ಕೆ.ಎನ್.ಪಿ.ವಾರ್ತೆ,ಅಗರ್ತಲ, ಶಿಲ್ಲಾಂಗ್, ಕೊಹಿಮಾ,ಮಾ.03;
ಈಶಾನ್ಯ ಭಾರತದ ಪುಟ್ಟ ರಾಜ್ಯಗಳಾದ ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಮೇಘಾಲಯದಲ್ಲಿ ಕೈ ಮೇಲುಗೈ ಸಾಧಿಸಿದ್ದು, ತ್ರಿಪುರ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ಕಮಲ ಅರಳಿದೆ.
ತ್ರಿಪುರಾದಲ್ಲಿ 25 ವರ್ಷಗಳ ಸಿಪಿಐಎಂ ಆಡಳಿತಕ್ಕೆ ತೆರೆ ಬಿದ್ದಿದ್ದು, ಬಿಜೆಪಿಗೆ ಮುನ್ನಡೆಯಾಗಿದೆ. ಮೇಘಾಲಯದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಆದರೆ ಸರ್ಕಾರ ರಚನೆಗೆ 31 ಸ್ಥಾನಗಳ ಅಗತ್ಯವಿದ್ದು, ಸರ್ಕಾರ ರಚನೆ ಕಗ್ಗಂಟಾಗಿ ಪರಿಣಮಿಸಿದೆ.
ನಾಗಾಲ್ಯಾಂಡ್ : ಬಿಜೆಪಿ ಮೈತ್ರಿಕೂಟ 31 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಪೈಕಿ, ಎನ್‌ಡಿಪಿಪಿ 20 ಸ್ಥಾನ ಹಾಗೂ ಬಿಜೆಪಿ 11 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಎನ್‌ಪಿಎಫ್ 24 ಸ್ಥಾನ ಪಡೆದುಕೊಂಡಿದೆ. ಕಾಂಗ್ರೆಸ್ ಖಾತೆ ತೆರೆದಿಲ್ಲ.
ತ್ರಿಪುರಾ : ಬಿಜೆಪಿ ಮಿತ್ರಪಕ್ಷಗಳು 41 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಸಿಪಿಐಎಂ 18 ಸ್ಥಾನಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಖಾತೆ ತೆರೆದಿಲ್ಲ.
ಮೇಘಾಲಯ : ಕಾಂಗ್ರೆಸ್ 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಎನ್‌ಪಿಪಿ – 18, ಬಿಜೆಪಿ – 04, ಇತರೆ – 18 ಸ್ಥಾನಗಳನ್ನು ಪಡೆದುಕೊಂಡಿವೆ.
ತ್ರಿಪುರ : ಒಟ್ಟು ಕ್ಷೇತ್ರಗಳು : 59
ಬಿಜೆಪಿ : 41 / ಸಿಪಿಎಂ : 18 / ಕಾಂಗ್ರೆಸ್ : 0 / ಇತರೆ : 0
ಮ್ಯಾಜಿಕ್ ನಂಬರ್ : 31
ಮೇಘಾಲಯ : ಒಟ್ಟು ಕ್ಷೇತ್ರಗಳು : 59
ಬಿಜೆಪಿ : 04 / ಎನ್ ಪಿಪಿ : 15 / ಕಾಂಗ್ರೆಸ್ : 22 / ಇತರೆ : 18
ಮ್ಯಾಜಿಕ್ ನಂಬರ್ : 31
ನಾಗಲ್ಯಾಂಡ್ : ಒಟ್ಟು ಕ್ಷೇತ್ರಗಳು 60
ಎನ್ ಡಿ ಪಿಪಿ : 31 / ಎನ್ ಪಿ ಎಫ್ : 24 / ಕಾಂಗ್ರೆಸ್ : 00 / ಇತರೆ : 05
ಮ್ಯಾಜಿಕ್ ನಂಬರ್ : 31