ಕೆ.ಎನ್.ಪಿ.ಆರೋಗ್ಯ;
ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ, ಯೋಗವೂ ಅತ್ಯಗತ್ಯ.
ಪ್ರತಿ ತಂದೆತಾಯಿಯರಿಗೆ ತಮ್ಮ ಮಕ್ಕಳಿಗೆ ಅತ್ಯುತ್ತಮವಾದದ್ದನ್ನು ನೀಡಬೇಕೆಂಬ ಹಂಬಲವಿರುತ್ತದೆ. ಇದು ಶಿಕ್ಷಣವೇ ಆಗಲಿ, ಆರೋಗ್ಯ ಒಟ್ಟಾಗೆ ಎಲ್ಲಾ ವಿಷಯದಲ್ಲಿಯೂ ತಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಅತ್ಯುತ್ತಮವಾದುದನ್ನೇ ಒದಗಿಸುತ್ತಾರೆ. ಮಕ್ಕಳ ಭವಿಷ್ಯ ಮತ್ತು ಆರೋಗ್ಯ ಉತ್ತಮವಾಗಿರಬೇಕೆಂದು ಹಲವಾರು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಇದರಲ್ಲಿ ಶಿಕ್ಷಣ ಪ್ರಮುಖವಾಗಿದ್ದು ಇದಕ್ಕಾಗಿ ಊರನ್ನೇ ಬಿಟ್ಟು ಹೋಗಬೇಕಾದರೂ ಪಾಲಕರು ಹಿಂಜರಿಯುವುದಿಲ್ಲ.
ಮಕ್ಕಳ ಆರೋಗ್ಯಕ್ಕೂ ಹೆಚ್ಚಿನ ಕಾಳಜಿಯನ್ನು ನೀಡುವ ಪಾಲಕರು, ಶಿಕ್ಷಣಕ್ಕೇ ಪ್ರಥಮ ಪ್ರಾಶಸ್ತ್ಯವನ್ನು ನೀಡುವ ಕಾರಣ ಅನಿವಾರ್ಯವಾಗಿ ಶಿಕ್ಷಣದ ಹೊರೆಯನ್ನು ಪೂರೈಸಲು ಮಕ್ಕಳಿಗೆ ಅಗತ್ಯವಾದ ಆಟದ ಸಮಯವನ್ನೂ ಹೋಮ್ ವರ್ಕ್ ಎಂಬ ಭೂತದ ಕೈಗೆ ಕೊಟ್ಟು ಮಕ್ಕಳಿಗೆ ಆಟಕ್ಕೆ ಸಮಯವೇ ಇಲ್ಲದಂತಾಗಿದೆ. ಉತ್ತಮ ಆಹಾರ ಮತ್ತು ಕಡಿಮೆ ಶಾರೀರಿಕ ವ್ಯಾಯಾಮದ ಕೊರತೆಯಿಂದ ಇಂದಿನ ಮಕ್ಕಳು ಹೆಚ್ಚು ಸ್ಥೂಲಕಾಯರಾಗಿಯೂ ಅನಾರೋಗ್ಯದಿಂದ ಕೂಡಿರುವವರೂ ಆಗಿರುತ್ತಾರೆ.
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಯೋಗಾಭ್ಯಾಸ ಈ ಸಂದರ್ಭದಲ್ಲಿ ಮಕ್ಕಳಿಗೆ ಯೋಗಾಸನಗಳನ್ನು ಕಲಿಸುವುದು ಅತ್ಯಂತ ಸಮರ್ಪಕವಾದ ಆಯ್ಕೆಯಾಗಿದ್ದು ಪ್ರತಿದಿನವೂ ಮಕ್ಕಳು ಕೆಲವು ಸುಲಭ ಯೋಗಾಸನಗಳನ್ನು ಅನುಸರಿಸುವ ಮೂಲಕ ಶಾರೀರಿಕವಾಗಿಯೂ ಮಾನಸಿಕವಾಗಿಯೂ ಉತ್ತಮಗೊಳ್ಳಲು ನೆರವಾಗುತ್ತದೆ. ಯೋಗಾಸನದಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ಕಂಡುಕೊಂಡ ಬಳಿಕ ಮಕ್ಕಳಿಗೆ ಈ ತರಗತಿಗಳಿಗೆ ಸೇರಿಸಲು ನಿಮಗೆ ಯಾವುದೇ ಕಾರಣ ಉಳಿಯುವುದಿಲ್ಲ.
ಶಾರೀರಿಕ ದೃಢತೆಯನ್ನು ಉತ್ತಮಗೊಳಿಸುತ್ತದೆ :
ಶಾರೀರಿಕ ದೃಢತೆಯನ್ನು ಉತ್ತಮಗೊಳಿಸುತ್ತದೆ ಯಾವುದೇ ರೀತಿಯ ವ್ಯಾಯಾಮದಂತೆಯೇ ಯೋಗಾಸನ ಕೂಡಾ ವಯಸ್ಕರಿಗೂ, ಮಕ್ಕಳಿಗೂ ಉತ್ತಮವಾದ ವ್ಯಾಯಾಮವಾಗಿದ್ದು ಇದರಿಂದ ಉತ್ತಮ ಆರೋಗ್ಯ, ಉತ್ತಮ ದೇಹದಾರ್ಢ್ಯತೆ, ದೇಹವನ್ನು ಹೆಚ್ಚು ಬಾಗಿಸಲು ಸಾಧ್ಯವಾಗುವ ಮತ್ತು ಚಟುವಟಿಕೆಯಲ್ಲಿ ಚುರುಕು ಪಡೆಯಲು ನೆರವಾಗುತ್ತದೆ. ಚಿಕ್ಕಂದಿನಿಂದಲೇ ಯೋಗಾಭ್ಯಾಸ ನಡೆಸಿಕೊಂಡು ಬರುವ ಮೂಲಕ ಜೀವಮಾನವಿಡೀ ಉತ್ತಮ ಆರೋಗ್ಯವನ್ನು ಉಳಿಸಿಕೊಂಡು ಬರಲು ನೆರವಾಗುತ್ತದೆ.
ಏಕಾಗ್ರತೆಯನ್ನು ಹೆಚ್ಚಿಸುತ್ತದೆ :
ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಯೋಗಾಭ್ಯಾಸದಲ್ಲಿ ಕೆಲವಾರು ಧ್ಯಾನದ ತಂತ್ರಗಳಿದ್ದು ಇವುಗಳ ಮೂಲಕ ವ್ಯಕ್ತಿ ಯಾವುದೇ ಯೋಚನೆಗಳ ರಹಿತ ಅಥವಾ ಒಂದೇ ಮಂತ್ರದ ಕುರಿತು ಮನಸ್ಸನ್ನು ಕೇಂದ್ರೀಕರಿಸುವುದನ್ನು ಕಲಿಸುವ ಮೂಲಕ ಏಕಾಗ್ರತೆ, ಗಮನವನ್ನು ಒಂದೇ ಕಡೆ ಹರಿಸಲು ಮತ್ತು ಸ್ಮರಣ ಶಕ್ತಿ ಹೆಚ್ಚಲು ನೆರವಾಗುತ್ತದೆ. ಇದು ಮಕ್ಕಳು ಶಾಲಾ ಅಭ್ಯಾಸಗಳಲ್ಲಿ ಉತ್ತಮ ಸಾಧನೆ ತೋರಲು ನೆರವಾಗುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ :
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಯೋಗಾಭ್ಯಾಸದ ಹೆಚ್ಚಿನ ಎಲ್ಲಾ ಆಸನಗಳಲ್ಲಿ ಉಸಿರನ್ನು ಹೇಗೆ ಪೂರ್ಣವಾಗಿ ಎಳೆದುಕೊಳ್ಳಬೇಕು ಮತ್ತು ಬಿಡಬೇಕೆಂದು ಕಲಿಸುವುದರಿಂದ ಇದು ಮಕ್ಕಳ ಇಡೀ ದೇಹವ್ಯವಸ್ಥೆಯನ್ನು ಶುಚಿಗೊಳಿಸಲು, ಪ್ರಮುಖ ಅಂಗಗಳನ್ನು ಇನ್ನಷ್ಟು ದೃಢಗೊಳಿಸಲು ನೆರವಾಗುವುದರ ಜೊತೆಗೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಪರಿಣಾಮವಾಗಿ ಸಾಮಾನ್ಯ ತೊಂದರೆಗಳಿಂದ ಬಾಧೆ ಪಡುವುದರಿಂದ ಹೆಚ್ಚಿನ ರಕ್ಷಣೆ ಪಡೆದಂತಾಗುತ್ತದೆ.