ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಮಾ.06;
ಕುಷ್ಟಗಿ ತಾಲೂಕಿನ ನವಲಹಳ್ಳಿ ಗ್ರಾಮದಲ್ಲಿ ಮಹಾದಾಸೋಹಿ ಶರಣಬಸವೇಶ್ವರರ ಅದ್ಧೂರಿ ರಥೋತ್ಸವವು ಇಂದು ನೆರವೇರಿತು.
ಗುಡದೂರ ಶ್ರೀಗಳ ದಿವ್ಯಸಾನಿಧ್ಯದಲ್ಲಿ ಶರಣಬಸವೇಶ್ವರರ ರಥೋತ್ಸವವು ಜರುಗಿದ್ದು, ಪ್ರತಿ ವರ್ಷದಂತೆ ಈ ವರ್ಷವು ಸಹ ಸಾಯಂಕಾಲ 5:30 ಕ್ಕೆ ಶುರುವಾಗಿ 6:30 ರ ಸಮಯಕ್ಕೆ ಅದ್ಧೂರಿಯಾಗಿ ಸಂಪನ್ನವಾಯಿತು.
ರಥೋತ್ಸವದಲ್ಲಿ, ಮಾಜಿ ಶಾಸಕರಾದ ಕೆ.ಶರಣಪ್ಪ ವಕೀಲರು, ಲೆಕ್ಕ ಪರಿಶೋಧಕರಾದ ವಿ.ಬಿ.ಅಂಗಡಿ, ಜಿ.ಪಂ.ಸದಸ್ಯರಾದ ಹಾಗೂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಮಹೇಶ ಗ್ರಾ.ಪಂ.ಸದಸ್ಯರು, ಊರಿನ ಗುರು ಹಿರಿಯರು, ಯುವಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಮಹಾರಥೋತ್ಸವದಲ್ಲಿ ಭಾಗವಹಿಸಿದ್ದರು.
ವರದಿ : ಮೌನೇಶ್ ನವಲಹಳ್ಳಿ