ಕೆ.ಎನ್.ಪಿ.ವಾರ್ತೆ,ವಾಹನ ಪರಿಚಯ;
ರೂ. 7.75 ಲಕ್ಷಕ್ಕೆ  WR-V ಕಾರು- ಬಿಡುಗಡೆಯಯಾಗಿದೆ.
ಹೋಂಡಾ ಕ್ರಾಸ್ ಓವರ್ ಆವೃತ್ತಿಯಾಗಿರುವ WR-V ಕಾರು ಬಿಡುಗಡೆಗೊಂಡಿದ್ದು, ಹೊಸ ಕಾರಿನ ವಿಶೇಷತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಹೋಂಡಾ ತನ್ನ ಕ್ರಾಸ್ ಓವರ್ ಆವೃತ್ತಿ WR-V ಬಿಡುಗಡೆ ಮಾಡಿದೆ.

ದೆಹಲಿ ಎಕ್ಸ್‌‌ಶೋರಂ ಪ್ರಕಾರ ಆರಂಭಿಕ ಬೆಲೆ ರೂ. 7.75 ಲಕ್ಷಕ್ಕೆ ಲಭ್ಯವಿರಲಿದೆ. ನಾಲ್ಕು ವಿವಿಧ ಮಾದರಿಗಳಲ್ಲಿ ಬಿಡುಗೆಡೆಗೊಂಡಿರುವ ಹೋಂಡಾ WR-V ಕಾರು S, S(ಡೀಸೆಲ್),  VX,  VX(ಡೀಸೆಲ್) ಆವೃತ್ತಿಗಳಲ್ಲಿ ಲಭ್ಯವಿರಲಿದೆ. ಎಸ್ ಆವೃತ್ತಿಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.7.75 ಲಕ್ಷ ಹಾಗೂ S ಡೀಸೆಲ್ ಮಾದರಿಯೂ ರೂ.8.79 ಲಕ್ಷಕ್ಕೆ ಲಭ್ಯವಿದೆ.

ಇನ್ನು ವಿಎಕ್ಸ್ ಮಾದರಿಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.8.99 ಲಕ್ಷಕ್ಕೆ ಲಭ್ಯವಿದ್ದರೆ, ವಿಎಕ್ಸ್‌ ಡೀಸೆಲ್ ಮಾದರಿಯೂ ರೂ. 9.99 ಲಕ್ಷಕ್ಕೆ ದೊರೆಯಲಿದೆ. ಮೈಲೇಜ್ ಮತ್ತು ಎಂಜಿನ್ ಹೊಸದಾಗಿ ಬಿಡುಗಡೆಯಾಗಿರುವ ಹೋಂಡಾ WR-V ಮಾದರಿಯಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್ ಲಭ್ಯವಿದೆ. ಇದರ ಜೊತೆಗೆ ಕ್ರಮಬದ್ಧವಾಗಿ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದ್ದು, ಪೆಟ್ರೋಲ್ ಮಾದರಿಯೂ ಪ್ರತಿ ಲೀಟರ್‌ಗೆ 17.5 ಕಿಲೋ ಮೀಟರ್ ಹಾಗೂ ಡೀಸೆಲ್ ಮಾದರಿಯೂ ಪ್ರತಿಲೀಟರ್‌ಗೆ 25.5 ಕಿ.ಲೋ ಮೈಲೇಜ್ ನೀಡಲಿದೆ.

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು ಅದ್ಭುತ ಹೊರ ವಿನ್ಯಾಸ ಹೊಂದಿರುವ ಹೋಂಡಾ WR-V ಮಾದರಿಯೂ ಪ್ರಸ್ತುತ ಮಾದರಿಗಳಿಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆಗಳಿದ್ದು, ಎಲ್‌ಇಡಿ ಡಿಆರ್‌ಎಸ್ ಹೆಡ್‌ಲ್ಯಾಂಪ್ ವ್ಯವಸ್ಥೆ ಹೊಂದಿದೆ. ಜೊತೆಗೆ 16-ಇಂಚಿನ ಅಲಾಯ್ ವೀಲ್ಹ್‌ಗಳನ್ನು ಹೊಂದಿದ್ದು, ಎಲ್ ಮಾದರಿಯ ಟೈಲ್‌ಲೈಟ್ ವ್ಯವಸ್ಥೆ ಹೊಂದಿದೆ.

ಇನ್ನು ಒಳವಿನ್ಯಾಸ ಬಗ್ಗೆ ಹೇಳುವುದಾದರೇ 7-ಇಂಚಿನ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೈ ಮತ್ತು ನೆವಿಗೆಶನ್ ಹೊಂದಿದೆ. ವೈ-ಫೈ, 1.5 ಜಿಬಿ ಇಂಟರನಲ್ ಮೆಮೊರಿ, ಬ್ಲೂಟೂತ್ ಕನೆಕ್ಟಿವಿಟಿ, ಒಂದು HDMI ಪೋರ್ಟ್, ಎರಡು USB ಸ್ಲಾಟ್ ಮತ್ತು ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ವ್ಯವಸ್ಥೆಗಳಿವೆ.