ ಕುಟುಂಬಗಳಿಗೆ ನೀರಿನ ಸೌಕರ್ಯವಿಲ್ಲ, ಐದಾರು ಕಿಲೋಮೀಟರ್ ಸಾಗುವ ಅನಿವಾರ್ಯತೆ ಇದೆ. ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು, ಜಲ ಜೀವನ ಮಿಷನ್ ಆರಂಭಿಸಲಿದ್ದೇವೆ-ಮೋದಿ
 • ಜಲ್ ಜೀವನ್ ಮಿಷನ್ ಗಾಗಿ 3.5 ಲಕ್ಷ ಕೋಟಿಗೂ ಅಧಿಕ ಅನುದಾನ ಮೀಸಲು-ಮೋದಿ
 • ಜನಸಂಖ್ಯಾಸ್ಪೋಟ: ಶಿಶುವಿಗೆ ಜನ್ಮ ನೀಡುವ ಮೊದಲು ಯೋಚಿಸಬೇಕು, ಅದರ ಅವಶ್ಯಕತೆ ಪೂರ್ಣ ಮಾಡಲು ಸಾಧ್ಯವೋ ಇಲ್ಲವೋ, ಮಗುವಿಗೆ ಉತ್ತಮ ಶಿಕ್ಷಣವನ್ನು ನೀಡಲು ನಮ್ಮಿಂದ ಸಾಧ್ಯವೇ?
 • ಮಗು ಆರೋಗ್ಯವಾಗಿರದಿದ್ದರೆ ಕುಟುಂಬ ಹಾಗೂ ದೇಶ ಹೇಗೆ ಆರೋಗ್ಯವಾಗಿರಲು ಸಾಧ್ಯ-ಮೋದಿ
 • ಸರ್ಕಾರವು ನಿಧಾನವಾಗಿ ಜನರ ಜೀವನದಿಂದ ಹೊರ ಬರಬೇಕು, ಜನರಿಗೆ ತಮಗೆ ಬೇಕಾದಂತೆ ಜೀವನ ಮಾಡಲು ಅವಕಾಶ ಮಾಡಿಕೊಡಬೇಕು. ಸರ್ಕಾರದ ಒತ್ತಡ ಇರಬಾರದು ಆದರೆ ಸಮಸ್ಯೆ ಬಂದಾಗ ಒಬ್ಬ ಸ್ನೇಹಿತನ ರೀತಿಯಲ್ಲಿ ಸರ್ಕಾರ ಜನರ ಜೊತೆಗಿರಬೇಕು ಅದು ನನ್ನ ಆಸೆ-ಮೋದಿ
 • ಯಾರು ಏನೇ ಹೇಳಿದರೂ ಒಳ್ಳೆಯ ವಸ್ತುಗಳಿಂದಲೇ ಒಳ್ಳೆಯ ರುಚಿ ಸಿಗುತ್ತದೆ, ಆಧುನಿಕ ಮೂಲಭೂತ ಸೌಕರ್ಯಕ್ಕಾಗಿ 100 ಲಕ್ಷ ರೂ ಕೋಟಿ ರೂ ಉಳಿಕೆ ಮಾಡಲಾಗುತ್ತದೆ-ಮೋದಿ
 • ಹೈಟೆಕ್ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳನ್ನು ನಿರ್ಮಾಣ ಮಾಡಿದರೂ ಕೂಡ ಜನರ ಪ್ರಶ್ನೆ ಏನಾಗಿರುತ್ತದೆ ಎಂದರೆ ಇದು ಉತ್ತಮ ಕೆಲಸ ಹೌದು ಆದರೆ ಉತ್ತಮ ರಸ್ತೆ ಯಾವಾಗ ನಿರ್ಮಾಣ ಮಾಡುತ್ತೀರಾ, ಎಲ್ಲಿಯವರೆಗೆ ರೈಲು ವಿಸ್ತರಣೆ ಮಾಡಲಾಗುತ್ತದೆ-ಮೋದಿ
 • ಯಾರಿಗೆ ಏನು ಸಿಕ್ಕಿದೆ, ಯಾವಾಗ ಸಿಕ್ಕಿದೆ ಎನ್ನುವುದರ ಜೊತೆಗೆ ನಾವೆಲ್ಲರೂ ಸೇರಿ ದೇಶವನ್ನು ಎಲ್ಲಿಗೆ ಕೊಂಡೊಯ್ಯಬೇಕು, ದೇಶಕ್ಕಾಗಿ ಏನು ಮಾಡಬೇಕು ಎನ್ನುವ ಕನಸನ್ನು ಇಟ್ಟುಕೊಂಡು ಮುನ್ನುಗ್ಗಿ ಇದು ಈ ಸಂದರ್ಭದ ಬೇಡಿಕೆಯಾಗಿದೆ-ಮೋದಿ
 • ಮುಂದಿನ 5 ವರ್ಷದಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆನಾಗರಿಕನ ಕನಸಾಗಿದೆ ನಮ್ಮದಾಗುತ್ತದೆ.ಇದು ಪ್ರತಿಯೊಬ್ಬ ಅತಿ ಸಾಮಾನ್ಯ ಅವಶ್ಯಕತೆಗಳನ್ನು ಪೂರ್ಣಗೊಳಿಸಲು ಅವಕಾಶ ಸೃಷ್ಟಿಯಾಗುತ್ತದೆ.- ಮೋದಿ
 • ಪ್ರತಿ ಜಿಲ್ಲೆಯು ರಫ್ತು ಜಿಲ್ಲೆಯಾಗಿ ಮಾರ್ಪಾಡಾಗಬೇಕು, ಎಲ್ಲರಲ್ಲಿಯೂ ಸಾಮರ್ಥ್ಯವಿದೆ ಅದರ ಬಳಕೆಯಾಗಬೇಕು-ಮೋದಿ
 • ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಿದೆ. ಇದರಿಂದ ಜನರಿಗೆ ಕೆಲಸ ಸಿಗುತ್ತದೆ. ನಾವು ಯೋಚನೆ ಮಾಡಬೇಕು, ವಿದೇಶಿಯರು ನಮ್ಮ ದೇಶಕ್ಕೆ ಹೇಗೆ ಬರಬೇಕು,ಹೇಗೆ ಅಭಿವೃದ್ಧಿಗೊಳಿಸಿದರೆ ಅವರನ್ನು ಆಕರ್ಷಿಸಬಹುದು, ಎನ್ನುವುದರ ಬಗ್ಗೆ ಆಲೋಚಿಸಬೇಕಿದೆ- ಮೋದಿ
 • ಅಪಘಾನಿಸ್ತಾನ ನಾಲ್ಕು ದಿನಗಳ ಬಳಿಕ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಿದೆ ಅವರಿಗೆ ನನ್ನ ಶುಭಾಶಯ-ಮೋದಿ
 • ಮೂರು ಸೇನೆಗೆ ಒಂದು ಪ್ರಭಾವಿ ನೇತೃತ್ವ ನೀಡಲು ಸಿಡಿಎಸ್ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಹುದ್ದೆ ಸೃಜಿಸಲಾಗಿದೆ. ಇದರಿಂದ ಸೇನೆಗೆ ಇನ್ನಷ್ಟು ಬಲ ಸಿಗಲಿದೆ-ಮೋದಿ

 • ಅಕ್ಟೋಬರ್ 2ರಿಂದ ಪ್ಲಾಸ್ಟಿಕ್ ಮುಕ್ತ ದೇಶ ಮಾಡಲು ಸಹಕರಿಸಿ ಎಂದು ಮೋದಿ ಮನವಿ. ಪ್ರತಿ ಅಂಗಡಿಗಳ ಮುಂದೆ ದಯವಿಟ್ಟು ನಮ್ಮಿಂದ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ನಿರೀಕ್ಷೆ ಮಾಡಬೇಡಿ ಎಂದು ಫಲಕಗಳನ್ನು ಅಳವಡಿಸಿ ಎಂದು ಹೇಳಿದ್ದಾರೆ.

 • ಡಿಜಿಟಲ್ ಪೇಮೆಂಟ್‌ಗೆ ಮಾನ್ಯತೆ ನೀಡಿ,ನಗದನ್ನು ತಿರಸ್ಕರಿಸಿ-ಮೋದಿ

 • 2022ರ ಒಳಗೆ ನಮ್ಮ ಪರಿವಾರದ ಜೊತೆಗೆ ಭಾರತದ 15 ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತೇವೆ ಎನ್ನುವ ನಿರ್ಧಾರ ಮಾಡಿ. ಅಲ್ಲಿ ರಸ್ತೆಗಳು, ಹೋಟೆಲ್‌ಗಳು ಇಲ್ಲದಿದ್ದರೂ ಕೂಡ ನೀವು ಅಲ್ಲಿಗೆ ಭೇಟಿ ನೀಡಲೇಬೇಕು-ಮೋದಿ

 • ಭೂಮಿತಾಯಿಯ ಆರೋಗ್ಯದ ಬಗ್ಗೆ ಯೋಚನೆ ಮಾಡಿದ್ದೀರಾ?, ಕೆಮಿಕಲ್ ಬಳಕೆ ಮಾಡುವುದನ್ನು ಬಿಡಿ, ಭೂಮಿತಾಯಿಯನ್ನು ಹಾಳು ಮಾಡುವ ಹಕ್ಕು ನಮಗಿಲ್ಲ. ಕೆಮಿಕಲ್ ಬಳಕೆಯನ್ನು ಕಡಿಮೆ ಮಾಡುತ್ತೇವೆ ಎಂದು ನಿರ್ಧಾರ ಮಾಡಿ, ಸಾಧ್ಯವಾದರೆ ಈಗಲೇ ನಿಲ್ಲಿಸಿ ಇದು ರೈತರಿಗೆ ನನ್ನ ಮನವಿ, ರೈತರು ಈ ಮನವಿಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎನ್ನುವ ಭರವಸೆ ನನಗಿದೆ-ಮೋದಿ

 • ದೇಶದ ಪ್ರಧಾನಮಂತ್ರಿ ಕೂಡ ದೇಶದ ಒಬ್ಬ ನಾಗರಿಕ, ನಮ್ಮ ದೇಶವನ್ನು ಜನರು ಹಾಗೂ ಸರ್ಕಾರ ಸೇರಿ ಮುನ್ನಡೆಸಬೇಕಿದೆ- ಮೋದಿ

 • 100 ಲಕ್ಷ ಕಿಲೋಮೀಟರ್ ರಸ್ತೆ ನಿರ್ಮಿಸಬೇಕಿದೆ, 50 ಸಾವಿರ ಸ್ಟಾರ್ಟ್‌ ಅಪ್ ಪ್ರಾರಂಭಿಸಬೇಕಿದೆ ಹಾಗಾಗಿ ಜನರು ಸರ್ಕಾರದೊಂದಿಗೆ ಕೈಜೋಡಿಸಬೇಕಿದೆ-ಮೋದಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.