ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಫೆ.10;

ರಾಜ್ಯ ಸರ್ಕಾರಿ ನೌಕರರ ಸಂಘದ ವಿರುದ್ದ ರಾಜ್ಯ ಸರ್ಕಾರಿ ಕ್ರೀಡಾ ನೌಕರರು ಧಿಕ್ಕಾರ ಕೂಗಿದರು.

ಹಾವೇರಿ ಜಿಲ್ಲೆಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಆಗಮಿಸಿದ್ದ ಕ್ರೀಡಾ ಪಟುಗಳಿಗೆ, ಎಲ್ಲಾ ಜಿಲ್ಲೆಗಳ ಕ್ರೀಡಾಪಟುಗಳಿಗೆ ನೀಡಿರುವ ಕ್ರೀಡಾ ಶೂಟ್ ಕೊಡದೆ ಇರುವ ಕಾರಣ, ಹಾವೇರಿ ಜಿಲ್ಲಾ ಸರ್ಕಾರಿ ಕ್ರೀಡಾ ನೌಕರರು ಸೇರಿದಂತೆ ವಿವಿಧ ಜಿಲ್ಲೆಯಿಂದ ಆಗಮಿಸಿದ್ದ ಕ್ರೀಡಾಪಟುಗಳು ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ  ಧಿಕ್ಕಾರವನ್ನು ಕೂಗಿದರು.

ಇಂದು ಬೆಳಿಗ್ಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸರ್ಕಾರಿ ಕ್ರೀಡಾಕೂಟ ಪ್ರಾರಂಭವಾಗುವುದಕ್ಕಿಂತ ಪೂರ್ವದಲ್ಲಿ ಈ ಗಲಾಟೆ ಪ್ರಾರಂಭವಾಯಿತು. ಸುಮಾರು 30 ಜಿಲ್ಲೆಗಳಿಂದ ಬಂದಿರುವ ಕ್ರೀಡಾ ನೌಕರರಿಗೆ ಪ್ರತಿವರ್ಷ ತಮ್ಮ ಜಿಲ್ಲೆಗಳಿಂದ ಕ್ರೀಡಾ ಶೂಟ್ ನೀಡಲಾಗುತ್ತಿತ್ತು. ಆದರೆ ಈ ವರ್ಷ ನಮಗೆ ಶೂಟ್ ನೀಡದೆ, ಹಣಲಪಟಾಯಿಸಿದ್ದಾರೆಂದು ಕ್ರೀಡಾನೌಕರರು ಆರೋಪಿಸಿದರು.

ಬೇರೆ ಜಿಲ್ಲೆಯ ಕ್ರೀಡಾ ನೌಕರರಿಗೆ ಶೂಟ್ ನೀಡಿದ್ದು, ಹಾವೇರಿ ಜಿಲ್ಲೆಯ ಕ್ರೀಡಾ ನೌಕರರಿಗೆ ನೀಡದೆ ಇರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲಾ ಕ್ರೀಡಾಪಟುಗಳಂತೆಯೇ ನಮ್ಮನ್ನು ಸಮಾನ ದೃಷ್ಠಿಯಿಂದ ನೋಡಬೇಕು ಎಂದು ವೇದಿಕೆಯ ಎದುರು ಧರಣಿ ನಡೆಸಿದರು. ಈ ವೇಳೆ ವಿವಿಧ ಜಿಲ್ಲೆಯಿಂದ ಆಗಮಿಸಿದ್ದ ಕ್ರೀಡಾ ನೌಕರರು ಧರಣಿಯಲ್ಲಿ ಭಾಗವಹಿಸಿದ್ದರು.

ವರದಿ : ಟಿ.ಗಣೇಶ್