ಕೆ.ಎನ್.ಪಿ.ವಾರ್ತೆ,ನವದೆಹಲಿ,ಫೆ.01;

ಶಿಕ್ಷಣ ವಲಯದಲ್ಲಿ ಡಿಜಿಟಲ್ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

2018-19ನೇ ಸಾಲಿನ ಕೇಂದ್ರ ಬಜೆಟ್‍ನಲ್ಲಿ, ಗುಣಮಟ್ಟದ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಬೋರ್ಡ್ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನರ್ಸರಿಯಿಂದ 12ನೇ ತರಗತಿವರೆಗೆ ಒಂದೇ ನಿಯಮವನ್ನು ಜಾರಿಗೊಳಿಸಲಾಗಿದ್ದು, ಬ್ಯ್ಲಾಕ್ ಬೋರ್ಡ್ಗಳನ್ನು ಡಿಜಿಟಲ್ ಬೋರ್ಡ್ ಗಳಾಗಿ ಮಾರ್ಪಡಿಸಲಾಗುವುದು. ಬುಡಕಟ್ಟು ವಿದ್ಯಾರ್ಥಿಗಳಿಗೆ ನವೋದಯ ಮಾದರಿಯಲ್ಲಿ ಏಕಲವ್ಯ ವಸತಿ ನಿಲಯವನ್ನು ತೆರೆಯಲಾಗುವುದು ಎಂದು ಜೇಟ್ಲಿ ಘೋಷಿಸಿದ್ದಾರೆ.

ಶೈಕ್ಷಣಿಕ ವಲಯ :

– ಚೆನ್ನೈ ಐಐಟಿಯಲ್ಲಿ 5ಜಿ ಅಧ್ಯಯನ ಕೇಂದ್ರ ಸ್ಥಾಪನೆ ಪ್ರಸ್ತಾವ

– ನರ್ಸರಿಯಿಂದ 12ನೇ ತರಗತಿವರೆಗೆ ಒಂದೇ ನಿಯಮ.

– ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಸೌಲಭ್ಯಕ್ಕೆ ಆದ್ಯತೆ.

– ಬಿಟೆಕ್ ವಿದ್ಯಾರ್ಥಿಗಳಿಗೆ ಪ್ರಧಾನಿ ಸಂಶೋಧನಾ ಫೆಲೋಶಿಪ್ ಘೋಷಣೆ.

– ಬುಡಕಟ್ಟು ಮಕ್ಕಳಿಗಾಗಿ ನವೋದಯ ಮಾದರಿಯಲ್ಲಿ ಏಕಲವ್ಯ ವಸತಿ ಶಾಲೆ.

– ಶಿಕ್ಷಕರಿಗೆ ಇಂಟಿಗ್ರೇಟೆಡ್ ಬಿಇಡಿ ಪ್ರಾರಂಭ.

– ವಡೋದರಾದಲ್ಲಿ ರೈಲ್ವೆ ವಿಶ್ವವಿದ್ಯಾಲಯ ನಿರ್ಮಾಣ ಘೋಷಣೆ.