ಕೆ.ಎನ್.ಪಿ.ಅಡುಗೆಮನೆ;

ಕೆ.ಎನ್.ಪಿ.ಓದುಗರೇ ಇಂದು ಕೆ.ಎನ್.ಪಿ.ಅಡುಗೆಮನೆ ವಿಭಾಗದಿಂದ “ಮಾವಿನ ಹಣ್ಣಿನ ಲಾಡು” ಮಾಡುವುದನ್ನು ತಿಳಿಸಲಾಗಿದೆ. ಅಡುಗೆಯಲ್ಲಿ ಆರೋಗ್ಯ ಅಡಗಿರುತ್ತದೆ. ಉತ್ತಮ, ರುಚಿಕರ ಅಡುಗೆ ಆರೋಗ್ಯಕ್ಕೆ ಒಳ್ಳೆಯದು. 

ನೀವು ಮಾಡಿ ನೋಡಿ ಈ ರುಚಿಕರ “ಮಾವಿನ ಹಣ್ಣಿನ ಲಾಡು”

ಬೇಕಾಗುವ  ಸಾಮಗ್ರಿಗಳು:-

1..ಮಾವಿನ ಹಣ್ಣು- 1/2ಕಪ್

2.ತಂಪಾದ ಗಟ್ಟಿಹಾಲು -1/2 ಕಪ್

3.ಒಣ ಕೊಬ್ಬರಿ ತುರಿ-1ಕಪ್

4.ಮಿಶ್ರ ಡ್ರೈ ಫ್ರೂಟ್ಸ್ -1/2ಕಪ್

5.ಏಲಕ್ಕಿಪುಡಿ-1/4 ಕಪ್

ತಯಾರಿಸುವ ವಿಧಾನ :

ದಪ್ಪ ತಳದ ಪಾತ್ರೆಯನ್ನು ತೆಗೆದುಕೊಳ್ಳಿ. ಅದಕ್ಕೆ ತುರಿದಿಟ್ಟುಕೊಂಡಿರುವ ಒಣ ಕೊಬ್ಬರಿಯನ್ನು  ಹಾಕಿ, ಪರಿಮಳ ಬರುವವರೆಗೂ ಹುರಿಯಿರಿ. ಗಮನವಿರಲಿ  ಕೊಬ್ಬರಿ ಕಡುಕಂದು ಬಣ್ಣ ಬರದಂತೆ ನೋಡಿಕೊಳ್ಳಿ. ನಂತರ ಮಾವಿನ ಹಣ್ಣಿನ ತಿರುಳನ್ನು ಹಾಕಿ ಕೈಯಾಡಿಸುತ್ತಿರಿ. ಬಳಿಕ ಹಾಲು, ಡ್ರೈಫ್ರೂಟ್ಸ್ , ಚಿಟಕಿ ಏಲಕ್ಕಿ ಪುಡಿ ಹಾಕಿ ಮಿಶ್ರ ಮಾಡಿರಿ. ನೆನಪಿರಲಿ ತಳ ಹಿಡಿಯದಂತೆ ನೋಡಿಕೊಳ್ಳಬೇಕು. ಸ್ವಲ್ಪ ಸಮಯದ ನಂತರ  ಲಾಡು ಹದಕ್ಕೆ ಬಂದ ಕೂಡಲೆ ಒಲೆಯಿಂದ ಕೆಳಗಿಳಿಸಿ. ಆರಲು ಬಿಡಿ. ಕೈಯಲ್ಲಿ ಹಿಡಿಯುವಷ್ಟು  ಬಿಸಿಯಿರುವಾಗ ಸಣ್ಣ ಉಂಡೆ ಮಾಡಿ; ತೆಂಗಿನ ತುರಿ ಉದುರಿಸಿದರೆ ಮಾವಿನ ಹಣ್ಣಿನ ಲಾಡು ಸವಿಯಲು ಸಿದ್ದ….