ಕೆ.ಎನ್.ಪಿ.ವಾರ್ತೆ,ನವದೆಹಲಿ,ಡಿ.11;

ಆನ್ ಲೈನ್ ನಲ್ಲಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡುವ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫರ್(ನೆಫ್ಟ್) ಸೇವೆ ಇನ್ನು ಮುಂದೆ ಗ್ರಾಹಕರಿಗೆ ದಿನಪೂರ್ತಿ ದೊರಕಲಿದೆ. ಡಿಸೆಂಬರ್ 16ರಿಂದ ಈ ಸೇವೆ ಚಾಲ್ತಿಗೆ ಬರಲಿದೆ.

ಸದ್ಯ ವಾರದ ದಿನಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮತ್ತು ಮೊದಲ ಹಾಗೂ ಮೂರನೇ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನೆಫ್ಟ್‌ ಮೂಲಕ ಹಣ ವರ್ಗಾವಣೆ ನಡೆಯುತ್ತಿದೆ. ಇದನ್ನು ಡಿಸೆಂಬರ್‌ 16, 2019 ರಿಂದ ವಿಸ್ತರಣೆ ಮಾಡಲು ನಿರ್ಧರಿಸಲಾಗಿದ್ದು 24×7 ಸೇವೆ ಲಭ್ಯವಾಗಲಿದೆ.

ಕಳೆದ ವಾರ ನಡೆದ ವಿತ್ತೀಯ ನೀತಿ ಸಮಿತಿ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಈ ಸೌಲಭ್ಯವನ್ನು ಪ್ರಕಟಿಸಿದ್ದು, ಡಿಸೆಂಬರ್ 16ರ ನಂತರ ಗ್ರಾಹಕರಿಗೆ ಈ ವ್ಯವಸ್ಥೆ ದಿನಪೂರ್ತಿ ಲಭ್ಯವಾಗಲಿದೆ.

ಆನ್ ಲೈನ್ ನಲ್ಲಿ ಗ್ರಾಹಕರಿಗೆ ಹಣ ವ್ಯವಹಾರ ಸುಲಭವಾಗಲು ಈ ವ್ಯವಸ್ಥೆಯನ್ನು ದಿನದ 24 ಗಂಟೆಯೂ ಸಿಗುವಂತೆ ಮಾಡಲಾಗುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಪ್ರಕಟಣೆ ತಿಳಿಸಿದೆ.

ಇನ್ನು ಮುಂದೆ ದಿನದ ಯಾವುದೇ ಸಮಯದಲ್ಲಿ 2 ಲಕ್ಷದವರೆಗೆ ಹಣವನ್ನು ಆನ್ ಲೈನ್ ನಲ್ಲಿ ವರ್ಗಾವಣೆ ಮಾಡಲು ಸಾಧ್ಯವಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.