ಕೆ.ಎನ್.ಪಿ.ವಾರ್ತೆ,ಜೈಪುರ,ಡಿ.17;

ಈ ಬಾರಿ ಅವಧಿಗೂ ಮುನ್ನವೇ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ 2019ರ ಹರಾಜು ಪ್ರಕ್ರಿಯೆಯನ್ನು ಬೆಂಗಳೂರಿನ ಬದಲಿಗೆ ಜೈಪುರದಲ್ಲಿ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿರ್ಧರಿಸಿದೆ.

ಈ ಮುಂಚೆ ಗೋವಾದಲ್ಲಿ ಹರಾಜು ಪ್ರಕ್ರಿಯೆ ಆಯೋಜಿಸಲು ಯತ್ನಿಸಲಾಗಿತ್ತು. ಆದರೆ, ಫ್ರಾಂಚೈಸಿಗಳ ಬೇಡಿಕೆಗೆ ಮಣಿದು ಜೈಪುರದಲ್ಲಿ ಹರಾಜು ನಡೆಸಲು ಬಿಸಿಸಿಐ ನಿರ್ಧರಿಸಿದೆ.

ಇಷ್ಟಕ್ಕೂ ಈ ಬಾರಿ ಐಪಿಎಲ್ ಎಲ್ಲಿ ನಡೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತದಲ್ಲಿ ಆ ಸಮಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವುದರಿಂದ ಈ ಬಾರಿ ಐಪಿಎಲ್ ಟೂರ್ನಮೆಂಟ್ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಮತ್ತೊಮ್ಮೆ ದಕ್ಷಿಣ ಆಫ್ರಿಕಾ ಅಥವಾ ಯುಎಇಯಲ್ಲಿ ಪಂದ್ಯಾವಳಿ ನಡೆಸುವ ಸಾಧ್ಯತೆಗಳಿವೆ.

ನಾಳೆ ಜೈಪುರದಲ್ಲಿ ನಡೆಯಲಿರುವ ಹರಾಜಿನಲ್ಲಿ ಒಟ್ಟು 346 ಕ್ರಿಕೆಟಿಗರು ಹರಾಜಿಗೆ ಒಳಪಡಲಿದ್ದಾರೆ. ಪ್ರಮುಖ 70 ಆಟಗಾರರು ಹರಾಜಾಗುತ್ತಿದ್ದು, 50 ಮಂದಿ ಭಾರತೀಯರು 20 ಮಂದಿ ವಿದೇಶಿ ಆಟಗಾರರಿದ್ದಾರೆ. 2 ಕೋಟಿ ರೂ ಮೂಲಬೆಲೆ ಎಂದು ನಿಗದಿಪಡಿಸಲಾಗಿದೆ.

ಕಳೆದ ಬಾರಿ ಭಾರತೀಯ ಆಟಗಾರರ ಪೈಕಿ ಅತ್ಯಧಿಕ ಮೊತ್ತ 11.5 ಕೋಟಿ ರೂ.ಗೆ ಹರಾಜಾಗಿದ್ದ ಜಯ್‌ದೇವ್‌ ಉನಾದ್ಕಟ್‌ ಈ ಬಾರಿ 1.5 ಕೋಟಿ ರೂ. ಮೂಲ ಬೆಲೆ ಹೊಂದಿರುವ ಆಟಗಾರರ ಪಟ್ಟಿಯಲ್ಲಿದ್ದಾರೆ. ಈ ಮಧ್ಯೆ ಯುವರಾಜ್‌ ಸಿಂಗ್‌ ಮತ್ತು ಅಕ್ಷ ರ್‌ ಪಟೇಲ್‌ 1 ಕೋಟಿ ರೂಪಾಯಿ ಮೂಲ ದರದ ಪಟ್ಟಿಗೆ ಕುಸಿದಿದ್ದಾರೆ.

ಆಟಗಾರರ ಹರಾಜು ದಿನಾಂಕ : 18 ಡಿಸೆಂಬರ್ 2018 

ಸಮಯ: ಮಧ್ಯಾಹ್ನ 3 ಗಂಟೆಗೆ

ನೇರ ಪ್ರಸಾರ : ಸ್ಟಾರ್ ಸ್ಪೋರ್ಟ್ಸ್​​​ ನೆಟ್​​ವರ್ಕ್​​​ ಮತ್ತು ಹಾಟ್ ಸ್ಟಾರ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.