ಕೆ.ಎನ್.ಪಿ.ವಾರ್ತೆ,ತುಮಕೂರು,ಮಾ.03;
ಸಿದ್ದಗಂಗಾ ಮಠಕ್ಕೆ ರಾಕಿಂಗ್ ಸ್ಟಾರ್ ಯಶ್ ನಿನ್ನೆ ಭೇಟಿ ನೀಡಿದ್ದಾರೆ.
ಜಿಲ್ಲೆಯ ಸಿದ್ದಗಂಗಾ ಮಠಕ್ಕೆ ರಾಕಿಂಗ್ ಸಾರ್ ಯಶ್ ಭೇಟಿ ನೀಡಿ, ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಕಾಲೇಜಿನ ಕಾರ್ಯಕ್ರಮದ ನಿಮಿತ್ಯ ಜಿಲ್ಲೆಗೆ ಆಗಮಿಸಿದ್ದ ಯಶ್ ಮಾರ್ಗ ಮಧ್ಯೆ ಮಠಕ್ಕೆ ಭೇಟಿ ನೀಡಿ, ಸ್ವಾಮೀಜಿಯ ಆಶೀರ್ವಾದ ಪಡೆದು ಕೆಲಕಾಲ ಅಲ್ಲೆ ಉಳಿದುಕೊಂಡಿದ್ದರು. ಇನ್ನು ಈ ವೇಳೆ ಮಠದ ವತಿಯಿಂದ ನಟ ಯಶ್ ಗೆ ಹಣ್ಣು ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು.
ಯಶ್ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿರುವ ಫೋಟೋವನ್ನು ಯಶ್ ಅಭಿಮಾನಿಗಳ ಆಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ.
ಸಧ್ಯ, ಸ್ಯಾಂಡಲ್’ವುಡ್’ನ ರಾಕಿಂಗ್ ಸ್ಟಾರ್ ಯಶ್ ‘ಕೆ.ಜಿ.ಎಫ್’ ಸಿನಿಮಾದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್ ಸಹ ರಿಲೀಸ್ ಆಗಿದೆ. ‘ಉಗ್ರಂ’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರವನ್ನು ನಿರ್ದೇಶಿಸಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ವರದಿ : ಮಂಜುನಾಥ.ವಿ.ಇಂದರಗಿ